Advertisement
ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಯನ್ನು ಆಯಾ ಶಾಲೆಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗುತ್ತದೆ. ಯಾರು ಬೇಕಾದರೂ ನಿಗದಿತ ಸಂಖ್ಯೆಗೆ ಡಯಲ್ ಮಾಡಿ ಶಾಲೆಗೆ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದಾರೋ ಇಲ್ಲವೋ ಎನ್ನುವುದನ್ನು ಖಾತರಿಪಡಿಸಿಕೊಳ್ಳಬಹುದು. ಈ ಅಂಶವನ್ನು ಭೋಪಾಲ್‌ನಲ್ಲಿರುವ ನಿಯಂತ್ರಣ ಕೊಠಡಿಗೆ ಹೇಳಬಹುದು ಎಂದು ಮಧ್ಯಪ್ರದೇಶ ಶಿಕ್ಷಣ ಸಚಿವ ವಿಜಯ ಶಾ ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “12ನೇ ತರಗತಿಯಲ್ಲಿ ಶೇ.75ಕ್ಕೂ ಹೆಚ್ಚು ಅಂಕ ಗಳಿಸುವ, ಕುಟುಂಬದ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು “ಮುಖ್ಯಮಂತ್ರಿ ಮೇಧಾವಿ ಚಾತ್ರ ಪ್ರೋತ್ಸಾಹನ್ ಯೋಜನೆ’ಯಡಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ,” ಎಂದು ಹೇಳಿದ್ದಾರೆ. Advertisement
ಶಿಕ್ಷಕರ ಹಾಜರಿ ಮೇಲೆ ನಿಯಂತ್ರಣ ಕೊಠಡಿ ನಿಗಾ
02:09 AM Mar 31, 2017 | Karthik A |
Advertisement
Udayavani is now on Telegram. Click here to join our channel and stay updated with the latest news.