Advertisement
ಸಮಸ್ಯೆ ಮರುಕಳಿಸಿದರೆ ಜಿಲ್ಲಾಧಿಕಾರಿಗಳೇ ಹೊಣೆಮೈಸೂರು ತಾಲೂಕಿನಲ್ಲಿ ಎರಡು ಕಡೆ ಕಲುಷಿತ ಕುಡಿಯುವ ನೀರು ಸೇವನೆಯಿಂದ ಕಾಲರಾ ಉಂಟಾಗಿದೆ. ಒಬ್ಬರು ಸತ್ತು, 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಇನ್ನು ಮುಂದೆ ಕಲುಷಿತ ನೀರು ಸೇವನೆಯಿಂದ ಇಂತಹ ಸಮಸ್ಯೆಗಳು ಮರುಕಳಿಸಿದರೆ ಆಯಾ ಜಿಲ್ಲಾಧಿಕಾರಿಯೇ ಹೊಣೆ ಯಾಗಬೇಕಾಗುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದರು.
ಮೈಸೂರು: ತಾಲೂಕಿನ ಕೆ. ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಯುವಕ ಕನಕರಾಜು ಅವರ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸರಕಾರದಿಂದ 5 ಲಕ್ಷ ರೂ.ಪರಿಹಾರ ಘೋಷಿಸಿದ ಮುಖ್ಯಮಂತ್ರಿಗಳು, ಮೃತರ ಸಹೋದರ ರವಿಗೆ ಉದ್ಯೋಗದ ಭರವಸೆ ನೀಡಿದರು.
ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಕನಕರಾಜು ಮೃತಪಟ್ಟರೆ, 60ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಘಟನೆ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಗ್ರಾಮಕ್ಕೆ ತೆರಳಿದ ಮುಖ್ಯಮಂತ್ರಿಗಳು ಗ್ರಾಮದಲ್ಲಿ ಅಸ್ವಸ್ಥರಿಗೆ ಕೈಗೊಂಡಿರುವ ತುರ್ತು ಚಿಕಿತ್ಸಾ ಕಾರ್ಯ ಹಾಗೂ ಕುಡಿಯುವ ನೀರು ಸಂಬಂಧ ಮಾಡಿರುವ ಕಾರ್ಯಗಳನ್ನು ಅವಲೋಕಿಸಿದರು.