Advertisement

ವಿದ್ಯಾರ್ಥಿಗಳು, ರೈತರಿಗೆ ಅನುಕೂಲಕರ ಸುಧಾರಣೆ

01:23 AM Jan 15, 2021 | Team Udayavani |

ಹೊಸದಿಲ್ಲಿ: ಶಿಕ್ಷಣ, ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ನಮ್ಮ ಸರಕಾರ ಕೈಗೊಂಡ “ತ್ರಿಕೂಟ ಸುಧಾರಣೆ’ಯು ದೇಶದ ವಿದ್ಯಾರ್ಥಿಗಳು, ರೈತರು ಮತ್ತು ಯುವಜನಾಂಗಕ್ಕೆ ಭಾರೀ ಅನುಕೂಲತೆಯನ್ನು ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

“ಮನೋರಮಾ ಇಯರ್‌ಬುಕ್‌’ಗಾಗಿ ಬರೆದಿರುವ ಲೇಖನ ದಲ್ಲಿ ಪ್ರಧಾನಿ ಮೋದಿ ಈ ವಿಚಾರವನ್ನು ಪ್ರಸ್ತಾವಿಸಿದ್ದಾರೆ. ಹಿಂದೆಲ್ಲ ಸುಧಾರಣ ಕ್ರಮಗಳನ್ನು “ರಾಜಕೀಯ ವೆಚ್ಚಗಳ’ನ್ನು ಅಡಗಿಸಿಡಲು ಬಳಸಲಾಗುತ್ತಿತ್ತು. ಆದರೆ ಯಾವಾಗ ದೇಶವು ಅಲ್ಪ ಗುರಿಯನ್ನು ಇಟ್ಟುಕೊಂಡಿರುತ್ತದೋ ಆಗ ಮಾತ್ರ ರಾಜಕೀಯ ಲೆಕ್ಕಾಚಾರ ಮುಖ್ಯವಾಗುತ್ತದೆ ಎಂದೂ ಬರೆ ದಿದ್ದಾರೆ. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಭಾರತವು ಜೀವರಕ್ಷಕ ಔಷಧಗಳನ್ನು ನಮ್ಮ ಜನರಿಗೂ ಕೊರತೆ ಬಾರದಂತೆ, ಜಗತ್ತಿನ ಮೂಲೆ ಮೂಲೆಗೂ ತಲುಪಿಸಿದೆ. ಆ ಮೂಲಕ ಭಾರತವು “ಜಗತ್ತಿನ ಫಾರ್ಮಸಿ’ಯಾಗಿ ಬದಲಾಗಿದೆ ಎಂದೂ ಹೇಳಿದ್ದಾರೆ.

ಸೂರ್ಯನ ಕುರಿತು ಮೋದಿ ಕವನ: ಮಕರ ಸಂಕ್ರಾಂತಿಯ ದಿನದಂದು ಪ್ರಧಾನಿ ಮೋದಿ ಅವರು “ಸೂರ್ಯನ ವೈಭವ’ವನ್ನು ಬಣ್ಣಿಸುವ ಕವನವೊಂದನ್ನು ಬರೆದಿದ್ದಾರೆ. ತಮ್ಮ ಮಾತೃಭಾಷೆ ಗುಜರಾತಿಯಲ್ಲಿ ಈ ಕವನವನ್ನು ಬರೆದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, “ಸರ್ವರ ಒಳಿತಿಗಾಗಿ ನಿರಂತರವಾಗಿ ಸಾಗುತ್ತಿರುವಾತನಿಗೆ ಗೌರವ ಸಲ್ಲಿಸುವ ದಿನವಿದು’ ಎಂದು ಹೇಳಿದ್ದಾರೆ. ಆಗಸ, ನಕ್ಷತ್ರ, ಸೂರ್ಯ, ಚಂದಿರನನ್ನು ಈ ಕವನದಲ್ಲಿ ಬಣ್ಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next