Advertisement

‘ಹೋರಾಟದಲ್ಲಿ ಸಂಸದರು ಭಾಗಿಯಾಗಲಿ’

10:56 AM Nov 02, 2018 | Team Udayavani |

ಸುರತ್ಕಲ್‌: ಇಲ್ಲಿಯ ಟೋಲ್‌ ಗೇಟ್‌ ಅವೈಜ್ಞಾನಿಕ ಎಂಬುದು ತಿಳಿದಿದ್ದರೂ ಸಂಸದರು ರದ್ದು ಪಡಿಸಲು ಮನಸ್ಸು ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಧರ್ಮದ ವಿಚಾರ ಬಂದಾಗ ಬೆಂಕಿ ಇಡುವ ಹೇಳಿಕೆ ನೀಡುತ್ತಾರೆ. ಸಾರ್ವಜನಿಕರ ಬಗ್ಗೆ ಕಾಳಜಿಯಿದ್ದಲ್ಲಿ ಇಲ್ಲಿಗೆ ಆಗಮಿಸಿ ಧರಣಿಯಲ್ಲಿ ನಮ್ಮ ಜತೆ ಸೇರಿ ಆಗಲಾದರೂ ಸರಕಾರ ಕಣ್ತೆರೆಯಬಹುದು ಎಂದು ಇಂಟಕ್‌ ಮಾಜಿ ಅಧ್ಯಕ್ಷ ಎನ್‌.ಎಂ. ಅಡ್ಯಂತಾಯ ಹೇಳಿದರು.

Advertisement

ಗುರುವಾರ ಸುರತ್ಕಲ್‌ನಲ್ಲಿ ಟೋಲ್‌ ಗೇಟ್‌ ಮುಚ್ಚುವಂತೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ಮೂರು ಟೋಲ್‌ಗೇಟ್‌ ದಾಟಿ ಉಡುಪಿಗೆ ಹೋಗುವವರು ನೂರಾರು ರೂಪಾಯಿ ಸುಂಕ ಕೊಡಬೇಕಾದ ಅನಿವಾರ್ಯ ಬಂದಿದೆ. ಕಾನೂನು ಬದ್ಧವಲ್ಲದ ಟೋಲ್‌ಗೇಟನ್ನು ಕೂಡಲೇ ರದ್ದುಪಡಿಸುವಲ್ಲಿ ಕೇಂದ್ರ ಸರಕಾರ ಮುಂದಾಗಲಿ ಎಂದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಮೂರು ವರ್ಷಗಳ ಹಿಂದೆ ಈ ಟೋಲ್‌ಗೇಟ್‌ ರದ್ದು ಮಾಡಲು ಗಂಭೀರ ಪ್ರಯತ್ನ ಮಾಡಲಾಗಿತ್ತು.ಆದರೆ ನ್ಯಾಯಾಲಯ ಆದೇಶ ಮತ್ತಿತರ ಕಾರಣಗಳಿಂದ ಇದುವರೆಗೂ ನಡೆದುಕೊಂಡು ಬಂದಿದೆ. ಆದರೆ ಕಳೆದ ಬಾರಿ ರಾಜ್ಯ ಆಪರ ಕಾರ್ಯದರ್ಶಿ ಸಮ್ಮುಖ ನಿರ್ಣಯದಿಂದ ಟೋಲ್‌ ಮುಚ್ಚಲು ಸೂಚನೆ ಆಗಿದ್ದರೂ ಇದುವರೆಗೂ ಜಾರಿಯಾಗಿಲ್ಲ ಎಂದರು.

ಮಾಜಿ ಶಾಸಕ ವಿಜಯಕುಮಾರ್‌ ಶೆಟ್ಟಿ ಮಾತನಾಡಿ, ಸರಕಾರವು ಬಹುಜನರ ಬೇಡಿಕೆಯನ್ನು ಮನ್ನಿಸಿ ಈಗಲಾದರೂ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂದರು. ಕಾರ್ಪೊರೇಟರ್‌ ಪುರುಷೋತ್ತಮ್‌ ಚಿತ್ರಾಪುರ, ಮುನೀರ್‌ ಕಾಟಿಪಳ್ಳ, ಹಿಲ್ಡಾ ಆಳ್ವ, ಇಮ್ತಿಯಾಝ್, ಕೃಷ್ಣಪ್ಪ, ಆನಂದ ಅಮೀನ್‌, ವಿಜಯ್‌ ಅರಾನ್ನ, ವೈ. ರಾಘವೇಂದ್ರ ರಾವ್‌, ರೇಷ್ಮಾ ಕಾಟಿಪಳ್ಳ, ಮಮತಾ ಶೆಟ್ಟಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next