Advertisement
ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಗುಡ್ಡ ಕುಸಿತವಾಗುತ್ತಿದ್ದು, ರಾಶಿ ರಾಶಿ ಮಣ್ಣು, ಬಂಡೆಕಲ್ಲು, ಮರಗಳು ಉರುಳುತ್ತಿವೆ. ಈ ಸಾಲಿನ ಮೂರು ನಾಲ್ಕು ಕಡೆ ಗುಡ್ಡ ಕುಸಿದಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ಕೆಲವೊಂದು ನಿರ್ಬಂಧ ಹೇರಲಾಗಿದ್ದು, ಗಿರಿ ರಸ್ತೆಗೆ ನಿತ್ಯ 300 ವಾಹನಗಳಿಗೆ ನಿತ್ಯ ಅವಕಾಶ ನೀಡಲಾಗಿದೆ.
Related Articles
Advertisement
ನಿನ್ನೆಯ ತನಕ ಸರಿಯಿದ್ದ ತೋಟ ಇಂದು ನಾಶವಾಗಿದ್ದು ಧರ್ಮೇಗೌಡರ ಆತಂಕಕ್ಕೆ ಕಾರಣವಾಗಿದೆ. ಗುಡ್ಡದ ಮಣ್ಣು ತೋಟಕ್ಕೆ ನುಗ್ಗಿದ್ದು,ಸುಮಾರು 300 ಮೀಟರ್ ದೂರದವರೆಗೆ ಕಾಫಿ ಬೆಳೆ ಕೊಚ್ಚಿ ಹೋಗಿದೆ.
ಕುಸಿದ ಮನೆ: ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಮಕ್ಕಿ ಗ್ರಾಮದಲ್ಲಿ ಗಾಳಿ ಮಳೆಗೆ ಮನೆಯೊಂದು ಏಕಾಏಕಿ ಸಂಪೂರ್ಣವಾಗಿ ಕುಸಿದಿದೆ. ಶಬ್ದ ಕೇಳುತ್ತಿದ್ದಂತೆ ಮನೆಯವರು ಹೊರ ಬಂದಿದ್ದಾರೆ. ಮನೆಯವರು ಹೊರಬರುತ್ತಿದ್ದಂತೆ ಮನೆ ಕುಸಿದು ಬಿದ್ದಿದೆ.
ಬೆಳೆಗಳು ನೆಲಸಮ: ವರುಣಾರ್ಭಟಕ್ಕೆ ಅರೆನೂರು ಗ್ರಾಮದಲ್ಲಿ 100 ಅಡಿ ಎತ್ತರದಿಂದ ಗುಡ್ಡ ಕುಸಿದಿದೆ. ಭು ಕುಸಿತದ ಆರ್ಭಟಕ್ಕೆ ಕಾಫಿ, ಅಡಿಕೆ, ಮೆಣಸು ಬೆಳೆ ಸರ್ವನಾಶವಾಗಿದೆ.