ತೆಕ್ಕಟ್ಟೆ (ದಬ್ಬೆಕಟ್ಟೆ ): ಕುಂದಾಪುರ ತಾಲೂಕಿನ ಜಿ.ಪಂ. ವ್ಯಾಪ್ತಿಯ ತೆಕ್ಕಟ್ಟೆ -ದಬ್ಬೆಕಟ್ಟೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಲೋಕೋಪಯೋಗಿ ಇಲಾಖೆಯ ಲೆಕ್ಕ ಶೀರ್ಷಿಕೆ 50-54 ರ ಅನುದಾನದಲ್ಲಿ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವಿಶೇಷ ಮುತುವರ್ಜಿಯಿಂದ 10 ಕೋಟಿ ರೂ. ಮಂಜೂರಾಗಿದ್ದು ಸುಮಾರು 10 ಕಿ.ಮೀ. ತೆಕ್ಕಟ್ಟೆ -ದಬ್ಬೆಕಟ್ಟೆ ಸಂಪರ್ಕ ರಸ್ತೆ ಕಾಮಗಾರಿಯೂ ಯೋಜನೆ ಕಾರ್ಯರೂಪದ ಲ್ಲಿದ್ದು ವರ್ಷದ ಅಂತ್ಯದೊಳಗೆ ಕಾಮಗಾರಿ ಆರಂಭಗೊಳ್ಳಲಿದೆ.
ರಸ್ತೆಯು ಸಂಪೂರ್ಣ ಹದಗೆಟ್ಟಿರುವುದು ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ ಈ ಭಾಗದಲ್ಲಿ ಘನ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ರಸ್ತೆ ಹದಗೆಟ್ಟು ಸಾರ್ವಜನಿಕರು ಕೂಡ ತೀವ್ರವಾದ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಉದಯವಾಣಿ ಜನಪರ ಕಾಳಜಿ ವಹಿಸಿ ಹಲವು ಬಾರಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಹಿನ್ನೆಲೆಯಲ್ಲಿ ಅಪಾಯದಲ್ಲಿ ಮಲ್ಯಾಡಿ ಸಂಪರ್ಕ ಕಿರುಸೇತುವೆ: ಕಳೆದ ಹಲವು ದಶಕಗಳಿಂದಲೂ ಗ್ರಾಮಸ್ಥರ ಕನಸಾಗಿ ಉಳಿದಿರುವ ಮಲ್ಯಾಡಿ ಕಿರುಸೇತುವೆ ಹಿಂದೆ ನಿರ್ಮಾಣದ ಸಂದರ್ಭದಲ್ಲಿ ಸೇತುವೆಯ ತಳಭಾಗದಲ್ಲಿ ಸಿಮೆಂಟ್ ಪೈಪ್‌ಗ್ಳನ್ನು ಅಳವಡಿಸಿ ನಿರ್ಮಿಸಲಾಗಿತ್ತು. ಇದರೆ ತೆಕ್ಕಟ್ಟೆ – ದಬ್ಬೆಕಟ್ಟೆ ಈ ಪ್ರಮುಖ ಸಂಪರ್ಕ ರಸ್ತೆಯಲ್ಲಿ ಘನವಾಹನಗಳ ಸಂಚಾರದಿಂದಾಗಿ ಮಳೆಗಾಲದ ಸಂದರ್ಭ ಸೇತುವೆಯ ತಳಭಾಗದಲ್ಲಿ ನೀರಿನ ಒಳ ಹರಿವು ಹೆಚ್ಚಾಗಿ ಮರಮಟ್ಟುಗಳು ತೇಲಿ ಬಂದು ಸೇತುವೆಯ ತಳ ಭಾಗದಲ್ಲಿ ಸಂಗ್ರಹವಾಗುವುದರಿಂದ ಈ ಕಿರು ಸೇತುವೆ ಅಪಾಯದ ಮಟ್ಟವನ್ನು ತಲುಪಿದೆ.
ಅವ್ಯವಸ್ಥಿತ ಒಳಚರಂಡಿ: ಸುಮಾರು 10 ಕಿ.ಮೀ. ಗ್ರಾಮೀಣ ಭಾಗಗಳ ಸಂಪರ್ಕ ಕಲ್ಪಿಸುವ ತೆಕ್ಕಟ್ಟೆ – ದಬ್ಬೆಕಟ್ಟೆ ರಸ್ತೆಯೂ ಬರೀ ತೇಪೆ ಕಾರ್ಯದಲ್ಲಿಯೇ ಕಳೆದ ಹಲವು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆಯಾದರೂ ಕೂಡ ಈ ರಸ್ತೆಗೆ ವ್ಯವಸ್ಥಿತವಾದ ಒಳ ಚರಂಡಿಗಳ ಕೊರತೆ ಎದ್ದು ಕಾಣುತ್ತಿರುವುದು ಮಾತ್ರ ವಾಸ್ತವ.
ಭಾರತ ಸರಕಾರ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ 17-8 -2007ರಿಂದ 24-4-2008 ರ ಅವಧಿಯಲ್ಲಿ ತೆಕ್ಕಟ್ಟೆ-ದಬ್ಬೆಕಟ್ಟೆಯ ವರೆಗೆ ಒಟ್ಟು 2.14.96 ಕೋಟಿ ರೂ. ವೆಚ್ಚದ ಸುಮಾರು 10 ಕಿ.ಮೀ. ರಸ್ತೆಯ ಕಾಮಗಾರಿ ಹಾಗೂ ಐದು ವರ್ಷಗಳ ಮೇಲ್ವಿಚಾರಣೆಯನ್ನು ಸ್ಥಳೀಯ ಗುತ್ತಿಗೆದಾರರು ನಿರ್ವಹಿಸುತ್ತಿದ್ದರು ಆದರೆ ಕಾಮಗಾರಿಗಳು ನಡೆದು ಕೆಲವೇ ವರ್ಷಗಳಲ್ಲಿ ರಸ್ತೆಯ ಮೂಲ ಸ್ವರೂಪಗಳನ್ನೇ ಕಳೆದುಕೊಂಡಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.
ಲೋಕೋಪಯೋಗಿ ಇಲಾಖೆಯಿಂದ ತೆಕ್ಕಟ್ಟೆ -ದಬ್ಬೆಕಟ್ಟೆ ಜಿಲ್ಲಾ ಪಂಚಾಯತ್ ರಸ್ತೆಗೆ ಒನ್ ಟೈಮ್ ಇಂಪ್ರೂಮೆಂಟ್‌ನಲ್ಲಿ 10 ಕೋಟಿ ರೂ. ಮಂಜೂರಾಗಿದ್ದು ತೆಕ್ಕಟ್ಟೆಯಿಂದ ಉಳೂ¤ರು ಗ್ರಾಮದ ವರೆಗೆ ಸುಮಾರು 4 ಕಿ.ಮೀ. ಸಂಪೂರ್ಣ ಕಾಂಕ್ರೀಟ್ ರಸ್ತೆ ಹಾಗೂ ಮಲ್ಯಾಡಿ ಕಿರು ಸೇತುವೆಗೆ ನಿರ್ಮಾಣಕ್ಕೆ ಸುಮಾರು 60 ಲಕ್ಷ ರೂ. ಸೇರಿದಂತೆ ಸುವ್ಯವಸ್ಥಿತವಾದ ರಸ್ತೆಗೆ ಯೋಜನೆ ರೂಪಿಸಲಾಗುತ್ತಿದೆ. ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ಸೆಂಟ್ರಲ್ ರೋಡ್ ಫಂಡ್‌ನಲ್ಲಿ (ಸಿಆರ್‌ಎಫ್) 28 ಕೋಟಿ ರೂ. ಮಂಜೂರಾಗಿದೆ, ಪಾಂಡೇಶ್ವರ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 3 ಕೋಟಿ ರೂ., ಹಾಲಾಡಿ-ಕಕ್ಕುಂಜೆ ರೂ. 3 ಕೋಟಿ ಡಾಮರ್‌ರಸ್ತೆ, ಬಾರಕೂರು-ಮೈರ್‌ಕೊಮೆ 3 ಕೋಟಿ ರೂ. ರಸ್ತೆ, ಮುದ್ದುಮನೆ ಕಾಂಕ್ರೇಟ್ ರಸ್ತೆ ನಿರ್ಮಾಣಕ್ಕೆ 5 ಕೋಟಿ ರೂ., ಸೇತುವೆ ನಿರ್ಮಾಣಕ್ಕೆ 10 ಕೋಟಿ ರೂ. ಸೇರಿದಂತೆ ಹಲವು ಮೊಳಹಳ್ಳಿ ಹಾಗೂ ಮುಖ್ಯಮಂತ್ರಿ ಸಡಕ್‌ಯೋಜನೆಯಲ್ಲಿ ಮೊಳಹಳ್ಳಿ ಹಾಗೂ ಗೋಪಾಡಿ – ಚಾರುಕೊಟ್ಟಿಗೆ ಸಂಪರ್ಕ ರಸ್ತೆ ಸಂಪೂರ್ಣ ಕಾಂಕ್ರೀಟೀಕರಣವಾಗಲಿದೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರು, ಕುಂದಾಪುರ ವಿಧಾನ ಸಭಾ ಕ್ಷೇತ್ರ
ಕುಂದಾಪುರ ತಾಲೂಕಿನ ಬೀಜಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ತೆಕ್ಕಟ್ಟೆ -ದಬ್ಬೆಕಟ್ಟೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಕಳೆದ ಹಲವು ವರ್ಷಗಳಿಂದಲೂ ಅಭಿವೃದ್ಧಿ ಕಾಣದೆ ನನೆಗುದಿಯಲ್ಲಿರುವುದನ್ನು ಕಂಡ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತನ್ನ ವಿಶೇಷ ಮುತುವರ್ಜಿಯಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ರೂ. ಮಂಜೂರು ಮಾಡಿರುವುದು ಸಂತಸ ತಂದಿದೆ.
– ಶ್ರೀಲತಾ ಸುರೇಶ್ ಶೆಟ್ಟಿ , ಸದಸ್ಯರು, ಬೀಜಾಡಿ ಜಿಲ್ಲಾ ಪಂಚಾಯತ್