Advertisement

ತಾರತಮ್ಯ ವಿರುದ್ಧ 25ಕ್ಕೆ ಸ್ಲಂ ವಾಸಿಗಳ ಸಮಾವೇಶ

03:02 PM Mar 22, 2017 | |

ದಾವಣಗೆರೆ: ಸ್ಲಂ ಜನರ ಬಗ್ಗೆ ಸಾಮಾಜಿಕ ತಾರತಮ್ಯ ವಿರೋಧಿಸಿ ಮಾ. 25 ರಂದು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಾಜ್ಯ ಸಮಾವೇಶ ನಡೆಯಲಿದೆ ಎಂದು ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ ಕುಮಾರ್‌ ತಿಳಿಸಿದ್ದಾರೆ. ರಾಜ್ಯದಲ್ಲಿರುವ 85 ಲಕ್ಷಕ್ಕೂ ಅಧಿಕ ಕೊಳಗೇರಿ ನಿವಾಸಿಗಳೊಂದಿಗೆ ಈ ಕ್ಷಣಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ತಾರತಮ್ಯ ಮಾಡುತ್ತಿವೆ.

Advertisement

ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ದಾವಣಗೆರೆಯ ಕೊಳಗೇರಿಗಳ ಅನೇಕರು ಸಮಾವೇಶದಲ್ಲಿ ಭಾಗವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸರ್ಕಾರಗಳು ಕೊಳಗೇರಿ ಸಮಸ್ಯೆ ಎಂದಾಕ್ಷಣ ವಸತಿ ಸಮಸ್ಯೆ ಎಂದೇ ತಿಳಿದುಕೊಂಡಿವೆ.

ಕೊಳಗೇರಿಯಲ್ಲಿನ ಜನರಿಗೆ ವಸತಿ ಜೊತೆ ಶುದ್ಧ ಕುಡಿಯುವ ನೀರು, ಶೌಚಾಲಯ, ಚರಂಡಿ, ಒಳ ಚರಂಡಿ ಸೌಲಭ್ಯ ಒದಗಿಸಬೇಕು ಎಂಬುದನ್ನೇ ಮರೆತಿವೆ. ಎಲ್ಲಕ್ಕಿಂತಲೂ ಅತೀ ಮುಖ್ಯವಾಗಿ ಭೂ ಒಡೆತನದ ಹಕ್ಕು ನೀಡುವ ಗೋಜಿಗೆ ಹೋಗಿಲ್ಲ. ಈಗಲೂ ಅಸಂಖ್ಯಾತ ಜನರಿಗೆ ಹಕ್ಕುಪತ್ರವನ್ನೇ ನೀಡಿಲ್ಲ ಎಂದು ದೂರಿದರು. 

ರಾಜ್ಯದ ಕೊಳಗೇರಿ ಜನರಿಗೆ ಭೂ ಒಡೆತನ, ನಿವೇಶನ ರಹಿತರ ಸಮಸ್ಯೆ ಪರಿಹಾರಕ್ಕೆ ನಗರ ಪರಮಿತಿಯಲ್ಲಿ ಭೂಮಿ ಮೀಸಲು(ಲ್ಯಾಂಡ್‌ ಬ್ಯಾಂಕ್‌), ಸರ್ಕಾರ ನೀಡಿರುವ ಭರವಸೆಯಂತೆ ಹಕ್ಕುಪತ್ರ ವಿತರಣೆ, ಅಭಿವೃದ್ಧಿಯಲ್ಲಿ ಸ್ಲಂ ನಿವಾಸಿಗಳ ಪಾಲ್ಗೊಳ್ಳುವಿಕೆಗೆ ಆದ್ಯತೆ ಒಳಗೊಂಡಂತೆ ಪ್ರಮುಖ 8 ಬೇಡಿಕೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. 

ಕೇಂದ್ರ ಸರ್ಕಾರ ಏಕರೂಪ ತೆರಿಗೆ ನೀತಿ ಹೆಸರಲ್ಲಿ ರಾಜ್ಯಗಳಲ್ಲಿ ಸಂಗ್ರಹವಾಗುವ ತೆರಿಗೆಯನ್ನು ಪಡೆದುಕೊಳ್ಳುತ್ತಿದೆ. ಹಾಗಾಗಿ ರಾಜ್ಯ ಸರ್ಕಾರಗಳು ಪ್ರತಿಯೊಂದು ಅನುದಾನಕ್ಕೆ ಕೇಂದ್ರದ ಮುಂದೆ ಕೈ ಒಡ್ಡಿ ಬೇಡುವಂತಹ ಸ್ಥಿತಿ ಇದೆ. ವಿಕೇಂದೀÅಕರಣ ಬದಲಿಗೆ ಎಲ್ಲವೂ ಕೇಂದೀಕರಣ ಆಗುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತದ್ದು.

Advertisement

ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸಮಾನ ಅನುದಾನ ನೀಡುವ ಮೂಲಕ ಕೊಳಗೇರಿ ಒಳಗೊಂಡಂತೆ ಎಲ್ಲಾ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು. ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕ ಯಲ್ಲಮ್ಮ ಹಾವೇರಿ ಮಾತನಾಡಿ, ದಾವಣಗೆರೆಯಲ್ಲಿ ಈಗಲೂ 10 ಸಾವಿರಕ್ಕೂ ಹೆಚ್ಚಿನ ಮನೆಯಲ್ಲಿ ಶೌಚಾಲಯವೇ ಇಲ್ಲ.

ಮಹಿಳೆಯರ ಗೌರವ, ಘನತೆ ಬಗ್ಗೆ ಮಾತನಾಡುವರು ಈ ಕ್ಷಣಕ್ಕೂ ಮಹಿಳೆಯರು ಶೌಚಕ್ಕೆ ಬಯಲಿಗೆ ಹೋಗುವುದನ್ನ ತಪ್ಪಿಸಲು ಸಾಧ್ಯವಾಗಿಲ್ಲ. ಬಾಷಾ ನಗರದ 2ನೇ ಮುಖ್ಯ ರಸ್ತೆಯಲ್ಲಿ ಒಳ ಚರಂಡಿ ಸಂಪರ್ಕಕ್ಕೆ ಅಲೆಯಲಾಗುತ್ತಿದೆ. ಯಾವುದೇ ಅಧಿಕಾರಿಗಳು ಗಮನವನ್ನೇ ನೀಡುತ್ತಿಲ್ಲ. 

ಕಳೆದ ಒಂದೂವರೆ ವರ್ಷದಿಂದ ಹಿಂದೆ ಬಹಿರ್ದೆಸೆಗೆ ಹೋಗಿದ್ದ ಇಬ್ಬರ ಮೇಲೆ ನಡೆದ ಅತ್ಯಾಚಾರದಿಂದ ಆಘಾತಕ್ಕೆ ಒಳಗಾಗಿ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ತಿಳಿಸಿದರು. ಜನಾಂದೋಲನದ ಜಿಲ್ಲಾ ಅಧ್ಯಕ್ಷ ಎಚ್‌.ವಿ. ಪ್ರಭುಲಿಂಗಪ್ಪ, ಕಾರ್ಯಾಧ್ಯಕ್ಷ ಕೆ.ಎನ್‌. ಹನುಮಂತಪ್ಪ, ಮುಖಂಡಜೆ. ಅಮಾನುಲ್ಲಾಖಾನ್‌, ಶಬೀºರ್‌  ಸಾಬ್‌, ಶಿಲ್ಪಾ, ಮಂಜುನಾಥ್‌ಯರಗುಂಟೆ, ರಹಮತುಲ್ಲಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next