Advertisement

ಕಲುಷಿತ ನೀರು ನೇರ ಶುದ್ಧೀಕರಣ ಘಟಕಕ್ಕೆ: ರುದ್ರೇಶ್‌

07:32 PM Dec 18, 2020 | Suhan S |

ರಾಮನಗರ: ಜಿಲ್ಲಾ ಕೇಂದ್ರದಲ್ಲಿನ ಕಲುಷಿತ ನೀರು ಅರ್ಕಾವತಿ ನದಿ ಸೇರುವುದನ್ನು ತಪ್ಪಿಸಲು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 21 ಕೋಟಿ ರೂ.ನಲ್ಲಿ ಕಾಮಗಾರಿ ಕೈಗೊಳ್ಳಲಿದೆ ಎಂದುಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿನಿಯಮಿತ (ಕೆ.ಆರ್‌.ಐ.ಡಿ.ಎಲ್‌) ಅಧ್ಯಕ್ಷ ಎಂ. ರುದ್ರೇಶ್‌ ತಿಳಿಸಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಹೊರವಲಯದಲ್ಲಿ ನಗರಸಭೆ ನಿರ್ಮಿಸಿರುವ ಒಳಚರಂಡಿ ನೀರು ಸಂಸ್ಕರಣಾ ಘಟಕಕ್ಕೆ ನಗರದ ಒಳಚರಂಡಿ ವ್ಯವಸ್ಥೆಯಿಂದನೀರು ಹರಿಯುವುದೇ ಇಲ್ಲ. ಅರ್ಕಾವತಿ ನದಿ ಪಾತ್ರವನ್ನು ಸೇರುತ್ತಿದೆ. ನ್ಯಾಷನಲ್‌ ಗ್ರೀನ್‌ ಟ್ರಿಬ್ಯುನಲ್‌ ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಹೀಗಾಗಿ ಕಲುಷಿತ ನೀರು ನದಿ ಸೇರುವುದನ್ನು ತಪ್ಪಿಸುವಕಾಮಗಾರಿ ಕೈಗೊಳ್ಳುವಂತೆ ತಾವು, ಬಿಡದಿ ಮತ್ತು ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದರು ಎಂದರು.

ಸರ್ಕಾರದ ಆದೇಶದ ಮೇರೆಗೆ ಕೆ.ಯು.ಡಬ್ಲ್ಯು. ಎಸ್‌.ಎಸ್‌.ಬಿ ಈ ಅನುದಾನವನ್ನು ಬಿಡುಗಡೆ ಮಾಡಿದೆ.ಕಲುಷಿತ ನೀರು ಸಂಸ್ಕರಣಾ ಘಟಕ ಸೇರಿದರೆ, ಅರ್ಕಾವತಿ ನದಿ ಪಾತ್ರದ ಅಭಿವೃದ್ಧಿಗೆ ಸಹಕಾ ರಿಯಾಗಲಿದೆ ಎಂದರು.

ಜಿಲ್ಲೆಯ 3 ಸರ್ಕಾರಿ ಶಾಲೆ ದತ್ತು: ಜಿಲ್ಲೆಯ 3ಸರ್ಕಾರಿ ಶಾಲೆಗಳು, ಶಿವಮೊಗ್ಗ ಜಿಲ್ಲೆ 1 ಹಾಗೂ ಚಾಮರಾಜನಗರ ಜಿಲ್ಲೆಯ 4 ಸರ್ಕಾರಿ ಶಾಲೆಯನ್ನು ಕೆಆರ್‌ಐಡಿಎಲ್‌ ದತ್ತು ಪಡೆಯಲಿದೆ. ಕನ ಕಪುರ ತಾಲೂಕು ಮರಳವಾಡಿ, ಅಣೇದೊಡ್ಡಿ ಮತ್ತು ರಾಮನಗರ ತಾಲೂಕು ಕೈಲಾಂಚ ಗ್ರಾಮದತಲಾ ಒಂದು ಸರ್ಕಾರಿ ಶಾಲೆ ದತ್ತು ಪಡೆಯುವುದಾಗಿ ತಿಳಿಸಿದರು.

ಬೆಂಬಲಿತರು ಗೆಲ್ಲುವ ವಿಶ್ವಾಸ: ಸದ್ಯದಲ್ಲೇ ನಡೆಯುವ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು, ನಾಲ್ಕೈದು ಗ್ರಾಪಂಗಳ ಅಧಿಕಾರ ತಮ್ಮ ಬೆಂಬಲಿತರ ತಕ್ಕೆಗೆ ಬೀಳುವ ವಿಶ್ವಾಸವೂ ಇದೆ ಎಂದರು. ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಸ್‌.ಮುರಳೀಧರ್‌, ಬಿಡದಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವರದರಾ ಜೇಗೌಡ, ಪ್ರಮುಖರಾದ ಎಸ್‌.ಆರ್‌.ನಾಗರಾಜ್‌,ನರಸಿಂಹಯ್ಯ, ಬಿ.ನಾಗೇಶ್‌, ಜಿ.ವಿ.ಪದ್ಮನಾಭ, ಡಿ.ನರೇಂದ್ರ, ಚಂದನ್‌, ಪಿ.ವಿ.ಬದರಿನಾಥ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next