Advertisement

Allahabad HC: ಮದುವೆಗಷ್ಟೇ ಅಲ್ಲ, ಲಿವ್‌ ಇನ್‌ ಸಂಬಂಧಕ್ಕೂ ಮತಾಂತರ ಕಾಯ್ದೆ

09:05 PM Mar 14, 2024 | Team Udayavani |

ಪ್ರಯಾಗ್‌ರಾಜ್‌:  ಮದುವೆಗಷ್ಟೇ ಅಲ್ಲ, ಲಿವ್‌ ಇನ್‌ ರಿಲೇಷನ್‌ಶಿಪ್‌ಗೂ ಮತಾಂತರ ಕಾಯ್ದೆ ಅನ್ವಯವಾಗುತ್ತದೆ ಎಂದು ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

Advertisement

ಅಂತರ್‌ ಧರ್ಮೀಯ ಜೋಡಿಯೊಂದು ಪೊಲೀಸ್‌ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ರೇಣು ಅಗರ್ವಾಲ್‌ ಅವರ ಪೀಠವು, “ಮದುವೆ ಸ್ವರೂಪದ ಯಾವುದೇ ಸಂಬಂಧಕ್ಕೂ ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ” ಎಂದು ಹೇಳಿದೆ.

ಉತ್ತರ ಪ್ರದೇಶ ಸರ್ಕಾರವು ಈ ಕಾಯ್ದೆಯನ್ನು 2021 ಮಾರ್ಚ್‌ 5ರಿಂದ ಜಾರಿಗೊಳಿಸಿದೆ. ಕಾಯ್ದೆಯ 8 ಮತ್ತು 9 ಸೆಕ್ಷನ್‌ ಅಡಿ ಅರ್ಜಿದಾರರು ಮತಾಂತರಕ್ಕೆ ಅರ್ಜಿ ಹಾಕಿಲ್ಲ. ಹಾಗಾಗಿ ಅವರ ಸಂಬಂಧವನ್ನು ಮತಾಂತರ ಕಾಯ್ದೆಯ ವಿಧಿಗಳಡಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next