Advertisement
ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕಕ್ಕೆ ಈ ಕುರಿತು ನಿರ್ದೇಶನ ನೀಡಿರುವ ಕೇಂದ್ರವು, ಸೋಂಕು ವ್ಯಾಪಿಸು ವಿಕೆಯ ಸರಪಳಿಯನ್ನು ಮುರಿಯಲು ಮತ್ತು ಮರಣ ಪ್ರಮಾಣ ಶೇ. 1ಕ್ಕಿಂತ ಕೆಳಗಿರುವಂತೆ ನೋಡಿಕೊಳ್ಳಲು ಕಠಿನ ಕ್ರಮಗಳನ್ನು ಜಾರಿ ಮಾಡುವಂತೆ ಸೂಚಿಸಿದೆ. ಶುಕ್ರವಾರದಿಂದ ಶನಿವಾರದ ನಡುವಣ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಪತ್ತೆಯಾಗಿರುವ ಸೋಂಕುಪೀಡಿತರ ಪೈಕಿ ಶೇ. 46ರಷ್ಟು ಮಂದಿ ಈ ಮೂರು ರಾಜ್ಯಗಳಿಗೆ ಸೇರಿದ್ದು, ಶೇ. 52ರಷ್ಟು ಸಾವುಗಳು ಕೂಡ ಈ ರಾಜ್ಯಗಳಲ್ಲೇ ಸಂಭವಿಸಿವೆ.
ಪರೀಕ್ಷೆ ಹೆಚ್ಚಳ, ಮರಣ ತಗ್ಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ವೈದ್ಯಕೀಯ ನಿರ್ವಹಣೆ, ಸೋಂಕುಪೀಡಿತರ ಮೇಲೆ ನಿಗಾ, ಸೂಕ್ತ ಚಿಕಿತ್ಸೆ, ಸೋಂಕುಪೀಡಿತರ ಪತ್ತೆ ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಕೆಲವು ಜಿಲ್ಲೆಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗಿ ಬದಲಾಗಿರುವ ಕಾರಣ ಅಲ್ಲಿ ಹೆಚ್ಚಿನ ಗಮನ ವಹಿಸುವಂತೆ ಸೂಚಿಸಲಾಗಿದೆ.