Advertisement
ಮೇ 16ರಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ, ಜನತೆಗೆ ಕೃತಜ್ಞತೆ, ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಯುದ್ಧಕಾಲದಲ್ಲಿ ಮಾತ್ರ ಶಸ್ತ್ರಾಭ್ಯಾಸ ಮಾಡುವವರಲ್ಲ. ಯುದ್ಧಕ್ಕೆ ಸದಾ ಸಿದ್ಧರಾಗಿರುವವರು. ಕಳೆದ ಲೋಕಸಭಾ ಚುನಾವಣೆಯ ಅನಂತರ ಜಿ.ಪಂ.,ತಾ.ಪಂ., ಎಪಿಎಂಸಿ, ಗ್ರಾ.ಪಂ. ಚುನಾವಣೆಗಳನ್ನು ಬಿಜೆಪಿ ಗೆದ್ದಿದೆ. ಸದ್ಯದಲ್ಲಿಯೇ ಬರುವ ವಿಧಾನ ಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಈಗಾ ಗಲೇ ಸಿದ್ಧತೆ ನಡೆದಿದೆ. ನಗರಸಭೆ ಚುನಾವಣೆಯಲ್ಲಿ 35 ಸ್ಥಾನಗಳ ಪೈಕಿ 30 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಲಾಗಿದೆ. ದಿಕ್ಕು ತಪ್ಪಿರುವ ನಗರಸಭೆ ಆಡಳಿತವನ್ನು ಸರಿಪಡಿಸಲಾಗುವುದು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ದೇಶಕ್ಕೆ ಮತ್ತೂಮ್ಮೆ ನರೇಂದ್ರ ಮೋದಿಯವರ ಆಡಳಿತ ದೊರೆಯುವಂತೆ ಮಾಡಲು ಕಾರ್ಯಕರ್ತರು ಸಿದ್ಧಗೊಳ್ಳಲಿದ್ದಾರೆ ಎಂದರು.
ಕಾರ್ಯಕರ್ತರು 2 ವರ್ಷಗಳಿಂದ ಅವಿರತವಾಗಿ ಶ್ರಮಪಟ್ಟಿದ್ದಾರೆ. 5 ಕ್ಷೇತ್ರಗಳಲ್ಲಿಯೂ ಗೆಲುವಿನ ವಿಶ್ವಾಸ ವಿತ್ತು. ಮತದಾನದ ಸಂದರ್ಭದಲ್ಲಿ ಮತಗಟ್ಟೆಗಳಿಗೆ ತೆರಳಿದಾಗ ಗೆಲುವು ಖಚಿತವಾಗಿತ್ತು. ಜಿಲ್ಲೆಯಲ್ಲಿ ಬಿಜೆಪಿ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನ ಗಳಿಸಿದೆ. ಮತ ಗಳಿಕೆಯಲ್ಲಿ ರಾಜ್ಯದಲ್ಲೇ 3ನೇ ಸ್ಥಾನ ಪಡೆದಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 1 ಸ್ಥಾನ ಮಾತ್ರ ಗೆದ್ದಿದ್ದೆವು. ಪ್ರಮೋದ್ ಮತ್ತು ಸೊರಕೆ ಅವರು ಸಚಿವರಾಗಿ ಚುನಾವಣೆಗೆ ಪೂರ್ಣ ಸಿದ್ಧತೆ ಮಾಡಿಕೊಂಡಿದ್ದರು. ಗೋಪಾಲ ಪೂಜಾರಿ ಅವರು ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ರಾಗಿದ್ದರು. ಇವೆಲ್ಲವೂ ಬಿಜೆಪಿಗೆ ಸವಾಲಾಗಿತ್ತು. ಕಾರ್ಕಳ ಮತ್ತು ಕುಂದಾಪುರದಲ್ಲಿ ಮಾತ್ರ ದೊಡ್ಡ ಸವಾಲು ಇರಲಿಲ್ಲ. ಆದರೆ ಈಗ ನಿರೀಕ್ಷೆ ಗಿಂತ ಹೆಚ್ಚಿನ ಮತ ಗಳು ದೊರೆತಿವೆ ಎಂದು ಮಟ್ಟಾರು ಹೇಳಿದರು. ಶಕ್ತಿಕೇಂದ್ರ, ಮಹಾಶಕ್ತಿಕೇಂದ್ರ, ಬೂತ್ ಸಮಿತಿ, ಪೇಜ್ ಪ್ರಮುಖರ ಕೆಲಸ, ವಿಸ್ತಾರಕರ ಕೆಲಸ ಗೆಲುವಿಗೆ ನೆರವಾಯಿತು. ಅಮಿತ್ ಶಾ, ನರೇಂದ್ರ ಮೋದಿಯವರ ಕಾರ್ಯಕ್ರಮಗಳು ಪೂರಕವಾದವು. ಉಡುಪಿ ಸೇರಿದಂತೆ ನಾಲ್ಕು ಜಿಲ್ಲೆಗಳ ಉಸ್ತುವಾರಿಯಾಗಿದ್ದ ಮುಖಂಡರಾದ ಓಂ ಪ್ರಕಾಶ್ ಮಾಥೂರ್ ಮತ್ತು ಮಹೇಂದ್ರ ಸಿಂಗ್ ಅವರ ಮಾರ್ಗದರ್ಶನ ತುಂಬಾ ಅನು ಕೂಲವಾಯಿತು ಎಂದು ತಿಳಿಸಿದರು.
Related Articles
Advertisement
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಯಶ್‌ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ನಗರಾಧ್ಯಕ್ಷ ಪ್ರಭಾಕರ ಪೂಜಾರಿ, ಎಸ್‌ಸಿ ಮೋರ್ಚಾದ ಹೇಮಂತ್ ಕುಮಾರ್ ಉಪಸ್ಥಿತರಿದ್ದರು.
ದ್ವೇಷದ ರಾಜಕಾರಣವಿಲ್ಲಕಾಂಗ್ರೆಸ್ನವರು ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡಿದ್ದರೂ ನಾವು ಆ ರೀತಿ ಮಾಡಲು ಹೋಗುವುದಿಲ್ಲ. ಮುಯ್ಯಿಗೆ ಮುಯ್ಯಿ ತೀರಿಸಲು ಯಾವ ಶಾಸಕರಿಗೂ ಸಲಹೆ ನೀಡುವುದಿಲ್ಲ. ಜಾತಿ, ಮತ, ರಾಜಕೀಯ ಭೇದವಿಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ದ್ವೇಷದ ರಾಜಕಾರಣದ ಬದಲು, ಅಭಿವೃದ್ಧಿ ರಾಜಕಾರಣ ಮಾಡಲಾಗುವುದು. ಚುನಾವಣಾ ಪ್ರಣಾ ಳಿಕೆಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ಪ್ರತಿ ತಿಂಗಳಿಗೊಮ್ಮೆ ಶಾಸಕರ ಜತೆ ಸೇರಿ ಚಿಂತನ ಮಂಥನ ನಡೆಸಲಾಗುವುದು ಎಂದು ಮಟ್ಟಾರು ಹೇಳಿದರು. 21ರಲ್ಲಿ 18 ಗೆಲ್ಲಿಸಿದ ಮಾಥೂರ್!
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್ ಮಾಥೂರ್ ಅವರು ಉತ್ತರ ಪ್ರದೇಶ ದಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ವಹಿಸಿಕೊಂಡು ಗೆಲುವಿಗೆ ಕಾರಣರಾಗಿದ್ದರು. ನಮ್ಮ ರಾಜ್ಯದಲ್ಲಿ ಉಡುಪಿ, ದ.ಕ., ಕೊಡಗು ಮತ್ತು ಉ.ಕ. ಜಿಲ್ಲೆಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಜಿಲ್ಲೆಗಳ ಒಟ್ಟು 21 ಕ್ಷೇತ್ರಗಳಲ್ಲಿ 18 ಕ್ಷೇತ್ರಗಳಲ್ಲಿ ಗೆಲುವಾಗುವಂತೆ ಮಾಡಿದ್ದಾರೆ ಎಂದು ಮಟ್ಟಾರು ತಿಳಿಸಿದರು.