ನವದೆಹಲಿ: ಕಳೆದ ವಾರ ದುರ್ಗಾ ಪೂಜೆ ಹಬ್ಬ ನಡೆದ ನಂತರ ಪಶ್ಚಿಮಬಂಗಾಳದಲ್ಲಿ ಕೆಲವು ದಿನಗಳಿಂದ ಕೋವಿಡ್ 19 ಸೋಂಕು ಪ್ರಕರಣ ರಾಜ್ಯದಲ್ಲಿ ಹೆಚ್ಚಳವಾಗತೊಡಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ತಿಳಿಸಿದೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!
ಭಾನುವಾರ ಪಶ್ಚಿಮಬಂಗಾಳದಲ್ಲಿ 989 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಶನಿವಾರ 974 ಪ್ರಕರಣ ಪತ್ತೆಯಾಗಿತ್ತು. ಅಲ್ಲದೇ ಅಕ್ಟೋಬರ್ 22ರಂದು 846 ಪ್ರಕರಣ, ಅ.21ರಂದು 833 ಹಾಗೂ ಅಕ್ಟೋಬರ್ 20ರಂದು 867 ಪ್ರಕರಣ ವರದಿಯಾಗಿತ್ತು.
ಕೋವಿಡ್ ಸೋಂಕಿನಿಂದಾಗಿ ಭಾನುವಾರ ಪಶ್ಚಿಮಬಂಗಾಳದಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದರು. ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 19,055ಕ್ಕೆ ಏರಿಕೆಯಾಗಿದೆ. ಅಲ್ಲದೇ ರಾಜ್ಯದಲ್ಲಿನ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 15,86,455ಕ್ಕೆ ಹೆಚ್ಚಳವಾಗಿದೆ.
ಕೋಲ್ಕತಾದಲ್ಲಿ ಅತೀ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 7,882ಕ್ಕೆ ಏರಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಕಂಟೈನ್ಮೆಂಟ್ ವಲಯಗಳು ಮತ್ತೆ ಗುರುತಿಸಲಾಗುತ್ತಿದೆ ಎಂದು ವರದಿ ಹೇಳಿದೆ.