Advertisement

ಹಿಂದೂಫೋಬಿಯಾ ವಿರುದ್ಧ ನಿರ್ಣಯ ಅಂಗೀಕಾರ

08:51 PM Apr 01, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ ಜಾರ್ಜಿಯಾ ಪ್ರಾಂತ್ಯದಲ್ಲಿ “ಹಿಂದೂಫೋಬಿಯಾ’ ಎಂಬ ಪದ ಬಳಕೆ ಮತ್ತು ಹಿಂದೂ ಧರ್ಮವನ್ನು ನಿಂದಿಸುವುದರ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ. ಜತೆಗೆ ಇಂಥ ನಿರ್ಣಯ ಕೈಗೊಂಡ ಅಮೆರಿಕದ ಮೊದಲ ಪ್ರಾಂತ್ಯ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.

Advertisement

ಜಗತ್ತಿನ 100ಕ್ಕೂ ಅಧಿಕ ದೇಶಗಳಲ್ಲಿ 1.2 ಬಿಲಿಯನ್‌ ಮಂದಿ ಹಿಂದೂ ಧರ್ಮವನ್ನು ಅನುಸರಿಸಿಕೊಂಡು, ವಿವಿಧ ನಂಬಿಕೆಗಳ ಆಧಾರದಲ್ಲಿ ಜೀವಿಸುತ್ತಿದ್ದಾರೆ. ಪರಸ್ಪರ ಗೌರವಿಸಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ನಿರ್ಣಯದಲ್ಲಿ ಹೇಳಿಕೊಳ್ಳಲಾಗಿದೆ. ಕಳೆದ ಕೆಲ ವರ್ಷಗಳಿಂದೀಚೆಗೆ ಹಿಂದೂ-ಅಮೆರಿಕನ್ನರ ಮೇಲೆ ದ್ವೇಷಪೂರಿತ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಣಯ ಮಹತ್ವ ಪಡೆದಿದೆ.

ಅಟ್ಲಾಂಟಾದ ಹೊರವಲಯದ ಫೋರ್ಸ್‌ ಕೌಂಟಿಯಲ್ಲಿರುವ ಟಾಡ್‌ ಜಾನ್ಸ್‌ ಮತ್ತು ಲಾರೆನ್‌ ಮೆಕ್‌ ಡೊನಾಲ್ಡ್‌ ಎಂಬುವರು ನಿರ್ಣಯವನ್ನು ಮಂಡಿಸಿದ್ದಾರೆ. ಈ ವಲಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಿಂದೂ ಸಮುದಾಯದವರು, ಭಾರತೀಯ ಅಮೆರಿಕನ್‌ ಸಮುದಾಯದವರು ವಾಸಿಸುತ್ತಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಮಾಹಿತಿ ತಂತ್ರಜ್ಞಾನ, ಆತಿಥ್ಯ, ಹಣಕಾಸು, ಶಿಕ್ಷಣ, ಉತ್ಪಾದನೆ, ಚಿಲ್ಲರೆ ವ್ಯಾಪಾರ, ಯೋಗ ಮತ್ತು ಧ್ಯಾನ ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರಮುಖ ಕೊಡುಗೆಗಳನ್ನು ನೀಡಿದೆ. ಜತೆಗೆ ಅಮೆರಿಕದ ಸರ್ವಾಂಗೀಣ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿದ್ದಾರೆ ಎಂದು ನಿರ್ಣಯದಲ್ಲಿ ಅಂಗೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next