Advertisement

ಸಹೃದಯಿ ಮಠಾಧೀಶರ ಒಕ್ಕೂಟದ ಭಕ್ತ ಸಮಾವೇಶಕ್ಕೆ ಕ್ಷಣಗಣನೆ

04:01 PM Feb 27, 2021 | Team Udayavani |

ಹುಬ್ಬಳ್ಳಿ: ಸಹೃದಯಿ ಮಠಾಧಿಧೀಶರ ಒಕ್ಕೂಟದ ಭಕ್ತ ಸಮಾವೇಶಕ್ಕೆ ಭೈರಿದೇವರಕೊಪ್ಪದ ಶಿವಾನಂದ ಮಠದ ಆವರಣ ಸಜ್ಜುಗೊಂಡಿದ್ದು, ಫೆ. 28ರಂದು ನಡೆಯುವ ಸಮಾವೇಶದಲ್ಲಿ ಸುಮಾರು 10-15 ಸಾವಿರದಷ್ಟು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

Advertisement

ಇದಕ್ಕಾಗಿ ಬೃಹತ್ತಾದ ವೇದಿಕೆ ರೂಪಿಸಲಾಗಿದೆ. ಸಹೃದಯಿ ಮಠಾಧಿಧೀಶರ ಒಕ್ಕೂಟದ ಭಕ್ತರ ಸಮಾವೇಶ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯಲ್ಲಿ ನಡೆದಿದ್ದು, ರಾಜ್ಯದ ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನಡೆದಿದ್ದು, ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿನಡೆಯುತ್ತಿದ್ದು, ಭಕ್ತ ಸಮಾವೇಶದ ನಂತರದಲ್ಲಿ ಒಕ್ಕೂಟದ ವಿವಿಧ ಮಠಾಧಿಧೀಶರ ಸಭೆ ನಡೆಯಲಿದೆ.

ಬೃಹತ್‌ ಪೆಂಡಾಲ್‌: ಹುಬ್ಬಳ್ಳಿಯ ಭೈರಿದೇವರಕೊಪ್ಪದ ಶಿವಾನಂದ ಮಠದ ಆವರಣದಲ್ಲಿ ಫೆ. 28ರಂದು ನಡೆಯುವ ಭಕ್ತ ಸಮಾವೇಶಕ್ಕೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. ಸುಮಾರು 50 ಸಾವಿರ ಚದರ ಅಡಿಜಾಗದಲ್ಲಿ ಪೆಂಡಾಲ್‌ ಹಾಕಲಾಗಿದ್ದು, ಅಂದಾಜು10-15 ಸಾವಿರ ಜನರಿಗಾಗುವಷ್ಟು ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಭೈರಿದೇವರಕೊಪ್ಪ, ಉಣಕಲ್ಲ, ಗಾಮನಗಟ್ಟಿ, ಸುತಗಟ್ಟಿ, ಶಿವಳ್ಳಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಲಾಗಿದ್ದು, 10-15 ಸಾವಿರದಷ್ಟು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ಪೂರ್ಣಕುಂಭದ ಸ್ವಾಗತ: ಸಹೃದಯಿ ಮಠಾಧಿಧೀಶರ ಒಕ್ಕೂಟದ ಭಕ್ತ ಸಮಾವೇಶ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಗದುಗಿನ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಒಕ್ಕೂಟದ ಸುಮಾರು250ಕ್ಕೂ ಹೆಚ್ಚು ಮಠಾಧಿಧೀಶರು ಪಾಲ್ಗೊಳ್ಳಲಿದ್ದಾರೆ. ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಮಠಾಧಿಧೀಶರನ್ನು ಸುಮಾರು 400-500 ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಗುತ್ತಿದ್ದು, ಗ್ರಾಮದಲ್ಲಿ ಪಾದಯಾತ್ರೆಯೊಂದಿಗೆ, ಸಮಾವೇಶ ಸ್ಥಳಕ್ಕೆ ಆಗಮಿಸಲಾಗುತ್ತದೆ. ಮಹತ್ವದ ಹಾಗೂವಿಭಿನ್ನ ರೀತಿಯ ಸಮಾವೇಶಕ್ಕೆ ಬೈರಿದೇವಕೊಪ್ಪಸಾಕ್ಷಿಯಾಗುತ್ತಿದೆ. ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶಿವಾನಂದ ಮಠದ ಭಕ್ತ ಸಮೂಹ, ಒಕ್ಕೂಟದ ಭಕ್ತರು, ಯುವಕರ ಪಡೆಯೇ ಟೊಂಕಕಟ್ಟಿ ನಿಂತಿದೆ.

 ಸಮಾವೇಶದ ಸಂಭ್ರಮ ಹೆಚ್ಚಿಸಿದ ಶತಮಾನೋತ್ಸವ :

Advertisement

ಸಹೃದಯಿ ಮಠಾಧಿಧೀಶರ ಒಕ್ಕೂಟದ ಭಕ್ತ ಸಮಾವೇಶ, ಮಠಾಧಿಧೀಶರ ಸಮಾಗಮದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವಂತೆ ಸಮಾವೇಶಕ್ಕೆ ವೇದಿಕೆಯಾದ ಭೈರಿದೇವರಕೊಪ್ಪದ ಶ್ರೀ ಶಿವಾನಂದ ಮಠ ಸ್ಥಾಪನೆಗೊಂಡು 100 ವರ್ಷಗಳಾಗಿದ್ದು, ಶ್ರೀಮಠದ ಶತಮಾನೋತ್ಸವ ಸಂಭ್ರಮವೂ ಇದೇ ಸಂದರ್ಭದಲ್ಲಿ ನಡೆಯುತ್ತಿದೆ. 1921ರಲ್ಲಿ ಸ್ಥಾಪನೆಗೊಂಡ ಶ್ರೀಮಠ ಜಗದ್ಗುರು ಶಿವಾನಂದ ಸ್ವಾಮೀಜಿ, ಜಗದ್ಗುರು ಸದಾಶಿವಾನಂದ ಸ್ವಾಮೀಜಿ, ಜಗದ್ಗುರು ನಂದೀಶ್ವರ ಸ್ವಾಮೀಜಿ ಅವರ ಪುಣ್ಯಸ್ಮರಣೆ, ಮೇನಲ್ಲಿ ಜಾತ್ರೆ ಅನೇಕ ಧಾರ್ಮಿಕ ಹಾಗೂ ಸಾಮಾಜಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಬಂದಿದ್ದು, ಇದೀಗ ಮಹತ್ವದ ಸಮಾವೇಶಕ್ಕೆ ವೇದಿಕೆಯಾಗುತ್ತಿದೆ.

ಒಕ್ಕೂಟದ ಕುರಿತು ಒಂದಿಷ್ಟು :

ಸತ್‌ ಸಮಾಜ ನಿರ್ಮಾಣ, ವಿಷಮುಕ್ತ ಕೃಷಿ, ದೇಸಿ ಗೋವುಗಳ ಸಂರಕ್ಷಣೆ-ಸಂವರ್ಧನೆ, ರಾಷ್ಟ್ರಪ್ರೇಮ, ಆರೋಗ್ಯವಂತ ಯುವಜನಾಂಗ ರೂಪಣೆ, ಜಾತ್ಯತೀತ ಭಾವನೆ ಸೇರಿದಂತೆ ವಿವಿಧ ವಿಷಯಗಳ ಆಧಾರದಲ್ಲಿ ಚಿಂತನ-ಮಂಥನಧ್ಯೇಯದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಸಹೃದಯಿ ಮಠಾಧಿಧೀಶರ ಒಕ್ಕೂಟ ಹಲವುರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಭಕ್ತರಲ್ಲಿ ಜಾಗೃತಿ ಮೂಡಿಸುವ, ಭಕ್ತರು-ಮಠಗಳನಡುವಿನ ಸಂಬಂಧ, ಪವಿತ್ರ ಭಾವನೆಗಳಕುರಿತಾಗಿ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ.ರೈತರು, ಯುವಕರಿಗೆ ಪ್ರಯೋಜನಕಾರಿಹಲವು ಪ್ರಯೋಗಾತ್ಮಕ ಕಾರ್ಯಗಳನ್ನುಕೈಗೊಳ್ಳಲು ಮಠಗಳು ಮುಂದಾಗಬೇಕು ಎಂಬ ನಿಟ್ಟಿನಲ್ಲಿಯೂ ತರಬೇತಿ, ಸಂವಾದಕೈಗೊಳ್ಳಲಾಗುತ್ತಿದೆ. ಮಠಾಧಿಧೀಶರಿಗೆ ತರಬೇತಿ, ಭಕ್ತರಿಗೆ ಮಾರ್ಗದರ್ಶನ, ಭಕ್ತರು-ಗುರುಗಳ ಸಮಾಗಮ, ಚರ್ಚೆ, ಸಂವಾದಕ್ಕೆ ಒಕ್ಕೂಟ ವೇದಿಕೆಯಾಗುತ್ತಿದೆ.

ಭಕ್ತ ಸಮಾವೇಶಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದೊಂದುಅರ್ಥಪೂರ್ಣ ಸಮಾವೇಶವಾಗಿದ್ದು, ಆ ನಿಟ್ಟಿನಲ್ಲಿಯೇ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಭಕ್ತರು-ಗುರುಗಳ ಸಮಾಗಮದ ಐತಿಹಾಸಿಕಕ್ಷಣಕ್ಕೆ ಭೈರಿದೇವರಕೊಪ್ಪ ವೇದಿಕೆಯಾಗುತ್ತಿದೆ.ಸಮಾವೇಶದಲ್ಲಿ ಯಾವುದೇ ಲೋಪವಾಗದಂತೆ, ಕೊರತೆ ತೋರದಂತೆ ಭಕ್ತ ಸಮೂಹ ಸ್ವಯಂ

ಜವಾಬ್ದಾರಿಯೊಂದಿಗೆ ತಯಾರಿ ಕಾರ್ಯದಲ್ಲಿ ತೊಡಗಿರುವುದು ಸಂತಸದ ವಿಚಾರವಾಗಿದೆ. –ಶ್ರೀ ಸದಾಶಿವಾನಂದ ಸ್ವಾಮೀಜಿ,  ಶಿವಾನಂದಮಠ, ಗದಗ

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next