Advertisement

ಹೊಸತನಕ್ಕೆ ಸಾಕ್ಷಿಯಾದ ಅಭಿವೃದ್ಧಿ ಸಂವಾದ

12:42 PM Jan 30, 2017 | |

ಹುಬ್ಬಳ್ಳಿ: ದೇಶಪಾಂಡೆ ಪ್ರತಿಷ್ಠಾನದ ಅಭಿವೃದ್ಧಿ ಸಂವಾದಕ್ಕೆ ರವಿವಾರ ತೆರೆ ಬಿದ್ದಿತು. ಎರಡು ದಿನ ನಡೆದ ಅಭಿವೃದ್ಧಿ ಸಂವಾದಕ್ಕೆ ದೇಶ-ವಿದೇಶಗಳ ಉದ್ಯಮ ಸಾಧಕರು, ವಿವಿಧ ಕ್ಷೇತ್ರಗಳ ತಜ್ಞರು, ನೂರಾರು ವಿದ್ಯಾರ್ಥಿ-ಯುವ ನಾಯಕರು, ಸರಕಾರಿ ಹಿರಿಯ ಅಧಿಕಾರಿಗಳು, ಅನೇಕ ಗಣ್ಯರು ಸಾಕ್ಷಿಯಾದರು. 

Advertisement

ದೇಶಪಾಂಡೆ ಪ್ರತಿಷ್ಠಾನ ಹುಬ್ಬಳ್ಳಿಯಲ್ಲಿ ಆರಂಭಗೊಂಡು 10 ವರ್ಷ ಪೂರೈಸಿದಹಿನ್ನೆಲೆಯಲ್ಲಿ ಈ ಬಾರಿಯ ಅಭಿವೃದ್ಧಿ ಸಂವಾದ ವಿಶೇಷತೆ ಪಡೆದಿತ್ತು. ಇದಕ್ಕೆ  ಪೂರಕ ಎನ್ನುವಂತೆ ಪ್ರತಿಷ್ಠಾನ ಹಲವು ಹೊಸತನಗಳಿಗೆ ನಾಂದಿಯಾಯಿತು. 

ಪ್ರತಿಷ್ಠಾನದ ಹತ್ತು ವರ್ಷದ ಸವಿನೆನಪಲ್ಲಿ ದೇಶಕ್ಕೆ ಅತಿ ದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರ ಹಾಗೂ ಇನ್‌ಕುಬೇಷನ್‌ ಕೇಂದ್ರ ಸಿದ್ಧತೆಗೊಂಡಿದ್ದರ ಬಗ್ಗೆ ಮಾಹಿತಿ ನೀಡಲಾಯಿತಲ್ಲದೆ, ಸೆಪ್ಟಂಬರ್‌ ನಲ್ಲಿ ಇನ್‌ಕುಬೇಷನ್‌ ಕೇಂದ್ರ ಕಾರ್ಯಾರಂಭವಾಗಲಿದೆ ಎಂದು ಘೋಷಿಸಲಾಯಿತು. 

ನವೋದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇನ್ಫೋಸಿಸ್‌ ಕ್ಯಾಂಪಸ್‌ ನಲ್ಲಿ ಪ್ರತ್ಯೇಕವಾಗಿ ಎರಡು ದಿನಗಳ ನವೋದ್ಯಮ ಅಭಿವೃದ್ಧಿ ಸಂವಾದ ನಡೆಸಲಾಯಿತು. ದೇಶ-ವಿದೇಶಗಳ ಅನೇಕ ನವೋದ್ಯಮಿಗಳು, ಹೂಡಿಕೆದಾರರು, ತಜ್ಞರು ಇದರಲ್ಲಿ ಭಾಗಿಯಾಗಿ ಪರಸ್ಪರ ಅನಿಸಿಕೆ ವಿನಿಮಯ ಮಾಡಿಕೊಂಡರು. 

ಪ್ರತಿ ವರ್ಷದಂತೆ ಈ ವರ್ಷವೂ ಅಭಿವೃದ್ಧಿ ಸಂವಾದ, ಕೃಷಿಮೇಳ, ಲೀಡ್‌ ಪಯಣ ಹಾಗೂ ಸಾಧಕ ಕಾಲೇಜು, ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಲೀಡ್‌ ಪ್ರಶಸ್ತಿ ಪ್ರದಾನ, ನವೋದ್ಯಮಿ ಸಮಾವೇಶ, ಶಿಕ್ಷಣ ಹಾಗೂ ಆರೋಗ್ಯ, ಸಣ್ಣ ಉದ್ಯಮದಾರರ ಸಮಾವೇಶಗಳು ನಡೆದವು. 

Advertisement

ಪ್ರಗತಿ ಸಂವಾದ: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ, ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಸಂವಾದ ಪ್ರಬುದ್ಧತೆ ಪಡೆಯುತ್ತಿದೆ. ಇದೊಂದು ಪ್ರಗತಿ ಸಂವಾದವಾಗಿದೆ. ಅಭಿವೃದ್ಧಿ ಸಂವಾದವನ್ನು ಹುಬ್ಬಳ್ಳಿಯೇ ಆಯೋಜಿಸುತ್ತಿರುವುದು ಈ ಭಾಗದ ಬಗ್ಗೆ ಅನೇಕರ ಗಮನ ಸೆಳೆಯಲು ಹಾಗೂ ಅಭಿವೃದ್ಧಿಗೆ ಪೂರಕವಾಗುವ ಉದ್ದೇಶದಿಂದಾಗಿದೆ.

ದೇಶದ ಬೇರೆ ಕಡೆ ನಡೆಸಬೇಕೆಂಬ ಚಿಂತನೆ ಇದೆಯಾದರೂ, ಸದ್ಯ ಕಂತು ಆ ನಿಟ್ಟಿನಲ್ಲಿ ಯಾವುದೇ ಕ್ರಮ ಇಲ್ಲ ಎಂದರು. ಸಂವಾದದಲ್ಲಿ ಪಾಲ್ಗೊಂಡವರುಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ, ಹಲವು ಸಲಹೆ ನೀಡಿದರು. ಜಯಶ್ರೀ ದೇಶಪಾಂಡೆ, ಡಾ| ನೀಲಂ ಮಹೇಶ್ವರಿ, ನವೀನ ಝಾ, ಸುನಿಲ ಎಸ್‌ಕೆ, ಸಿ.ಎಂ.ಪಾಟೀಲ ಸೇರಿದಂತೆ ದೇಶಪಾಂಡೆ ಪ್ರತಿಷ್ಠಾನದ ವಿವಿಧವಿಭಾಗಗಳ ಮುಖ್ಯಸ್ಥರು ಇದ್ದರು.    

Advertisement

Udayavani is now on Telegram. Click here to join our channel and stay updated with the latest news.

Next