Advertisement

ಮಕ್ಕಳ ಸಹಾಯವಾಣಿ ಸಂಪರ್ಕಿಸಿಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

03:47 PM Feb 17, 2020 | Suhan S |

ಹಾನಗಲ್ಲ: ಚಿಣ್ಣರ ಕಲಿಕೆಯಲ್ಲಿ ಮಕ್ಕಳ ಮೂಲಭೂತ ಹಕ್ಕುಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅದರಲ್ಲೂ 18 ವರ್ಷದ ಒಳಗಿನ ಮಕ್ಕಳ ಮಾನಸಿಕ ಬೆಳವಣಿಗೆ ಮತ್ತು ದೈಹಿಕ ಬೆಳವಣಿಗೆಗಳಲ್ಲಿ ಮೂಲಭೂತ ಹಕ್ಕುಗಳು ಗಮನಾರ್ಹ ಕೊಡುಗೆ ನೀಡುತ್ತವೆ ಎಂದು ಮಕ್ಕಳ ಸಹಾಯವಾಣಿಯ ಸಂಯೋಜಕಿ ಪ್ರೇಮಾ ಅಟವಾಳಗಿ ತಿಳಿಸಿದರು.

Advertisement

ರೋಶನಿ ಸಮಾಜ ಸೇವಾ ಸಂಸ್ಥೆ ಮತ್ತು ಚಿಕ್ಕಾಂಶಿ ಹೊಸೂರ ಗ್ರಾಪಂ ಆಶ್ರಯದಲ್ಲಿ ಮಕ್ಕಳ ಸಹಾಯವಾಣಿಯ ತೆರೆದ ಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಕ್ಕಾಂಶಿಹೊಸೂರ ಪ್ರೌಢಶಾಲೆಗೆ ಕುಡಿಯುವ ನೀರು, ಕಾಂಪೌಂಡ್‌, ಸೈಕಲ್‌ ಸ್ಟ್ಯಾಂಡ್‌ ವ್ಯವಸ್ಥೆ, ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಅಡುಗೆ ಸಹಾಯಕರು, ಬ್ಯಾಟರಿ, ಹೈಟೆಕ್‌ ಶೌಚಾಲಯ ವ್ಯವಸ್ಥೆ, 1ನೇ ಅಂಗನವಾಡಿಗೆ ಶೌಚಾಲಯ, ನೀರಿನ ವ್ಯವಸ್ಥೆ, 2 ನೇ ಅಂಗನವಾಡಿಗೆ ನೀರಿನ ಮೋಟರ್‌ ರಿಪೇರಿ, ಕೋಣನಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್‌ ವ್ಯವಸ್ಥೆ, ಅಂಗನವಾಡಿಗೆ ಶೌಚಾಲಯ ವ್ಯವಸ್ಥೆ ಹೀಗೆ ಮಕ್ಕಳು ತಮ್ಮ ಶಾಲೆಯ ಸಮಸ್ಯೆಗಳನ್ನು ಚುನಾಯಿತ ಪ್ರತಿನಿಧಿ  ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಾಂಡುರಂಗ ಘನಾತೆ ಮಕ್ಕಳ ಸಮಸ್ಯೆ ಆಲಿಸಿ ಮಾತನಾಡಿ, ಮಕ್ಕಳು ತಮಗಾಗಿ ಇರುವ ಸಹಾಯವಾಣಿ 1098 ರ ಮೂಲಕ ತಮ್ಮ ಹಕ್ಕುಗಳ ಕುರಿತು ಪರಿಹಾರ ಕಂಡುಕೊಳ್ಳಬಹುದಾಗಿದೆ. ನಮ್ಮ ಪಂಚಾಯಿತಿಯಿಂದ ಮಕ್ಕಳು ಹಾಗೂ ಶಿಕ್ಷಕರು ಹೇಳಿದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಉಪಾಧ್ಯಕ್ಷೆ ರಶೀದಾಬಾನು ಹೊಂಕಣ ಹಾಗೂ ಚಿಕೌRಂಶಿ ಹೊಸೂರು, ಕೋಣನಕೊಪ್ಪ, ಕೋಣನಕೊಪ್ಪ ಪ್ಲಾಟ್‌, ಮತ್ತಿಹಳ್ಳಿ, ಸರಕಾರಿ ಶಾಲೆ ಶಿಕ್ಷಕರು ಮತ್ತು ಅಂಗನವಾಡಿ ಶಾಲೆಯ ಕಾರ್ಯಕರ್ತೆಯರು ಶಾಲಾ ಮಕ್ಕಳು ಮತ್ತು ಊರಿನ ಹಿರಿಯರು ಈ ತೆರೆದ ಮನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next