Advertisement

“ಸಹಕಾರಿ ಬ್ಯಾಂಕ್‌ಗಳ ಕೊಡುಗೆ ಅಪಾರ’

01:00 AM Mar 20, 2019 | Harsha Rao |

ಬ್ರಹ್ಮಾವರ: ಭಾರತದ ಆರ್ಥಿಕಾಭಿವೃದ್ಧಿಗೆ ಬ್ಯಾಂಕ್‌ಗಳು ಮಹತ್ತರವಾದ ಕೊಡುಗೆ ನೀಡುತ್ತಿವೆ. ಜತೆಗೆ ಸ್ಥಳೀಯ ಹಾಗೂ ಗ್ರಾಮೀಣ ಮಟ್ಟದಲ್ಲಿ ಸಹಕಾರಿ ಬ್ಯಾಂಕ್‌ಗಳು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಂತಾರಾಷ್ಟ್ರೀಯ ಗುಣಮಟ್ಟ ಬೆಳೆಸಿಕೊಳ್ಳಬೇಕಾಗಿದೆ ಎಂದು ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ದಿನೇಶ್‌ ಕಿಣಿ ಹೇಳಿದರು.

Advertisement

ಅವರು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನಲ್ಲಿ ಆಯೋಜಿಸಲಾದ “ಜಾಗತೀಕರಣ ಮತ್ತು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಭಾರತೀಯ ಬ್ಯಾಂಕ್‌ಗಳು’ ಎನ್ನುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ  ನಡೆದ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು.  ಸರಕಾರದ  ಆರ್ಥಿಕ ಧೋರಣೆ ಸಹಕಾರಿ ಬ್ಯಾಂಕ್‌ಗಳ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದರು. 

ಮಾನವಿಕ ಸಂಘದ ಮುಖ್ಯಸ್ಥ  ಪ್ರೊ| ಮೆಲ್ವಿನ್‌ ಸಿ. ರೆಗೂ ಅಧ್ಯಕ್ಷತೆ ವಹಿಸಿದ್ದರು. ನ್ಯಾಕ್‌ ಸಂಯೋಜಕ ಡಾ| ಜಯರಾಮ ಶೆಟ್ಟಿಗಾರ್‌ ಸ್ವಾಗತಿಸಿ, ವಿಚಾರ ಸಂಕಿರಣ ಆಯೋಜಕರಾದ ಪ್ರೊ|  ಅನ್ನಮ್ಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next