Advertisement

ಮೂರನೇ ಒಂದು ಭಾಗದಷ್ಟು ಜನರು ಬಡತನ ರೇಖೆಯಲ್ಲಿ ಬದುಕುತ್ತಿದ್ದಾರೆ : ವರದಿ

09:45 AM Nov 16, 2019 | Team Udayavani |

ಹೊಸದಿಲ್ಲಿ: ಮನುಷ್ಯನ ತಲಾ ಖರ್ಚು ವೆಚ್ಚಗಳ ಪ್ರಮಾಣ ಕುಸಿತಗೊಂಡಿದ್ದು, ದೇಶದ ಮೂರನೇ ಒಂದು ಭಾಗದಷ್ಟು ಜನರು ಬಡತನ ರೇಖೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಶುಕ್ರವಾರ ಬಿಸ್‌ನೆಸ್‌ ಸ್ಟಾಂಡರ್ಡ್‌ ಖರ್ಚುವೆಚ್ಚ ಆಧಾರಿತ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಶೇ.10 ರಿಂದ 20 ರಷ್ಟು ಜನರು ತಮ್ಮ ಖರ್ಚಿನ ಪ್ರಮಾಣದಲ್ಲಿ ಶೇ.3.7 ರಷ್ಟು ಕಡಿತಗೊಳಿಸಿ¨ªಾರೆ ಎಂದು ವರದಿ ಉಲ್ಲೇಖ ಮಾಡಿದೆ.

ಸಮೀಕ್ಷೆಯಲ್ಲಿ ಬಡತನದ ಪ್ರಮಾಣವನ್ನು ಅಳೆಯಲು ತಲಾ ಖರ್ಚುವೆಚ್ಚಗಳನ್ನು ಮಾಪಕವಾಗಿ ಬಳಸಿದ್ದು, 2017-18 ರಲ್ಲಿ ಶೇ.33 ರಷ್ಟು ಜನರು ಬಡತನ ರೇಖೆಯಲ್ಲಿ ಬದುಕಿದ್ದರು ಎಂದು ವರದಿ ತಿಳಿಸಿದೆ. 2011-12 ರಲ್ಲಿ ಇದರ ಪ್ರಮಾಣ ಶೇ.10 ಕ್ಕಿಂತ ಹೆಚ್ಚಿತ್ತು ಎನ್ನಲಾಗಿದೆ.

2016 ರ ನವೆಂಬರ್‌ ಅಲ್ಲಿ ಜಾರಿಯಾದ ನಗದು ಅಪಮೌಲೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ ಮತ್ತು 2017 ರ ಜುಲೈ ಅಲ್ಲಿ ಜಾರಿಗೆ ತರಲಾದ ಸರಕು ಮತ್ತು ಸೇವಾ ತೆರಿಗೆ ಈ ಬೆಳವಣಿಗೆಗೆ ಮುಖ್ಯ ಕಾರಣವಾಗಿದ್ದು, ಉದ್ಯೋಗ ನಷ್ಟ ಮತ್ತು ಉದ್ಯಮ ಸ್ಥಗಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next