Advertisement

ಎಲ್ಲರೂ ಆರಿಸಿ‌ ಉಳಿದ ಕಪ್ಪು ಕನ್ಯೆಯರು ರೈತರಿಗೆ: ಸಂಗಮೇಶ ದುಂದೂರು ವಿವಾದಾತ್ಮಕ ಹೇಳಿಕೆ

02:10 PM Mar 04, 2022 | Team Udayavani |

ಗದಗ: ಸುಂದರವಾದ ಕನ್ಯೆಯರು ಸರಕಾರಿ ನೌಕರರಿಗೆ ಒಲಿದರೆ, ಕಡುಕಪ್ಪಿನ ಯುವತಿಯರು ರೈತರ ಪಾಲಿಗೆ ಎಂದು ಗದಗ- ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಸರಕಾರಿ ನೌಕರರ ಸಂಘದಿಂದ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಡದ ಸರಕಾರಿ  ನೌಕರರ ಕ್ರೀಡಾಕೂಟದ ಉದ್ಘಾಟನಾ‌ ಸಮಾರಂಭದಲ್ಲಿ ಅವರು ಮುಖ್ಯಾತಿಥಿಯಾಗಿ ಮಾತನಾಡಿ, ಉದ್ಯೋಗ ಭದ್ರತೆ, ಉತ್ತಮ‌ ಸಂಬಳ ಇರುವ ಸರಕಾರಿ ನೌಕರರಿಗೆ ಕನ್ಯೆ‌ನೀಡಲು ಜನರು ದುಂಬಾಲು ಬಿದ್ದಿರುತ್ತಾರೆ. ಹೀಗಾಗಿ ತೆಳ್ಳೆಗೆ, ಬೆಳ್ಳಗೆ ಇರುವ ಸುಂದರ ಕನ್ಯೆಯರು ಸರಕಾರಿ‌ ನೌಕರರಿಗೇ ಒಲಿಯುತ್ತಾರೆ. ಸಾಧಾರಣ‌ ಕಪ್ಪು ಇರುವ ಹೆಣ್ಣು ಮಕ್ಕಳನ್ನು ನಮ್ಮಂತಹ ಉದ್ಯಮಿಗಳಿಗೆ ನೀಡಲಾಗುತ್ತದೆ. ನಂತರ ಕೊನೆಯದಾಗಿ ಎಲ್ಲರೂ ಆರಿಸಿ ಬಿಟ್ಟ ಕಡುಕಪ್ಪು ಮೈಬಣ್ಣದ ಯುವತಿಯರು ರೈತರಿಗೆ ಸಿಗುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ರೈತರಿಗೆ ಅಗೌರವ ತೋರಿದರು.

ಇದನ್ನೂ ಓದಿ:ಗಾಂಜಾದಿಂದ ಚಾಕಲೇಟ್ ತಯಾರಿಸಿ ಮಾರುತ್ತಿದ್ದ ಒಡಿಶಾ ಮೂಲದ ಇಬ್ಬರ ಬಂಧನ, ಸೊತ್ತು ವಶ

ವೇದಿಕೆ ಮೇಲೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಜಿ.ಪಂ.ಸಿಇಒ ಭರತ್ ಎಸ್., ನಗರಸಭೆ ಅಧ್ಯಕ್ಷೆ ಉಷಾ‌ಮಹೇಶ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next