Advertisement

ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

01:01 PM Dec 13, 2018 | Team Udayavani |

ಬೆಂಗಳೂರು ಗುತ್ತಿಗೆ ಪದ್ಧತಿಯನ್ನುರದ್ದು ಗೊಳಿಸುವುದು, ಇಎಸ್ಐ- ಪಿಎಫ್ ಸೌಲಭ್ಯ, ವಾರದ ರಜೆ, ಪ್ರತಿ ತಿಂಗಳ 7ನೇ ತಾರೀಖೀನೊಳಗೆ ವೇತನ ಪಾವತಿ ಸೇರಿದಂತೆ ಹತ್ತಾರು ಬೇಡಿಕೆಗಳ ಈಡೇರಿಕೆಗಾಗಿ ಗುತ್ತಿಗೆ ಪೌರಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಬಿಬಿಎಂಪಿ ಕೇಂದ್ರ ಕಚೇರಿ ಮೇಯರ್‌ ಕಚೇರಿ ಭವನದ ಎದುರು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘ, ಎಐಸಿಸಿಟಿಯು ನೇತೃತ್ವದಲ್ಲಿ ನೂರಾರು ಪೌರಕಾರ್ಮಿಕರು ತಮ್ಮ ಸಮಸ್ಯೆ ಗಳನ್ನು ಶೀಘ್ರ ನಿವಾರಣೆ ಮಾಡು ವವರೆಗೆ ಜಾಗ ಬಿಟ್ಟು ಕದಲುವುದಿಲ್ಲ. ಜತೆಗೆ ಪೌರಕಾರ್ಮಿಕರ
ಮೇಲಾಗು ತ್ತಿರುವ ದೌರ್ಜನ್ಯ ತಡೆಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
 
ಪ್ರತಿಭಟನೆ ಉದ್ದೇಶಿಸಿದ ಮಾತನಾಡಿದ ಸಂಘಟನೆಯ ಪ್ರಧಾನ ಕ್ಟಾಢದರ್ಶಿ ನಿರ್ಮಲಾ, ಪೌರಕಾರ್ಮಿಕರನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಸರಿಯಾದ ಸಮಯಕ್ಕೆ ವೇತನ ಪಾವತಿಸದ ಹಿನ್ನೆಲೆಯಲ್ಲಿ ಕಷ್ಟ ಅನುಭವಿಸುವಂತಾಗಿದೆ.
ಜತೆಗೆ ಇಂದಿರಾ ಕ್ಯಾಂಟೀನ್‌ ನಿಂದ ಪೂರೈಕೆ ಮಾಡುತ್ತಿರುವ ಆಹಾರ ಗುಣಮಟ್ಟದಿಂದ ಕೂಡಿಲ್ಲವೆಂದು ಆರೋಪಿಸಿದರು.

ಪೌರಕಾರ್ಮಿಕರು ಕೆಲಸ ಮಾಡುವ ವೇಳೆ ಕೈಚೀಲ, ಮಾಸ್ಕ್, ಷೋ ಸೇರಿದಂತೆ ಇನ್ನಿತರ ಪರಿಕರಗಳನ್ನು ನೀಡಬೇಕಿದೆ. ಆದರೆ, ಪಾಲಿಕೆಯಿಂದ ಯಾವುದೇ ಸೌಲಭ್ಯಗಳನ್ನು ನೀಡದಿರುವುದರಿಂದ ಅಪಾಯದ ನಡುವೆ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಜತೆಗೆ ಕೆಲಸದಿಂದ ತೆಗೆದಿರುವ ಒಂದು ವರ್ಷ ಕೆಲಸ ಮಾಡಿದ ಪೌರಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನಾಕಾರ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸಫ್ರಾಜ್‌ ಖಾನ್‌, ಈಗಾಗಲೇ ಕೆಲ ವಲಯಗಳಲ್ಲಿ ಪೌರಕಾರ್ಮಿಕರಿಗೆ ಸ್ವತ್ಛತಾ ಪರಿಕರಗಳನ್ನು ನೀಡಲಾಗಿದ್ದರೂ ಅವರು ಬಳಸು ತ್ತಿಲ್ಲ. ಒಂದು ವರ್ಷ ಕೆಲಸ ಮಾಡಿ ದವರು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಅವರನ್ನು ಕೆಸಲಕ್ಕೆ ಪರಿಗಣಿಸಲಾಗುವುದು. ಜತೆಗೆ ಉಳಿದ ಬೇಡಿಕೆ ಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next