Advertisement
35 ವಾರ್ಡ್‌ಗಳಿಗೆ ತಲಾ ಒಬ್ಬರಂತೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಆಯಾಯ ವಾರ್ಡ್‌ನ ನೀರಿನ ಸಮಸ್ಯೆ ಬಗೆಹರಿಸುವತ್ತ ಗಮನಹರಿಸುತ್ತಿದ್ದಾರೆ. ಸ್ವರ್ಣಾ ನದಿಯಲ್ಲಿ ದೊಡ್ಡ ಗುಂಡಿಗಳಿಂದ ಪಂಪ್‌ಗ್ಳ ಮೂಲಕ ನೀರು ಹಾಯಿಸುವ ಕಾರ್ಯ ಮುಂದುವರಿದಿದೆ.
ನಗರಸಭೆಯ ಸದಸ್ಯರು, ಶಾಸಕರು, ಸಂಘ-ಸಂಸ್ಥೆಗಳು, ಜಿಲ್ಲಾ ನಾಗರಿಕ ಸಮಿತಿ ಸೇವಾ ಟ್ರಸ್ಟ್ ಮುಖಾಂತರ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ನಡೆಯುತ್ತಿದೆ. ಹೂಳು ತೆಗೆಯುವ ಪ್ರಕ್ರಿಯೆ ನಿರಂತರ
ಬಜೆ ಅಣೆಕಟ್ಟಿನಲ್ಲಿ ಹೂಳು ತೆಗೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಒಂದು ಹಿಟಾಚಿ ಮತ್ತು 2 ಟಿಪ್ಪರ್‌ಗಳು ಜಾಕ್‌ವೆಲ್ ಆಸುಪಾಸಿನಲ್ಲಿ ನಿರಂತರವಾಗಿ ಹೂಳು ತೆಗೆಯುವ ಕೆಲಸ ನಡೆಯುತ್ತಿವೆೆ. ನಗರಸಭೆಯ ಎಂಜಿನಿಯರ್‌ಗಳು ಕೂಡ ವಾರದಿಂದ ನಿರಂತರವಾಗಿ ಪಂಪಿಂಗ್ ನಡೆಸುವ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ಶೀಘ್ರಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿ¨ªಾರೆ.
Related Articles
ಕಳೆದೊಂದು ವಾರದಿಂದ ಚುರುಕಿನ ಕಾರ್ಯಾಚರಣೆಗಳು ಪರಿಣಾಮಕಾರಿ ಯಾಗಿ ನಡೆಯುತ್ತಿದ್ದು, ಜಿÇÉಾಧಿಕಾರಿ ಯಿಂದ ಹಿಡಿದು ಇಡೀ ಅಧಿಕಾರಿ ವರ್ಗ ಸಕ್ರಿಯವಾಗಿ ರಾತ್ರಿ ಹಗಲು ಕೆಲಸ ಮಾಡುತ್ತಿವೆ.
Advertisement
ಪಂಪಿಂಗ್ ಮುಂದುವರಿಕೆಪ್ರಸ್ತುತ 9 ಪಂಪ್‌ಗ್ಳ ಮೂಲಕ ನೀರೆತ್ತುವ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ 4 ಪಂಪ್‌ಗ್ಳನ್ನು ಶಾಸಕ ಕೆ. ರಘುಪತಿ ಭಟ್ ಅವರು ಸ್ವಂತ ಖರ್ಚಿನಿಂದ ನಿರ್ವಹಿಸುತ್ತಿದ್ದಾರೆ. ಉಳಿದ 5 ಪಂಪ್‌ಗ್ಳನ್ನು ಜಿಲ್ಲಾಡಳಿತದ ಮೂಲಕ ನೀಡಲಾಗಿದೆ.