Advertisement

ನಕಲಿ ಮದ್ಯ ಕುಡಿದು 24 ಮಂದಿ ಸಾವು: ಮೂರು ತಂಡಗಳಿಂದ ತನಿಖೆ

12:40 PM Nov 05, 2021 | Team Udayavani |

ಗೋಪಾಲ್ ಗಂಜ್: ನಕಲಿ ಮದ್ಯ ಕುಡಿದು 24 ಮಂದಿ ಸಾವನ್ನಪ್ಪಿ, ಹಲವರು ಅಸ್ವಸ್ಥರಾಗಿರುವ ಘಟನೆ ಬಿಹಾರದ ಗೋಪಾಲಗಂಜ್ ಮತ್ತು ಚಂಪಾರನ್ ಜಿಲ್ಲೆಗಳಲ್ಲಿ ನಡೆದಿದೆ. ಕಳೆದೆರಡು ದಿನಗಳಲ್ಲಿ ಇಲ್ಲಿ ಮದ್ಯ ನಿಷೇಧ ಹೇರಲಾಗಿತ್ತು.

Advertisement

ಪಶ್ಚಿಮ ಚಂಪಾರಣ್ ಜಿಲ್ಲೆಯ ಮುಖ್ಯ ಕಛೇರಿ ಬೆಟ್ಟಿಯಾದಲ್ಲಿನ ತೆಲ್ಹುವಾ ಗ್ರಾಮದಲ್ಲಿ ಗುರುವಾರ ಎಂಟು ಜನರು ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪಿದರೆ, ಗೋಪಾಲ್‌ಗಂಜ್‌ನಲ್ಲಿ ಶಂಕಿತ ನಕಲಿ ಮದ್ಯ ಸೇವನೆಯ ಮತ್ತೊಂದು ಘಟನೆಯಲ್ಲಿ ಸಾವಿನ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.

ಉಭಯ ಜಿಲ್ಲೆಗಳ ಆಡಳಿತವು ಇದುವರೆಗೆ ಸಾವಿನ ಕಾರಣವನ್ನು ದೃಢಪಡಿಸಿಲ್ಲ. ತೆಲ್ಹುವಾ ಕಳ್ಳಭಟ್ಟಿ ದುರಂತವು ಕಳೆದ ಹತ್ತು ದಿನಗಳಲ್ಲಿ ಉತ್ತರ ಬಿಹಾರದಲ್ಲಿ ಸಂಭವಿಸಿದ ಮೂರನೇ ಘಟನೆಯಾಗಿದೆ.

ಇದನ್ನೂ ಓದಿ:ಪುನೀತ್ ನನಗಿಂತ ಮೂರು ತಿಂಗಳು ದೊಡ್ಡವರು : ಕಂಬನಿ ಮಿಡಿದ ಸೂರ್ಯ

ಘಟನೆಯ ಬಳಿಕ ಬಿಹಾರ ಸಚಿವ ಜನಕ್ ರಾಮ್ ಗೋಪಾಲಗಂಜ್‌ಗೆ ಧಾವಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಮನೆಗಳಿಗೆ ಭೇಟಿ ನೀಡಿದ್ದೇನೆ. ಇದು ಎನ್‌ಡಿಎ ಸರ್ಕಾರದ ಮಾನಹಾನಿ ಮಾಡುವ ಪಿತೂರಿಯಾಗಿರಬಹುದು” ಎಂದಿದ್ದಾರೆ.

Advertisement

ಗೋಪಾಲಗಂಜ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಮಾತನಾಡಿ, “ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ಮುಹಮ್ಮದ್‌ಪುರ ಗ್ರಾಮದಲ್ಲಿ ಕೆಲವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶವಪರೀಕ್ಷೆ ವರದಿಗಳು ಇನ್ನೂ ಬರದ ಕಾರಣ ಅವರ ಸಾವಿಗೆ ಕಾರಣವನ್ನು ದೃಢೀಕರಿಸಲಾಗುವುದಿಲ್ಲ. ಮೂರು ತಂಡಗಳು ಪ್ರಕರಣದ ತನಿಖೆ ನಡೆಸುತ್ತಿವೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next