ನವ ದೆಹಲಿ: ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಅವರೊಂದಿಗಿನ ಸ್ಪರ್ಧೆಯು ದೇಶ ಮತ್ತು ಪಕ್ಷದ ಒಳಿತಿಗಾಗಿ ತಮ್ಮ ದೃಷ್ಟಿಕೋನಗಳನ್ನು ಮುಂದಿಡುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರತಿನಿಧಿಗಳೊಂದಿಗೆ ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ಬೆಂಬಲ ಕೋರಿದ ನಡೆಸಿದ ಸಂವಾದದಲ್ಲಿ ಖರ್ಗೆ ಈ ವಿಷಯ ತಿಳಿಸಿದ್ದು,ಇದು ಆಂತರಿಕ ಚುನಾವಣೆ. ಇದು ಮನೆಯಲ್ಲಿ ಇಬ್ಬರು ಸಹೋದರರಂತೆ, ಅವರು ಜಗಳವಾಡುತ್ತಿಲ್ಲ, ಆದರೆ ತಮ್ಮ ದೃಷ್ಟಿಕೋನಗಳನ್ನು ಇಟ್ಟುಕೊಂಡು ಪರಸ್ಪರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ”ಎಂದರು.
ಇದನ್ನೂ ಓದಿ : ಎಮ್ಮೆಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ : 34 ಮಂದಿಗೆ ಗಾಯ
”ಚುನಾವಣಾ ಪ್ರಚಾರವು ನಿರ್ದಿಷ್ಟ ಅಭ್ಯರ್ಥಿಯು ಪಕ್ಷದ ಅಧ್ಯಕ್ಷರಾದರೆ ಏನು ಮಾಡುತ್ತಾರೆ ಎಂಬುದರ ಬಗ್ಗೆ ಅಲ್ಲ, ಆದರೆ ಅವರು ಒಟ್ಟಾಗಿ ಏನು ಮಾಡಬಹುದು” ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಖರ್ಗೆ ಹೇಳಿದರು.
“ನನ್ನ ನಂಬಿಕೆ ಏನೆಂದರೆ… ನಾನು ಏನು ಮಾಡುತ್ತೇನೆ ಎಂಬುದು ಪ್ರಶ್ನೆಯಲ್ಲ. ದೇಶಕ್ಕಾಗಿ ಮತ್ತು ಪಕ್ಷಕ್ಕಾಗಿ ನಾವಿಬ್ಬರೂ ಒಟ್ಟಾಗಿ ಏನು ಮಾಡುತ್ತೇವೆ ಎಂಬ ಪ್ರಶ್ನೆ ಮುಖ್ಯವಾಗಿದೆ” ಎಂದರು.