Advertisement

ಗಾರ್ಬೇಜ್ ಮಾಫಿಯಾಗೆ ಕಂಟ್ರೋಲ್ ರೊಂ

12:15 PM Nov 30, 2019 | Suhan S |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಸದ ಮಾಫಿಯಾ ನಿಯಂತ್ರಿಸಲು ಬಿಬಿಎಂಪಿ ಮಾಸ್ಟರ್‌ ಪ್ಲಾನ್‌ ರೂಪಿಸಿದೆ. ಸ್ಮಾರ್ಟ್‌ ಸಿಟಿ ಯೋಜನೆ ಅಡಿ ನಗರದ ಕಸ ನಿರ್ವಹಣೆಗೆ ಕಂಟ್ರೋಲ್‌ ರೂಂ ಸಿದ್ದಪಡಿಸುತ್ತಿದೆ. ಟ್ರಾಫಿಕ್‌ ಕಂಟ್ರೋಲ್‌ ರೂಂನಂತೆ ಕಸ ನಿರ್ವಹಣೆ ನಿಯಂತ್ರಣ ಕೊಠಡಿ ಸ್ಥಾಪಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸ್ಮಾರ್ಟ್‌ ಸಿಟಿ ಅನುದಾನದಲ್ಲಿ 25ಕೋಟಿ ರೂ. ಮೀಸಲಿಡಲಾಗಿದೆ. ಈ ಯೋಜನೆಗೆ ತಗುಲುವ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಸ್ಮಾರ್ಟ್‌ ಸಿಟಿ ಯೋಜನೆ ಮೂಮಕ ನೀಡಲಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

ನಗರದಲ್ಲಿ ಕಸ ನಿರ್ವಹಣೆ ಹೆಸರಲ್ಲಿ ಸಾವಿರಾರು ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ಹೀಗಿದ್ದರೂ, ನಗರದ ಹಲವು ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಇನ್ನು ಸಾರ್ವಜನಿಕ ಪ್ರದೇಶಗಳಾದಪಾರ್ಕ್‌, ಆಟದ ಮೈದಾನ, ಸರ್ಕಾರಿ ಶಾಲೆ, ದೇವಸ್ಥಾನಗಳ ಆವರಣ, ಹಲವು ರಸ್ತೆಗಳ ಪಕ್ಕದಲ್ಲಿ ಕಸ ವಿಂಗಡಣೆ ಪ್ರಕ್ರಿಯೆ ನಡೆಯುತ್ತಿರುತ್ತದೆ.

ವಾರ್ಡ್‌ಗಳಲ್ಲಿ ಕಸ ಸಾಗಣೆಗೆ ಬಳಸುವ ವಾಹನಗಳ ಸಂಖ್ಯೆಯನ್ನು ತಪ್ಪಾಗಿ ನೀಡಲಾಗುತ್ತಿದೆ. ಈ ವಾಹನಗಳು ಪ್ರತಿನಿತ್ಯ ಕಸ ಸಂಗ್ರಹಕ್ಕೆ ಮನೆ ಮನೆಗೆ ತೆರಳುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಕೇಳಿ ಬಂದಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗಾರ್ಬೇಜ್ ಕಂಟ್ರೋಲ್‌ ರೂಂ ಸ್ಥಾಪನೆ ಮಾಡಲಾಗುತ್ತಿದೆ.

ಯೋಜನೆಯಲ್ಲೇನಿದೆ?: ಹಾಲಿ ಇರುವ 4000 ಆಟೋ ಮತ್ತು 500 ಕಾಂಪಾಕ್ಟರ್‌ಗಳಿಗೆ ಮೊದಲು ಜಿಪಿಎಸ್‌ ಅಳವಡಿಸಲಾಗುತ್ತದೆ. ಕಸ ಸಂಗ್ರಹಿಸಲು ಆಟೋಗಳು ಪ್ರತಿ ಮನೆ ಮತ್ತು ಹೋಟೆಲ್‌ಗ‌ಳ ಬಳಿ ಹೋಗುತ್ತಿರುವುದನ್ನು ಮತ್ತು ಎಷ್ಟು ಕಿ.ಮೀ.ಕ್ರಮಿಸುತ್ತಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಜಿಪಿಎಸ್‌ ಅಳವಡಿಸಲಾಗುತ್ತಿದೆ.

ಬಳಿಕ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 10 ಸಂಸ್ಕರಣ ಸ್ಥಳಗಳಲ್ಲಿ ವೇ ಬ್ರಿಡ್ಜ್ಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ವಾರ್ಡ್‌ಗಳಲ್ಲಿ ಸಂಗ್ರಹಿಸಿದ ಕಸದ ತೂಕವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಪ್ರತಿ ಕಸ ವಿಂಗಡನೆ ಘಟಕ ಮತ್ತು ಪ್ರೊಸೆಸಿಂಗ್‌ ಯುನಿಟ್‌ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ವಸಂತನಗರದ ಅಂಬೇಡ್ಕರ್‌ ಭವನ ಹಿಂಭಾಗದಲ್ಲಿ ಪ್ರತ್ಯೇಕ ಕಚೇರಿ ಸಿದ್ದವಾಗುತ್ತಿದೆ. ಈ ಮೂಲಕ ಕಸ ನಿರ್ವಹಣೆಯ ಪ್ರತಿ ಹೆಜ್ಜೆಯ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ಸಿದ್ದವಾಗುತ್ತಿದೆ.

Advertisement

 

-ಲೊಕೇಶ್ ರಾಮ್

Advertisement

Udayavani is now on Telegram. Click here to join our channel and stay updated with the latest news.

Next