Advertisement
ಅವರು ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯಲ್ಲಿ ಸಿರಿಗನ್ನಡ ಸಾಹಿತ್ಯ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಏಕದಿನ ಸಾಹಿತ್ಯ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಾಲೆಯ ವ್ಯವಸ್ಥಾಪಕ ರಾಧಾ ಯು.ಜಿ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ವ್ಯಂಗ್ಯಚಿತ್ರ ರಚನೆಯ ಬಗ್ಗೆ ಮಾಹಿತಿ ನೀಡಿದ ವ್ಯಂಗ್ಯಚಿತ್ರಕಾರ ವಿರಾಜ್ ಅಡೂರು ಮಾತನಾಡಿ ವ್ಯಂಗ್ಯಚಿತ್ರಗಳು ಗಂಭೀರವಾದ ಸಾಮಾಜಿಕ ಅವ್ಯವಸ್ಥೆಗಳನ್ನು ಸುಲಭವಾಗಿ ಮುಂಚಿತವಾಗಿ ಗ್ರಹಿಸಿಕೊಂಡು ಅದರ ತೊಂದರೆಯನ್ನು ಹಾಸ್ಯದ ರೂಪದಲ್ಲಿ ಹೇಳುತ್ತವೆ. ಆದ್ದರಿಂದಾಗಿ ವ್ಯಂಗ್ಯಚಿತ್ರಗಳು ಜನಪ್ರಿಯವಾಗಿವೆ. ವ್ಯಂಗ್ಯಚಿತ್ರಕಾರನಿಗೆ ಚಿತ್ರರಚನೆಯ ಜತೆಗೆ ಹಾಸ್ಯಪ್ರಜ್ಞೆ, ದೂರಾಲೋಚನೆ, ಚಿತ್ರಗಳಲ್ಲಿ ಶಕ್ತವಾಗಿ ಭಾವನೆಗಳನ್ನು ಅರಳಿಸುವ ಜಾಣ್ಮೆ ಇರಬೇಕು. ಅಡಿಬರಹಗಳಿಲ್ಲದ, ನೋಟದಿಂದಲೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ವ್ಯಂಗ್ಯಚಿತ್ರಗಳನ್ನು ರಚಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
Advertisement
ಸಾಹಿತ್ಯ ಜೀವನದ ನಿರಂತರ ಪ್ರಕ್ರಿಯೆ : ಕುಳಮರ್ವ
11:23 PM Apr 30, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.