Advertisement

ಸಂಪರ್ಕ ರಹಿತ ಸ್ಯಾನಿಟೈಸರ್‌ ಅಭಿವೃದ್ಧಿ

11:54 PM May 14, 2020 | Hari Prasad |

ಹೈದರಾಬಾದ್‌ನ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪ್ರಯೋಗಾಲಯದಲ್ಲಿ ಸಂಪರ್ಕ ರಹಿತ ಸ್ಯಾನಿಟೈಸರ್‌ ಅಭಿವೃದ್ಧಿಪಡಿಸಲಾಗಿದೆ.

Advertisement

ಮೊಬೈಲ್‌ ಫೋನ್‌, ಐ-ಪ್ಯಾಡ್‌, ಲ್ಯಾಪ್‌ಟಾಪ್‌, ನೋಟ್ಸ್‌, ಚೆಕ್‌ ಹಾಳೆ, ಚಲನ್‌, ಪಾಸ್‌ಬುಕ್‌, ಪೇಪರ್‌, ಎನ್ವಲಪ್‌ ಮತ್ತಿತರ ವಸ್ತುಗಳ ಸೋಂಕು ನಿವಾರಣೆಗೆ ಈ ಸ್ಯಾನಿಟೈಸರ್‌ ಬಳಸಬಹುದಾಗಿದೆ.

ಇದಕ್ಕೆ ರಕ್ಷಣಾ ಸಂಶೋಧನೆ ಅತಿ ನೇರಳೆ ಸೋಂಕು ನಿವಾರಕ (ಡಿಆರ್‌ಯುವಿಎಸ್‌) ಎಂದು ಹೆಸರಿಡಲಾಗಿದೆ. ಅಲ್ಲದೇ ನೋಟುಗಳನ್ನು ಶುಚಿಗೊಳಿಸಲು ಸ್ವಯಂ ವಿದ್ಯುನ್ಮಾನ ಯುವಿಸಿ ಕರೆನ್ಸಿ ಸೋಂಕು ನಿವಾರಕ ಸಾಧನವನ್ನೂ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಡಿಆರ್‌ಯು ವಿಎಸ್‌ ಬಾಕ್ಸ್‌ನೊಳಗೆ ಸೋಂಕಿತ ವಸ್ತುಗಳನ್ನು ಹಾಕಿದರೆ ತನ್ನಿಂತಾನೆ ಇದು ಶುಚಿಗೊಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next