Advertisement

ಚಿಕ್ಕಮಗಳೂರು: ದಶಕಗಳ ವಿವಾದಿತ ಸಮಾಧಿಯ ಶಿಲುಬೆ ಸಾಮರಸ್ಯದ ಮೂಲಕ ತೆರವು

12:51 PM Apr 06, 2022 | Team Udayavani |

ಚಿಕ್ಕಮಗಳೂರು :  ರಾಜ್ಯದಲ್ಲಿ ಧರ್ಮದ ಕಿಚ್ಚು ಹೆಚ್ಚುತ್ತಿರುವ ಬೆನ್ನಲ್ಲೇ ಕಾಫಿನಾಡಲ್ಲಿ ಸಾಮರಸ್ಯದ ಹೆಜ್ಜೆಯಿಟ್ಟ ಘಟನೆಯೊಂದು ನಡೆದಿದೆ.

Advertisement

ಚಿಕ್ಕಮಗಳೂರು ಜಿಲ್ಲೆಯ  ಮೂಡಿಗೆರೆ ತಾಲೂಕಿನಲ್ಲಿ ಸ್ಯಾಮ್ಯುಯಲ್ ಸುಸ್ಮಾನ್ ಎಂಬ ವ್ಯಕ್ತಿಯ ಸಮಾಧಿಯನ್ನು ಬಸ್ ನಿಲ್ದಾಣ ಮುಂಭಾಗ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಇದು ಆ ಭಾಗದ ಜನರಲ್ಲಿ ವಿವಾದವನ್ನು ಹುಟ್ಟಿಸಿ, ಹಲವು ಬಾರಿ ಸಮಾಧಿಯನ್ನು ತೆರವುಗೊಳಿಸುವಾಗ ಪ್ರತಿರೋಧ ವ್ಯಕ್ತವಾಗುತ್ತಿತ್ತು.

ದಶಕಗಳ ವಿವಾದಿತ ಸ್ಥಳವಾಗಿದ್ದ ಸಮಾಧಿಯನ್ನು  ಪಟ್ಟಣ ಪಂಚಾಯಿತ್ ಅಭಿವೃದ್ಧಿ ಕಾರ್ಯಕ್ಕಾಗಿ ತೆರವುಗೊಳಿಸಲು ಮುಂದಾಗುವ ವೇಳೆ ಕ್ರೈಸ್ತ ಸಮುದಾಯದ ಜನರು ಸಾಥ್ ನೀಡಿ, ವಿವಾದಿತ ಸಮಾಧಿಯ ಶಿಲುಬೆಯನ್ನು ತೆರವುಗೊಳಿಸಿದ್ದಾರೆ.

ಶಿಲುಬೆಯನ್ನು ತೆರವುಗೊಳಿಸಿ, ಕ್ರೈಸ್ತ ಸಮುದಾಯದ ಪ್ರಮುಖರು ಸ್ಮಶಾನದಲ್ಲಿ ಪೂಜಾ ವಿಧಿ ವಿಧಾನದ ಮೂಲಕ ಶಿಲುಬೆಗೆ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next