Advertisement
ಸಾನಿಧ್ಯವಹಿಸಿದ್ದ ಗದುಗಿನ ಶ್ರೀವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಪದ್ಮಶ್ರೀ ಪಂ.ಎಮ್.ವೆಂಕಟೇಶಕುಮಾರ ಸೇರಿದಂತೆ ಗಣ್ಯರು, ಪಂ.ಪಂಚಾಕ್ಷರ ಹಾಗೂ ಡಾ.ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ನೀಡಿದರು. ಬೆಳಗ್ಗೆಯಿಂದ ಸಂಜೆವರೆಗೆ ಸೃಜನಾ ರಂಗಮಂದಿರದಲ್ಲಿ ಸಂಗೀತೋತ್ಸವ ನಡೆದರೆ ಸಂಜೆಯಿಂದ ಅಹೋರಾತ್ರಿವರೆಗೆ ನಗರದ ಕೆಸಿಡಿ ಮೈದಾನದಲ್ಲಿ ನಡೆಯುತ್ತಿದೆ.
Related Articles
ಇದಾದ ಬಳಿಕ ರಾತ್ರಿಯಿಡೀ ಮುಂಬಯಿಯ ಪಂ.ರಾಕೇಶ್ ಚೌರಾಸಿಯಾ ಅವರ ಕೊಳಲು ವಾದನ, ಪದ್ಮಶ್ರೀ ಪಂ.ವಿಜಯ ಘಾಟೆಯವರ ತಾಲದಿಂಡಿ ವಿಶೇಷ ಕಾರ್ಯಕ್ರಮ, ಮೈಸೂರು ಬ್ರದರ್‍ಸ್ ವಿದ್ವಾನ್ ನಾಗರಾಜ, ವಿದ್ವಾನ್ ಡಾ.ಮಂಜುನಾಥ ಅವರ ಕರ್ನಾಟಕಿ ಶೈಲಿಯ ದ್ವಂದ್ವ ಪಿಟಿಲು ವಾದನ, ಬೆಂಗಳೂರಿನ ಪಂ.ವಿನಾಯಕ ತೊರವಿ, ಧಾರವಾಡದ ಪಂ.ಸೋಮನಾಥ ಮರಡೂರ, ಉಸ್ತಾದ್ ಫಯಾಜಖಾನ್, ಡಾ.ಮೃತ್ಯುಂಜಯ ಅಗಡಿ, ಸದಾಶಿವ ಐಹೊಳೆ, ಬೆಂಗಳೂರಿನ ಸಿದ್ಧಾರ್ಥ ಬೆಳ್ಮಣ್ಣು, ದೆಹಲಿಯ ಡಾ.ಅವಿನಾಶಕುಮಾರ, ಹುಬ್ಬಳ್ಳಿ ಕೃಷ್ಣೇಂದ್ರ ವಾಡೇಕರ ಅವರ ಗಾಯನ ಜರುಗಿತು. ಪ್ರತಿಯೊಬ್ಬ ಕಲಾವಿದರಿಂದ ಕನಿಷ್ಠ ಒಂದರಿಂದ ಒಂದೂವರೆ ತಾಸಿನವರೆಗೆ ಸಂಗೀತ ಕಚೇರಿ ನಡೆದವು. ಶನಿವಾರ ಬೆಳಿಗ್ಗೆಯಿಂದ ಸಂಜೆವರೆಗೂ ಅಲ್ಲದೇ ಇಡೀ ರಾತ್ರಿಯ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರು ಪಾಲ್ಗೊಂಡಿರುವುದು ವಿಶೇಷವಾಗಿದೆ.
Advertisement
ಇನ್ನು ಈ ಸಂಗೀತೋತ್ಸವದಲ್ಲಿ ವಾದ್ಯ ಸಹಕಾರದಲ್ಲಿ ಪಂ.ರಘುನಾಥ ನಾಕೋಡ, ಬೆಂಗಳೂರಿನ ಪಂ.ರವೀಂದ್ರ ಯಾವಗಲ್, ಪಂ.ರಾಜೇಂದ್ರ ನಾಕೋಡ, ಬೆಳಗಾವಿಯ ಡಾ.ಸುಧಾಂಶು ಕುಲಕರ್ಣಿ, ಉಸ್ತಾದ ನಿಸಾರ ಅಹಮದ್, ಗುರುಪ್ರಸಾದ ಹೆಗಡೆ, ಡಾ.ಉದಯ ಕುಲಕರ್ಣಿ, ಸತೀಶ ಕೊಳ್ಳಿ, ಸತೀಶ ಭಟ್ಟ ಹೆಗ್ಗಾರ, ಡಾ.ಶ್ರೀಹರಿ ದಿಗ್ಗಾಂವಿ, ಬಸವರಾಜ ಹಿರೇಮಠ, ಪ್ರಸಾದ ಮಡಿವಾಳರ ಸಾಥ್ ಸಂಗತ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಗೀತ ಗ್ರಾಮದ ಕಾರ್ಯದರ್ಶಿ ಕುಮಾರ ಮರಡೂರ, ಡಾ.ಎಸ್.ಪಿ.ಬಳಿಗಾರ, ಸಮೀರ ಜೋಶಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದಾರೆ.