Advertisement
ಸಂಚಾರ ಸ್ಥಗಿತಸೇತುವೆ ನಿರ್ಮಾಣ ಕಾಮಗಾರಿಗೆ ಟೆಂಡರ್ ನಡೆದು ತಿಂಗಳು ಕಳೆದರೂ ಕಾಮಗಾರಿಯನ್ನು ಮಳೆಗಾಲ ಪ್ರಾರಂಭಕ್ಕೆ ತಿಂಗಳ ಮೊದಲು ಪ್ರಾರಂಭಿಸಿ ದ್ದರಿಂದ ಸಮಸ್ಯೆ ಉದ್ಭವಿಸಿದೆ. ಎರಡು ವಾರಗಳ ಹಿಂದೆ ಸುರಿದ ಭಾರೀ ಮಳೆಗೆ ಎರಡು ದಿನಗಳ ಕಾಲ ಸಂಚಾರ ಸ್ಥಗಿತಗೊಂಡು ಈ ಪ್ರದೇಶದ ಜನರು 7 ಕಿ.ಮೀ. ದೂರದ ರಸ್ತೆಯಾಗಿರುವ ರೆಂಜಾಡಿ, ದೇರಳಕಟ್ಟೆ ಮಾರ್ಗವಾಗಿ ಸಂಚರಿಸುವಂತಾಗಿತ್ತು.
ಮಳೆ ಸುರಿಯುತ್ತಿರುವುದರಿಂದ ಮಳೆ ನೀರು ಪರ್ಯಾಯ ರಸ್ತೆಯ ಮಟ್ಟಕ್ಕೆ ನೀರು ನಿಂತಿದ್ದು, ಯಾವ ಕ್ಷಣದಲ್ಲಾದರೂ
ರಸ್ತೆ ಕೊಚ್ಚಿಹೋಗುವ ಭೀತಿಯಲ್ಲಿದೆ. ಮಣ್ಣು ಹಾಕಿ ನೀರನ್ನು ತಡೆದಿದ್ದರಿಂದ ಇನ್ನೊಂದು ಕಡೆ ಗದ್ದೆಗಳೆಲ್ಲಾ ನೀರು ತುಂಬಿ ನದಿಯಂತಾಗಿದೆ.
Related Articles
ನಿಧಾನಗತಿಯ ಕಾಮಗಾರಿಯ ವಿಚಾರದಲ್ಲಿ ಮಳೆಗಾಲ ಆರಂಭವಾದಾಗ ಪರ್ಯಾಯ ರಸ್ತೆ ಸಂಚಾರ ಸ್ಥಗಿತಗೊಳ್ಳುವ ಕುರಿತು ಉದಯವಾಣಿಯಲ್ಲಿ ವಿಸ್ತ್ರತ ವರದಿ ಪ್ರಕಟಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸೇತುವೆಯಲ್ಲಿ ತಾತ್ಕಾಲಿಕ ಸಂಚಾರ ಮುಕ್ತಕ್ಕೆ 10 ದಿನಗಳ ಗಡುವು ನೀಡಿದ್ದರೂ. ಕಾಮಗಾರಿ ಮಂದಗತಿಯಲ್ಲಿ ನಡೆದಿದ್ದು, 15 ದಿನ ಕಳೆದರೂ ಸಂಚಾರಕ್ಕೆ ಮುಕ್ತವಾಗಿಲ್ಲ.
Advertisement
ಒಂದೂವರೆ ತಿಂಗಳು ಅಗತ್ಯಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಇನ್ನೂ ಒಂದೂವರೆ ತಿಂಗಳು ಅಗತ್ಯವಿದೆ. ಆದರೆ ನಿರಂತರ ಮಳೆ ಸುರಿದರೆ ಸಂಚಾರ ಸ್ಥಗಿತಗೊಳ್ಳುವ ಹಿನ್ನಲೆಯಲ್ಲಿ ಸೇತುವೆಯ ಎರಡೂ ಬದಿಗೂ ಮಣ್ಣನ್ನು ತುಂಬಿಸಿ ತಾತ್ಕಾಲಿಕವಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮಳೆ ಕಳೆದ ಬಳಿಕ ಕಾಮಗಾರಿ ಪೂರ್ಣಗೊಳಿಸಲಾಗುವುದು.
– ದಾಸ್ ಪ್ರಕಾಸ್
ಕಾಮಗಾರಿಯ ಸಹಾಯಕ ಅಭಿಯಂತರರು