ನೆಲಮಂಗಲ: ತಾಲೂಕಿನ ಟಿ.ಬೇಗೂರಿನಲ್ಲಿರುವ ಮಾಜಿ ಡಿಸಿಎಂ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಐಟಿ ಅಧಿಕಾರಿಗಳ ಶೋಧ ಕಾರ್ಯಶುಕ್ರವಾರವೂ ಮುಂದುವರೆಯಯಿತು. ಶುಕ್ರವಾರ ಬೆಳ್ಳಗೆ ಸುಮಾರು 9ರಿಂದ 10 ಗಂಟೆ ವೇಳೆಗೆ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಸಿದ್ದಾರ್ಥಮೆಡಿಕಲ್ ಕಾಲೇಜು ಆವರಣಕ್ಕೆ ಧಾವಿಸಿದ ಆದಾಯ ತೆರಿಗೆ ಅಧಿಕಾರಿಗಳ ತಂಡ ಕಾಲೇಜಿನ ಪ್ರತಿಯೊಂದು ವಿಭಾಗವನ್ನು ಶೋಧ ನಡೆಸಿ ದಾಖಲೆ ಕಲೆಹಾಕಿದರು.
ಖಾಲಿ ಖಾಲಿ: ಡಾ. ಜಿ. ಪರಮೇಶ್ವರ್ ಅವರಿಗೆ ಜಮೀನು ಕ್ರಯಕ್ಕೆ ಕೊಟ್ಟಿದ್ದ ಪಟ್ಟಣದ ಸುಭಾಷ್ ನಗರ ನಿವಾಸಿ ಮುನಿರಾಮಯ್ಯ ಅವರ ಮನೆ, ಈ ಇಬ್ಬರ ನಡುವಿನ ವ್ಯವಹಾರಕ್ಕೆ ಕಾರಣೀಭೂತರಾದ ನೆಲಮಂಗಲ ಪುರಸಭೆ 14ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಶಿವಕುಮಾರ್ ಮನೆ ಹಾಗೂ ಟಿ.ಬೇಗೂರಿನ ಗುತ್ತಿಗೆದಾರ ಕಾಂಗ್ರೇಸ್ ಮುಖಂಡ ರಂಗನಾಥ್ ಅವರ ಮನೆಗಳ ಮೇಲೆ ಮತ್ತು ಸಿದ್ದಾರ್ಥ ಕಾಲೇಜಿನ ಮೇಲೆ ನಿನ್ನೆ ದಾಳಿ ನಡೆಸಲಾಗಿದ್ದು, ಕಾಲೇಜು ಹೊರತುಪಡಿಸಿ ಉಳಿದವರ ಮನೆಗಳು ಖಾಲಿ ಖಾಲಿಯಾಗಿದ್ದು ಬಿಕೋ ಅನ್ನುತಿದ್ದವು.
ಖಾತೆಗಳ ಪರಿಶೀಲನೆ: ಸಿದ್ದಾರ್ಥಮೆಡಿಕಲ್ ಕಾಲೇಜು ಆವರಣದಲ್ಲಿರುವ ಯುಕೋ ಬ್ಯಾಂಕ್‌ನಲ್ಲಿರುವ ಖಾತೆಗಳನ್ನು ಆದಾಯ ತೆರಿಗೆ ಅಧಿಕಾರಿಗಳ ತಂಡ ಶುಕ್ರವಾರವೂ ಪರಿಶೀಲಿಸಲು ಮುಂದಾಗಿದ್ದರಿಂದ ಟಿ.ಬೇಗೂರು ಮತ್ತು ಸುತ್ತಮುತ್ತಲ ಗ್ರಾಮಗಳ ಬ್ಯಾಂಕ್ ಗ್ರಾಹಕರು ಮತ್ತು ದೇಶದ ವಿವಿದೆಡೆಗಳಿಂದ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳು ಬ್ಯಾಂಕ್ ವಹಿವಾಟುಮಾಡಲು ಸಮಸ್ಯೆ ಎದುರಾಗಿತ್ತು. ದಿನಪೂರ್ತಿ ಬ್ಯಾಂಕ್‌ನಲ್ಲಿ ಕುಳಿತ ಅಧಿಕಾರಿಗಳ ತಂಡ ಬ್ಯಾಂಕ್ ಪ್ರತಿಯೊಂದು ಖಾತೆ ಮತ್ತು ನಗದು ವಹಿವಾಟಿನ ಕುರಿತಾಗಿ ತೀರ್ವವಾಗಿ ಶೋಧನೆ ಮಾಡಿ ಪರಿಶೀಲಿಸಿದರು.
ಅನಾರೋಗ್ಯ: ಗುರುವಾರಆದಾಯತೆರಿಗೆಇಲಾಖೆ ಅಧಿಕಾರಿಗಳ ದಾಳಿಯಿಂದಾಗಿ ಆಘಾತಗೊಂಡಿದ್ದ ಕಾಂಗ್ರೇಸ್ ಮುಖಂಡ ರಂಗನಾಥ್ ಅವರುಅನಾರೋಗ್ಯಕ್ಕೆ ಒಳಗಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಊಹಾಪೋಹ: ಮಾಜಿ ಉಪಮುಖಮಂತ್ರಿ ಡಾ.ಜಿ.ಪರಮೇಶ್ವರ್ ತಾಲೂಕಿನ ಟಿ.ಬೇಗೂರು ಮತ್ತು ಕುಲುವನಹಳ್ಳಿ ಗ್ರಾಮ ಪಂಚಾಯತಿವ್ಯಾಪ್ತಿಗೊಳಪಟ್ಟಿದ್ದು, 2014ರಲ್ಲಿ ಸರಿ ಸುಮಾರು 100 ಎಕರೆಜಮೀನನಲ್ಲಿ ನಿರ್ಮಾಣವಾಗಿರುವ ಕಾಲೇಜು ಹತ್ತಾರು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಕಟ್ಟಡಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿ ಮಾಡಬೇಕು. ಆದರೆ ನಮ್ಮದು ವಾಣಿಜ್ಯ ಉದ್ದೇಶದ ಕಟ್ಟಡಗಳಲ್ಲ ಎಂಬ ಕಾರಣಕ್ಕೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡೋ ಅಥವಾ ತಮ್ಮ ಪ್ರಭಾವವನ್ನು ಬೀರಿ ಕೋಟ್ಯಾಂತರ ರೂಪಾಯಿ ತೆರಿಗೆ ವಂಚಿಸಿದ್ದಾರೆ ಎಂಬ ಊಹಾಪೋಹ ತಾಲೂಕಿನಲ್ಲಿ ಚರ್ಚೆಗೆಗ್ರಾಸವಾಗಿತ್ತು.
ಪ್ರತಿಕ್ರಿಯೆ: ಪುರಸಭೆ ಸದಸ್ಯ ನಮ್ಮ ಸಂಬಂಧಿಕರಜಮೀನು ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದೆ. ನಮ್ಮದು ಯಾವುದೇ ಪಾತ್ರವಿಲ್ಲ. ನಮ್ಮ ಮನೆಯಲ್ಲಿ ಏನೂ ಸಿಕ್ಕಿಲ್ಲ. ಎಲ್ಲಾ ಊಹಾಪೋಹ ಅಷ್ಟೇ. ನಾನು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಹಾಗೂ ಐಟಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ನಾನು ಮತ್ತು ನಮ್ಮ ಕುಟುಂಬ ಸದಸ್ಯರು ಉತ್ತರ ಕೊಟ್ಟಿದ್ದೇವೆ. ನಾನು ಯಾವುದೇ ರೀತಿಯಲ್ಲಿ ಕಪ್ಪು ಚುಕ್ಕೆಯಿಲ್ಲದ ವ್ಯಕ್ತಿ ಎಂದು ಸುಭಾಷ್ ನಗರ ನಿವಾಸಿ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಜಮೀನು ಮಾಲೀಕ ಮುನಿರಾಮಯ್ಯ ಮಾತನಾಡಿ, ನನಗೆ ಪಿತ್ರಾರ್ಜಿತವಾಗಿ ಬಂದಿದ್ದ ಸುಮಾರು 3ಎಕರೆ ಜಮೀನನ್ನು ಡಾ.ಜಿ.ಪರಮೇಶ್ವರ್ ಅವರಿಗೆ ಕಾನೂನು ರೀತಿ ಜಮೀನು ಮಾರಾಟ ಮಾಡಿದ್ದೇನೆ. ಯಾವುದೇ ತಪ್ಪುಮಾಡಿಲ್ಲ. ನಮ್ಮ ಮನೆಯಲ್ಲಿ 1.60 ಕೋಟಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.
ನೋಟಿಸ್: ಗುರುವಾರ ಐಟಿ ಅಧಿಕಾರಿಗಳಿಂದ ದಾಳಿ ನಡೆದಿದ್ದ ಬೇಗೂರಿನ ರಂಗನಾಥ್ ಅವರಿಗೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ಬಂದು ಮಾಹಿತಿ ನೀಡುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆಂದು ತಿಳಿದುಬಂದಿದೆ.