ಪಾವಗಡ: ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಶುಶ್ರೂಶಕಿ ಹಾಗೂ ಕಿರಿಯ ಮಹಿಳಾ ಸಹಾಯಕಿಯರ ಸೇವೆ ಮುಂದುವರಿಸಬೇಕು ಎಂದು ಒತ್ತಾಯಿಸಿ ನೌಕರರು ತಹಶೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಒಂದು ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಸುಮಾರು 40 ಮಂದಿ ತಾಲೂಕಿನ ಸರ್ಕಾರಿ ಆಸ್ಪತ್ರೆ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಏಕಾಏಕಿ ಕೆಲಸಕ್ಕೆ ಬಾರದಂತೆ ತಾಲೂಕು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಇದೇ ಕೆಲಸ ನೆಚ್ಚಿಕೊಂಡಿರುವವರಿಗೆ ದಿಕ್ಕು ತೋಚದಂತಾಗಿದೆ ಎಂದು ನೌಕರರು ಸಮಸ್ಯೆ ಹೇಳಿಕೊಂಡರು.
ಪಿಎಫ್, ಇಜಿಐಎಸ್ ಮಾಹಿತಿ ನೀಡಿಲ್ಲ: ರಾಜ್ಯದ ಇತರಡೆ ಹೊರಗುತ್ತಿಗೆ ನೌಕರರ ಸೇವೆ ಮುಂದು ವರಿಸಲಾಗಿದೆ. ಆದರೆ, ತಾಲೂಕಿನಲ್ಲಿ ಕೆಲವರನ್ನು ಮಾತ್ರ ಸೇವೆಯಲ್ಲಿ ಮುಂದುವರಿ ಯುವಂತೆ ತಿಳಿಸಿದ್ದಾರೆ.
ಮುಂದಿನ ಆದೇಶ ಬಂದ ನಂತರ ಸೇವೆಗೆ ತೆಗೆದುಕೊಳ್ಳಲಾಗುವುದು. ಆದರೆ ಹಾಲಿ ಕರ್ತವ್ಯ ನಿರ್ವಹಿಸುವವರನ್ನೇ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆ ನೀಡಲು ಅಗುವುದಿಲ್ಲ ಎಂದು ಅಧಿಕಾರಿ ಗಳು ಹೇಳುತ್ತಿದ್ದಾರೆ. ಈವರೆಗೆ ಸೇವೆ ಸಲ್ಲಿಸಿದವರ ಪಿಎಫ್, ಇಜಿಐಎಸ್ ಇತ್ಯಾದಿ ಮಾಹಿತಿಯನ್ನು ನೌಕರರಿಗೆ ನೀಡಿಲ್ಲ ಎಂದು ನೌಕರರು ಆರೋಪಿಸಿದರು.
ಎಚ್ಚರಿಕೆ: ಹೊರಗುತ್ತಿಗೆ ಅಧಾರದಲ್ಲಿ ಸೇವೆಗೆ ನಿಯೋಜನೆಗೊಳಿಸಬೇಕು. ನೌಕರರ ಪಿಎಫ್, ಇಜಿಐಎಸ್ ಕಟಾವಣೆ ಮಾಹಿತಿ ನೀಡಬೇಕು. ಪ್ರತಿ ತಿಂಗಳ ವೇತನ ನೀಡಬೇಕು. ಈವರೆಗೆ ಕಾರ್ಯನಿರ್ವಹಿಸಿದವರ ಸೇವೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿ ಸಿದರು. ನೌಕರರು ತಹಶೀಲ್ದಾರ್ ಪಿ.ಎಸ್.ಕುಂಬಾರ, ತಾಲೂಕು ವೈದ್ಯಾಧಿಕಾರಿ ರಾಮಾಂಜಿನೇಯ ಅವರಿಗೆ ಮನವಿ ಸಲ್ಲಿಸಿದರು.
ಹೊರಗುತ್ತಿಗೆ ನೌಕರರಾದ ಜ್ಯೋತಿನಾಯಕ, ಶ್ರೀದೇವಿ, ಮಮತಾ, ವೀಣಾ, ಶಿಲ್ಪಾ, ಜ್ಯೋತಿ, ಶ್ವೇತಾ, ನಾಗಮಣಿ, ಲಲಿತಮ್ಮ, ವನಜಾಕ್ಷಿ ಉಪಸ್ಥಿತರಿದ್ದರು.