Advertisement
ಅವರೀರ್ವರೂ ಒಂದು ತಿಂಗಳಿಂದ ಶಾಲೆಗೆ ಹಾಜರಾಗಿರಲಿಲ್ಲ. ಕೂಲಿ ಕಾರ್ಮಿಕರಾದ ಹೆತ್ತವರು ಕೂಡ ಮಕ್ಕಳನ್ನು ಶಾಲೆಗೆ ಹೋಗುವಂತೆ ಹುರಿ ದುಂಬಿಸುವ ಮನಸ್ಸು ಮಾಡಿರಲಿಲ್ಲ. ಮಕ್ಕಳನ್ನು ಹೇಗಾ ದರೂ ಶಾಲೆಗೆ ಮರಳಿ ಕರೆತರಬೇಕೆಂದು ಯೋಚಿ ಸಿದ ಶಿಕ್ಷಕರಾದ ಶ್ರೀಪತಿ ನಾಯಕ್ ಮತ್ತು ಪ್ರವೀಣ್ ಕುಮಾರ್ ಅವರು ಬೀಟ್ ಪೊಲೀಸ್ ಬಾಲಕೃಷ್ಣ ಅವರ ನೆರವು ಯಾಚಿಸಿದರು. ಅದರಂತೆ ಮೂವರೂ ಜತೆಗೂಡಿ ಗೋಪಾಲಕೃಷ್ಣ ಅವರ ಮನೆಗೆ ತೆರಳಿ ಮಕ್ಕಳು ಮತ್ತು ಹೆತ್ತವರೊಂದಿಗೆ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಹೇಳಿ ಶಾಲೆಗೆ ಬರುವಂತೆ ಮನವೊಲಿಸಿದರು. Advertisement
ಶಾಲೆಗೆ ನಿರಂತರ ಗೈರು: ಮಕ್ಕಳ ಮನವೊಲಿಸಿ ಕಳುಹಿಸಿದ ಪೊಲೀಸ್!
01:46 AM Nov 06, 2019 | Team Udayavani |