Advertisement
ಶುಕ್ರವಾರ ನಡೆದ ಹಿಂಸಾಚಾರದ ಸೂತ್ರಧಾರ ಎನ್ನಲಾದ ಪ್ರಯಾಗ್‌ರಾಜ್ ಮೂಲದ ರಾಜ ಕಾರಣಿ ಜಾವೇದ್ ಮೊಹಮ್ಮದ್ ಅವರ ಎರಡು ಮಹಡಿಗಳ ಅಕ್ರಮ ನಿವಾಸವನ್ನು ರವಿವಾರ ಧ್ವಂಸ ಮಾಡಲಾಗಿದೆ. ಹಿಂಸಾಚಾರದಲ್ಲಿ ಪಾಲ್ಗೊಂ ಡಿದ್ದ ಇನ್ನಿಬ್ಬರು ಆರೋಪಿಗಳ ಸಹರಾನ್ಪುರದ ಮನೆಗಳನ್ನು ಶನಿವಾರ ಕೆಡವಲಾಗಿತ್ತು.
ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ಮೇ ತಿಂಗಳಲ್ಲೇ ಜಾವೇದ್ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಈಗ ಕಾನೂನು ಪ್ರಕಾರವೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.
Related Articles
ಝಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಗುಂಡೇಟಿಗೆ ಇಬ್ಬರು ಬಲಿಯಾದ ಬಳಿಕ ಪೊಲೀಸರ ಕಟ್ಟೆಚ್ಚರದಿಂದಿದ್ದು, ಅಂಗಡಿ ಮುಂಗಟ್ಟುಗಳನ್ನೆಲ್ಲ ಮುಚ್ಚಲಾಗಿದೆ. ರವಿವಾರ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜಮ್ಮುವಿನ ಗಲಭೆಪೀಡಿತ ಚೇನಾಬ್ ಕಣಿವೆ ಪ್ರದೇಶದಲ್ಲಿ ಸತತ 4ನೇ ದಿನವೂ ಕರ್ಫ್ಯೂ ಮುಂದುವರಿದಿದ್ದು, ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ರವಿವಾರ ಬಂಧಿಸಲಾಗಿದೆ. ಪಶ್ಚಿಮ ಬಂಗಾಲದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ರವಿವಾರ ಇಲ್ಲಿನ ನಾಡಿಯಾ ಜಿಲ್ಲೆಯಲ್ಲಿ ಉದ್ರಿಕ್ತರ ಗುಂಪೊಂದು ಸ್ಥಳೀಯ ರೈಲು ನಿಲ್ದಾಣದ ಮೇಲೆ ದಾಳಿ ಮಾಡಿ ರೈಲೊಂದಕ್ಕೆ ಹಾನಿ ಉಂಟು ಮಾಡಿದೆ. ಪ್ಲ್ರಾಟ್‌ಫಾರಂನಲ್ಲಿ ನಿಂತಿದ್ದ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದೇ ವೇಳೆ ಹೌರಾ ಹಿಂಸಾಚಾರ ಸಂಬಂಧ 53 ಮಂದಿಯನ್ನು ಬಂಧಿಸಲಾಗಿದೆ.
Advertisement
304 ಮಂದಿ ಬಂಧನಉತ್ತರ ಪ್ರದೇಶದಲ್ಲಿ ಹಿಂಸಾಚಾರ ಸಂಬಂಧ ರವಿವಾರ ಬೆಳಗ್ಗೆ 8ರ ವರೆಗೆ ಒಟ್ಟು 304 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದವರಲ್ಲಿ ಪ್ರಯಾಗ್‌ರಾಜ್‌ನ 91, ಸಹರಾನ್ಪುರದ 71, ಹತ್ರಾಸ್‌ನ 51, ಮೊರಾದಾಬಾದ್‌ನ 34, ಫಿರೋಜಾಬಾದ್‌ನ 15 ಮತ್ತು ಅಂಬೇಡ್ಕರ್‌ನಗರದ 34 ಮಂದಿ ಸೇರಿ ದ್ದಾರೆ. ಸಹರಾನ್ಪುರದಲ್ಲಿ ಪ್ರತಿಭಟನೆ ಆರಂಭ ವಾಗುವುದಕ್ಕೆ ಮುನ್ನ ಭಿತ್ತಿಪತ್ರಗಳನ್ನು ಮುದ್ರಣ ಮಾಡಿದ್ದ ಸಲ್ಮಾನ್ ಎಂಬಾತನನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಪಿಸ್ತೂಲ್‌ಗಳು ಪತ್ತೆ
ಕಾರ್ಯಾಚರಣೆಗೆ ಮುನ್ನ ಜಾವೇದ್ ಮನೆಯಲ್ಲಿ 12 ಬೋರ್‌ನ ಅಕ್ರಮ ಪಿಸ್ತೂಲ್, 315 ಬೋರ್‌ನ ಮತ್ತೊಂದು ಪಿಸ್ತೂಲು ಮತ್ತು ಮದ್ದುಗುಂಡುಗಳು, ನ್ಯಾಯಾಲಯವನ್ನು ವಿರೋಧಿಸುವಂಥ ಕೆಲವು ಆಕ್ಷೇಪಾರ್ಹ ದಾಖಲೆಗಳು ಪತ್ತೆಯಾ ಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.