Advertisement
ಹಾನಗಲ್ಲ ಬಳಿಯ ಮಲ್ಲಿಗಾರ ಶ್ರೀ ಸಿದ್ಧರಾಮೇಶ್ವರ ಮಂದಿರದ ಸಭಾಭವನದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ತಾಲೂಕು ಶರಣ ಸಾಹಿತ್ಯ ಸಮ್ಮೇಳನವನದ ಸಾನಿಧ್ಯವಹಿಸಿ ಮಾತನಾಡಿದ ಅವರು, ಶರಣ ಬದುಕು ಆದರ್ಶಪ್ರಾಯವಾದುದು. ಅವರ ಚಿಂತನೆಗಳು ಸದಾಕಾಲಕ್ಕೂ ಮಾರ್ಗದರ್ಶನ ನೀಡುವಂತಹವುಗಳು. ವಚನ ಸಾಹಿತ್ಯ ಈ ನಾಡಿದ ಅದ್ಭುತ ಕೊಡುಗೆಯಾಗಿದೆ. ಶರಣರು ದಾಸರು ಸಂತರ ಅನುಭವದ ನುಡಿಗಳು ನಮಗೆ ಪ್ರೇರಣಾದಾಯಕವಾಗಿವೆ. ಶರಣ ಸಾಹಿತ್ಯ ಪರಿಷತ್ತು ಅಭಿನಂದನೀಯ ಕಾರ್ಯ ಮಾಡುತ್ತಿದ್ದು ನಮ್ಮೆಲ್ಲರ ಬೆಂಬಲ ನಿರಂತರವಾಗಿದೆ ಎಂದರು.
Related Articles
Advertisement
ಅಕ್ಕಿಆಲೂರು ಚನ್ನವೀರೇಶ್ವರಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂಥಿಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಎಂ.ಪಾಟೀಲ, ಗಣ್ಯರಾದ ಎಚ್.ಡಬ್ಲೂ. ರವಿಕುಮಾರ, ಶಂಕ್ರಣ್ಣ ಹಾದಿಮನಿ, ಇಷ್ಟಲಿಂಗ ಸಾಲವಟಗಿ, ಬಿ.ಶಿವಬಸಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ಕಾರ್ಯದರ್ಶಿ ನಿರಂಜನ ಗುಡಿ, ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಅಧ್ಯಕ್ಷ ಸಿ.ಮಂಜುನಾಥ, ಕದಳಿ ವೇದಿಕೆ ಗೌರವಾಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಅಧ್ಯಕ್ಷೆ ಅಕ್ಕಮ್ಮ ಕುಂಬಾರಿ, ಉಪಾಧ್ಯಕ್ಷ ಮಧುಮತಿ ಪೂಜಾರ ವೇದಿಕೆಯಲ್ಲಿದ್ದರು.