Advertisement

ಮುಸ್ಲಿಮರನ್ನು ವರಿಸಿರುವ ಆರ್‌ಎಸ್‌ಎಸ್‌ ನಾಯಕರ ಮಕ್ಕಳನ್ನು ಜೈಲಿಗೆ ಹಾಕುವಿರಾ?

12:50 PM Dec 24, 2021 | Team Udayavani |

ಮೈಸೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿರುವ ಮತಾಂತರ ನಿಷೇಧ ಮಸೂದೆಯನ್ನು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ವಿರೋಧಿಸಿದ್ದಾರೆ. ಮೈಸೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್‌, ಶಾಸಕಾಂಗ ಸಮಿತಿ ಮಠಾಧೀಶರನ್ನು ಭೇಟಿ ಮಾಡಿ ಮತಾಂತರ ನಿಷೇಧ ಮಸೂದೆ ಕುರಿತು ಅಭಿ ಪ್ರಾಯ ಸಂಗ್ರಹಿಸಬೇಕು.

Advertisement

ಬಸವೇಶ್ವರರ ಮೂಲ ತತ್ವಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ವಿಧೇಯಕ ತರುವುದರಿಂದ ರಾಜ್ಯ ಅಭಿವೃದ್ಧಿಯಾಗುತ್ತದೆಯೇ? ಜಾರಿಗೆ ತರುವ ಮೊದಲು ಅಭಿಪ್ರಾಯ ಸಂಗ್ರಹಿಸಬೇಕು ಎಂದು ಆಗ್ರಹಿಸಿದರು. ಆರ್‌ಎಸ್‌ಎಸ್‌ ನಾಯಕರ ಮಕ್ಕಳು ಮುಸ್ಲಿಮರ ಮಕ್ಕಳನ್ನು ಮದುವೆಯಾಗಿದ್ದಾರೆ. ಇವರುಗಳನ್ನು ಜೈಲಿಗೆ ಹಾಕಲು ಸಾಧ್ಯವೇ? ಸಿನಿಮಾ ನಟರು ಬ್ರಾಹ್ಮಣರನ್ನು ಮದುವೆಯಾಗಿದ್ದಾರೆ. ಇವರನ್ನು ಜೈಲಿಗೆ ಹಾಕಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಭಾರತ ಬಹುತ್ವವುಳ್ಳ ದೇಶ. ಅಂಬೇಡ್ಕರ್‌ ಅವರು ಸಂವಿಧಾನ ನೀಡಿದ್ದಾರೆ. ತಮ್ಮ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಬಸವೇಶ್ವರರು ಕಟ್ಟಿದ ಮಾನವ ಧರ್ಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಒಡೆಯುವ ಕೆಲಸವಾಗಿರುವುದು ವಿಪರ್ಯಾಸ. ಇದನ್ನು ಯಾರೂ ಮೆಚ್ಚುವುದಿಲ್ಲ ಎಂದು ವಿಶ್ವನಾಥ್‌ ಹೇಳಿದರು. ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡಿರುವ ಮಠಾಧೀಶರು ಯಾರೂ ಈ ಮಸೂದೆ ಕುರಿತು ಮಾತನಾಡುತ್ತಿಲ್ಲ. ಸರ್ಕಾರದ ಅನುದಾನ ಬಾಯಿ ಮುಚ್ಚಿಸಿದೆ.

ಇದನ್ನೂ ಓದಿ: ಕುಷ್ಟಗಿ: ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕಾಂಗ್ರೆಸ್ ಸದಸ್ಯರ ಆಕ್ರೋಶ

ಅಹಿಂದ ಮಠಗಳು ಮಾತನಾಡುತ್ತಿಲ್ಲ. ನಿಮ್ಮ ಬಾಯಿ ಕಟ್ಟಿರುವುದು ಯಾರು? ಸಾಹಿತಿಗಳು, ಚಿಂತಕರು ಬಾಯಿ ಬಿಡುತ್ತಿಲ್ಲ. ಅವರು ರಾಜ್ಯೋತ್ಸವ ಪ್ರಶಸ್ತಿಗಷ್ಟೇ ಸೀಮಿತವಾಗಿದ್ದಾರೆ ಎಂದು ವಿಶ್ವನಾಥ್‌ ಟೀಕಿಸಿದರು. ಬೆಳಗಾವಿಯಲ್ಲಿ ನಡೆದಿರುವ ಎಂಇಎಸ್‌ ದಾಂಧಲೆ ಬಗ್ಗೆ ಪ್ರಸ್ತಾಪಿಸಿದ ಅವರು, ಬೆಳಗಾವಿ ಜಿಲ್ಲಾ ನಾಯಕರು ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ಅವರಿಗೆ ಕನ್ನಡಿಗರು ವೋಟು ಹಾಕಿಲ್ಲವೇ? ಮರಾಠಿ ಮತದಾರರೇ ಹೆಚ್ಚಾದರಾ? ಎಂಇಎಸ್‌ ಅನ್ನು ನಿಷೇಧಿಸಬೇಕು ಎಂದು ವಿಶ್ವ ನಾಥ್‌ ಒತ್ತಾಯಿಸಿದರು.

Advertisement

ರಂಗಾಯಣದಲ್ಲಿ ತತ್ವ ಸಿದ್ಧಾಂತ ಹೇರಬೇಡಿ

ರಂಗಾಯಣ ವಿವಾದ ಕುರಿತು ಪ್ರಸ್ತಾಪಿಸಿದ ಎಚ್‌.ವಿಶ್ವನಾಥ್‌, ತಾವು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ರಂಗಾಯಣಕ್ಕೆ ರೂಪ ಕೊಟ್ಟಿದ್ದೆ. ರಂಗಾಯಣ ನೋಂದಣಿಯಾಗಿಲ್ಲ ಎಂದು ಬಿ.ವಿ. ಕಾರಂತರು ಹೇಳಿದಾಗ ಅಂದಿನ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರೊಂದಿಗೆ ಮಾತನಾಡಿ ಕೆಲಸ ಮಾಡಿಸಿದೆವು.

ಈವರೆಗೂ ಹತ್ತು ಮಂದಿ ರಂಗಾಯಣ ನಿರ್ದೇಶಕರಾಗಿ ದ್ದಾರೆ. ಯಾರೂ ತತ್ವ , ಸಿದ್ಧಾಂತವನ್ನು ಹೇರಿರಲಿಲ್ಲ. ಅಡ್ಡಂಡ ಸಿ. ಕಾರ್ಯಪ್ಪ ಅವರು ಈಗಿನ ನಿರ್ದೇಶಕರು. ಅವರು ಪದ ಪ್ರಯೋಗ ಮಾಡುವಾಗ ಸಾಮರಸ್ಯದಿಂದ ಮಾಡಬೇಕು. ಈ ಹಿಂದಿನ ನಿರ್ದೇಶಕರು ರಂಗಾಯಣವನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next