Advertisement
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ| ಪರಮೇಶ್ವರ್, ಇಂಧನ ಸಚಿವ ಕೆ.ಜೆ. ಜಾರ್ಜ್, ಅರಣ್ಯ ಸಚಿವ ಈಶ್ವರ ಖಂಡ್ರೆ ಸಹಿತ ಕಾಂಗ್ರೆಸ್ನ ಹಲವು ನಾಯಕರು ಪ್ರಿಯಾಂಕ್ ಖರ್ಗೆ ಪರ ನಿಂತಿದ್ದಾರೆ. ಸ್ವತಃ ಪ್ರಿಯಾಂಕ್ ಖರ್ಗೆ, “ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಮೊದಲು ದಾಖಲೆ ತೋರಿಸಿ, ಅನಂತರ ರಾಜೀನಾಮೆ ಕೇಳಿ’ ಎಂದು ಸವಾಲು ಹಾಕಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿವೆ.
Related Articles
Advertisement
ರಾಜೀನಾಮೆ ಅಗತ್ಯವಿಲ್ಲ: ಜಾರ್ಜ್ಗುತ್ತಿಗೆದಾರ ಸಚಿನ್ ಆತ್ಮಹತ್ಯೆಯಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರ ಏನೂ ಇಲ್ಲ. ಹಾಗಾಗಿ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ರವಿ ಮತ್ತು ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಕಾಂಗ್ರೆಸ್ ಸರಕಾರವೇ ಸಿಬಿಐಗೆ ಒಪ್ಪಿಸಿತ್ತು. ಅನಂತರ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸಿಬಿಐಗೆ ತನಿಖೆ ಹೊಣೆ ವಹಿಸುವ ಅಗತ್ಯವೂ ಇಲ್ಲ. ಮೊದಲು ದಾಖಲೆ ತೋರಿಸಲಿ, ಅನಂತರ ರಾಜೀನಾಮೆ ಕೇಳಲಿ. ನನ್ನ ಮನೆಗೆ ಮುತ್ತಿಗೆ ಹಾಕಲು ಬಿಜೆಪಿಯ ಎಷ್ಟು ಜನ ಬರುತ್ತೀರಿ ಎಂದು ಮೊದಲೇ ಹೇಳಿಬಿಡಿ. ಟೀ- ಕಾಫಿಗೆ ವ್ಯವಸ್ಥೆ ಮಾಡಿಸುತ್ತೇನೆ. ಇಲ್ಲವಾದರೆ ಅದಕ್ಕೂ “ನೀರು ಕೊಡಲಿಲ್ಲ’ ಎಂದು ಆರೋಪ ಮಾಡುತ್ತಾರೆ. – ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ಗೆ ದಿಲ್ಲಿಗೆ ಬರಲು ಬುಲಾವ್
ಬೆಂಗಳೂರು: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಪುತ್ರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೆಹಲಿಗೆ ಬುಲಾವ್ ಬಂದಿದೆ. ಪಕ್ಷದ ವರಿಷ್ಠರ ಕರೆ ಮೇರೆಗೆ ಸಚಿವ ಪ್ರಿಯಾಂಕ್ ಮಂಗಳವಾರ ದೆಹಲಿಗೆ ಹಾರಲಿದ್ದು, 3 ದಿನಗಳ ಕಾಲ ಅಲ್ಲಿಯೇ ಬೀಡುಬಿಡಲಿದ್ದಾರೆ. ಈ ವೇಳೆ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ಕುರಿತು ಚರ್ಚೆ ಆಗುವ ಸಾಧ್ಯತೆ ಇದೆ. ಇಡೀ ಪ್ರಕರಣದ ಬಗ್ಗೆ ವರಿಷ್ಠರು ಸಚಿವರಿಂದ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.