ಕಾರವಾರ : ಮಾಧ್ಯಮಗಳಿಗೆ ಬೇವ* ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ ಘಟನೆ ಸೋಮವಾರ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ನಡೆದಿದೆ.
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ನೀವು ಆಳುವ ಪಕ್ಷದ ಕಾರ್ಯಕರ್ತರು, ನೀವು ಲೀಡರ್ಸ, ನೀವು ಕೇಳಿದಿರಿ ಎಂದು ಜನ ಮತ ನೀಡಿದ್ದಾರೆ. ನನ್ನ ಮುಖ ನೋಡಿ ಮತ ನೀಡಿಲ್ಲ ಎಂದು ಅನಂತ ಕುಮಾರ್ ಹೆಗಡೆ ಆತ್ಮ ವಿಮರ್ಶೆ ಮಾಡಿಕೊಂಡಿದ್ದಾರೆ.
ನಂತರ ಮಾತು ಮುಂದುವರಿಸಿ, ಆ ಪತ್ರಿಕೆಯಲ್ಲಿ ಹಾಗೆ, ಈ ವ್ಯಾಟ್ಸಪ್ ನಲ್ಲಿ ಹೀಗೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ ಎನ್ನುತ್ತಾ ಬೇ*ರ್ಸಿ ಮಾಧ್ಯಮದವರು ಏನಾರ ಬರೆಯಲಿ, ಏನಾದರೂ ಹೇಳಲಿ ಎಂದು ಮಾಧ್ಯಮಗಳ ವಿರುದ್ಧವೇ ಆಕ್ರೋಶ ಹೊರ ಹಾಕಿದ್ದಾರೆ .
ಆನೆ ಹೊಗಿದ್ದೆ ದಾರಿ ಎಂಬಂತೆ ನಾವು ಇರಬೇಕು.ಮಾಧ್ಯಮಗಳು ಏನೂ ಬೆಕಾದ್ರೂ ಬರೆದುಕೊಳ್ಳಲಿ,ಬೇಕಾದ್ರೆ ಬೇ*ರ್ಸಿಗಳು ಏನೂ ಬೇಕಾದ್ರೂ ಒದರಾಡಲಿ. ಸಾಮಾಜಿಕ ಜಾಲತಾಣದಲ್ಲಿ ಬೇಕಾದ್ದ ಚರ್ಚೆ ಆಗಲಿ. ನೀವೆಲ್ಲ ಇದಕ್ಕೆ ವಿಚಲಿತರಾಗಬಾರದೆಂದು ಅನಂತ ಕುಮಾರ ಹೆಗಡೆ ನಾಲಗೆ ಹರಿಯಬಿಟ್ಟಿದ್ದಾರೆ.
ಆನೆ ನಡೆದಿದ್ದೆ ದಾರಿ ಎಂಬಂತೆ ನಾವು ನಡಿಯಬೇಕು ಕಣ್ರಿ.ಆನೆ ನಡಿತಾ ಇದ್ರೆ ನಾಯಿಗಳು ಬೋಗಳತಾ ಇರ್ತವೆ.ಆನೆ ನಡಿತಾ ಇದ್ದರೆ ಯಾವಾಗಲಾದರೂ ನಾಯಿ ಕಡೆ ಗಮನ ಕೊಡುತ್ತಾ?ನಾಯಿಗಳಿಗೂ ಗೊತ್ತು , ನಾವು ಎಷ್ಟೆ ಬೊಗಳಿದ್ರು ಆನೆಗೆ ಏನು ಮಾಡೊಕೆ ಆಗಲ್ಲ ಅಂತಾ.ನಾಯಿಗಳು ಬೋಗಳದೆ ಇದ್ರೆ ಆನೆ ಗಾಂಭೀರ್ಯಕ್ಕೆ ಬೆಲೆ ಇರಲ್ಲ ಎಂದು ಹೆಗಡೆ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ.