Advertisement

“ಸಹಕಾರ ಸಂಘಗಳಿಂದ ಸಮಾಜದ ಅಭ್ಯುದಯಕ್ಕೆ ಕೊಡುಗೆ’

12:23 PM May 29, 2018 | Team Udayavani |

ಉಡುಪಿ: ಸಹಕಾರ ಸಂಸ್ಥೆಗಳು ಸಾಮಾನ್ಯರಿಗೆ ಸಾಲ ನೀಡುವ ಮೂಲಕ ಸಮಾಜದ ಅಭ್ಯುದಯಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ ಎಂದು ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ರವಿವಾರ ರೋಜರಿ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿಯ ಸಂತೆಕಟ್ಟೆ ಕಲ್ಯಾಣಪುರ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಡ್ಡಿಯಲ್ಲಿ ಸಾಮಾನ್ಯ ಜನರಿಗೆ ಸಾಲ ನೀಡಬೇಕು. ಲಾಭಾಂಶದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಅಭಿವೃದ್ಧಿಗಾಗಿ ನೀಡಬೇಕು. ಸಹಕಾರ ಸಂಘ ಗಳ ಬೆಳವಣಿಗೆಗೆ ಉತ್ತಮ ಠೇವಣಿ ದಾರರಂತೆ ಸಕಾಲದಲ್ಲಿ ಮರುಪಾವತಿ ಸುವ ಪ್ರಾಮಾಣಿಕ ಸಾಲಗಾರರು ಕೂಡ ಅಗತ್ಯ ಎಂದವರು ಹೇಳಿದರು.
ಸಂತೆಕಟ್ಟೆ ಮೌಂಟ್‌ ರೋಜರಿ ಚರ್ಚ್‌ ಧರ್ಮಗುರು ವಂ| ಲೆಸ್ಲಿ ಡಿ’ಸೋಜಾ ಭದ್ರತಾ ಕೋಶ ಉದ್ಘಾಟಿಸಿದರು.

ಸಲಹೆಗಾರ ವಂ| ಅನಿಲ್‌ ಡಿ’ಸೋಜಾ ಠೇವಣಿ ಪತ್ರ ವಿತರಿಸಿದರು. ಭಟ್ಕಳದ ಡಿವೈಎಸ್‌ಪಿ ವೆಲೆಂಟೈನ್‌ ಡಿ’ಸೋಜಾ ಗಣಕಯಂತ್ರ ಉದ್ಘಾಟಿಸಿದರು. ರೋಜರಿ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಜೋನ್ಸನ್‌ ಡಿ’ಅಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು.

ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ಕೆಥೋಲಿಕ್‌ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಅಲ್ವಿನ್‌ ಕ್ವಾಡ್ರಸ್‌, ಸೊಸೈಟಿಯ ಉಪಾಧ್ಯಕ್ಷ ಜೋನ್‌ ಮಿನೇಜಸ್‌, ಸಲಹೆಗಾರ ಬ್ಯಾಪ್ಟಿಸ್ಟ್‌ ಡಾಯಸ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಸ್ಟಲ್‌ ಡಿ’ಸೋಜಾ ಉಪಸ್ಥಿತರಿದ್ದರು. ನಿರ್ದೇಶಕ ಮಂಡಳಿಯ ಜೆರಾಲ್ಡ್‌ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು. ಡಾಯ್ನಾ ಡಿ’ಅಲ್ಮೇಡಾ ವಂದಿಸಿದರು.

Advertisement

1.19 ಲ.ರೂ.ಗಳಿಂದ  53 ಕೋ.ರೂ.ಗೆ ಏರಿಕೆ
ಕುಂದಾಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ರೋಜರಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ 1992ರಲ್ಲಿ 1.19 ಲ.ರೂ. ಠೇವಣಿಯೊಂದಿಗೆ ಆರಂಭಗೊಂಡಿತು. ಕಳೆದ ವರ್ಷ 25 ವರ್ಷದ ಸಂಭ್ರಮ ಆಚರಿಸಿತು. ಪ್ರಸ್ತುತ ಠೇವಣಿ 53 ಕೋ.ರೂ.ಗಳಿಗೆ ತಲುಪಿದೆ. 2017-18ರಲ್ಲಿ 253 ಕೋ.ರೂ. ವ್ಯವಹಾರ ನಡೆಸಿದೆ. ಈಗ ಉಡುಪಿಯಲ್ಲಿಯೂ ಶಾಖೆ ಆರಂಭಗೊಂಡಂತಾಗಿದೆ. ಇದು 7ನೇ ಶಾಖೆ ಎಂದು ಸೊಸೈಟಿ ಅಧ್ಯಕ್ಷ ಜೋನ್ಸನ್‌ ಡಿ’ಅಲ್ಮೇಡಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next