ಯಳಂದೂರು: ಕೋವಿಡ್ ನೆಪವೊಡ್ಡಿ ಚಿನ್ನದಸಾಲವನ್ನು ನೀಡಲು ಬ್ಯಾಂಕ್‌ನ ಸಿಬ್ಬಂದಿ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಪರದಾಡಿದರು.
ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ಶುಕ್ರವಾರ ಚಿನ್ನದ ಸಾಲವನ್ನು ನೀಡಲು ಬ್ಯಾಂಕ್‌ನ ವ್ಯವಸ್ಥಾಪಕರು ನಿರಾಕರಿಸಿದ್ದಾರೆ. ಇದರಿಂದ ಹತ್ತಾರು ಗ್ರಾಹಕರುವಾಪಸ್ಸಾದ ಘಟನೆ ಜರುಗಿದೆ. ತಾವು ಇದೇ ಬ್ಯಾಂಕಿನಲ್ಲಿಚಿನ್ನವನ್ನು ಇಟ್ಟಿದ್ದು ಇದನ್ನು ಬಿಡಿಸಿಕೊಳ್ಳಲು ಮಾತ್ರಬ್ಯಾಂಕಿನವರು ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಬ್ಯಾಂಕಿನ ನಮ್ಮ ಖಾತೆಯಿಂದಲೂ ಹಣವನ್ನು ಕಡಿತಮಾಡಲಾಗಿದೆ. ಆದರೆ, ಚಿನ್ನವನ್ನು ಇಡಲು ಕೋವಿಡ್‌ನಿಯಮ ಪಾಲನೆಗೆ ಸೂಚನೆ ಇರುವುದರಿಂದ ನಾವು ಸಾಲ ಕೊಡಲು ಸಾಧ್ಯವಿಲ್ಲ ಎಂದು ವ್ಯವಸ್ಥಾಪಕರುಗ್ರಾಹಕರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಈಗ ಮತ್ತೆ ವಾರಾಂತ್ಯ ಲಾಕ್‌ಡೌನ್ ಮಾಡಲು ಸಿದ್ಧತೆ ನಡೆಯುತ್ತಿದೆ. ರೈತರು ಹಾಗೂ ಕೂಲಿ ಕೆಲಸಮಾಡುವರು ತಮ್ಮಲ್ಲಿರುವ ಚಿನ್ನಾಭರಣಗಳನ್ನುಬ್ಯಾಂಕಿನಲ್ಲಿಟ್ಟು ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ.”ನಮಗೆ ಮೇಲಧಿಕಾರಿಗಳಿಂದ ಆದೇಶ ಬಂದಿದೆ. ಕೋವಿಡ್ ನಿಯಮ ಪಾಲನೆಯಾಗಬೇಕಾಗಿದೆ.
ಚಿನ್ನವನ್ನು ಗ್ರಾಹಕರು ಇಡುವ ಸಂದರ್ಭದಲ್ಲಿ ವೈರಸ್ ತಗಲುವ ಸಾಧ್ಯತೆಗಳಿದ್ದು ನಾವು ಚಿನ್ನಾಭರಣಇಟ್ಟುಕೊಳ್ಳುತ್ತಿಲ್ಲ. ಬೇರೆ ವ್ಯವಹಾರಕ್ಕೆ ಮಾತ್ರಅವಕಾಶವಿದೆ’ ಎಂದು ಬ್ಯಾಂಕ್‌ನವರು ಸಬೂಬುನೀಡಿ ವಾಪಸ್ಸು ಕಳುಹಿಸುತ್ತಿದ್ದಾರೆ. ಇದು ಸರಿಯಲ್ಲ. ಗ್ರಾಹಕರು ಕಟ್ಟುವ ಹಣವನ್ನು ಕೈಯಿಂದ ಮುಟ್ಟಿರುತ್ತಾರೆ. ಇದನ್ನು ಪಡೆಯುವಾಗ ಸೋಂಕುತಗುಲುವುದಿಲ್ಲವೆ?, ಅಲ್ಲದೇ ಪಟ್ಟಣದ ಎಂಡಿಸಿಸಿಬ್ಯಾಂಕ್ ಮತ್ತಿತರ ಬ್ಯಾಂಕ್‌ಗಳಲ್ಲಿ ಸಾಲ ಕೊಡುತ್ತಿದ್ದಾರೆ. ಈ ನಿಯಮ ಈ ಬ್ಯಾಂಕುಗಳಿಗೆ ಇಲ್ಲವೆ ಎಂದುಗ್ರಾಹಕರಾದ ಜೈಗುರು, ರತ್ನಮ್ಮ, ಚಂದು, ಕುಮಾರ, ಕೆಂಪಮ್ಮ, ಕಮಲಮ್ಮ ಮತ್ತಿತರರು ಪ್ರಶ್ನಿಸಿದ್ದಾರೆ.
ಏ.30 ರವರಗೆ ಚಿನ್ನ ಸಾಲ ಸಿಗಲ್ಲ: ವ್ಯವಸ್ಥಾಪಕಿ :
ಕೋವಿಡ್ ನಿಯಮ ಪಾಲಿಸಲು ನಮಗೆ ಮೇಲಧಿಕಾರಿಗಳಿಂದ ಆದೇಶವಾಗಿದೆ. ಏ.23 ರಿಂದ 30 ರ ವರಗೆಯಾವುದೇ ಚಿನ್ನಾಭರಣ ಇಟ್ಟುಕೊಳ್ಳಲು ಅವಕಾಶವಿಲ್ಲ. ಅಲ್ಲದೆ ಬ್ಯಾಂಕಿನ ಸಮಯವನ್ನು ಗ್ರಾಹಕರ ವ್ಯವಹಾರಕ್ಕಾಗಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಸಯಮ ನಿಗದಿಯಾಗಿದೆ. ಇದಾದ ಬಳಿಕ ಸಂಜೆ 4ರತನಕ ಬ್ಯಾಂಕಿನ ವ್ಯವಹಾರಗಳಿಗೆ ಅವಕಾಶವಿದೆ. ಹಾಗಾಗಿ ಚಿನ್ನವನ್ನು ನಾವು ಇಟ್ಟುಕೊಳ್ಳುತ್ತಿಲ್ಲ ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಚಂದ್ರಕಲಾ ತಿಳಿಸಿದ್ದಾರೆ