Advertisement

ಟಿಎಪಿಸಿಎಂಎಸ್‌ನಿಂದ ಕಲ್ಯಾಣಮಂಟಪ ನಿರ್ಮಾಣ

12:09 PM Nov 26, 2021 | Team Udayavani |

ಚಿಂಚೋಳಿ: ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಡಿಯಲ್ಲಿ ಕಲ್ಯಾಣ ಕಾರ್ಯಕ್ರಮಕ್ಕಾಗಿ ಸಂಘದ ಆವರಣದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದ್ದು ಶಾಸಕರು, ಸಂಸದರು ಸರ್ಕಾರದಿಂದ ದೇಣಿಗೆ ಕೊಡಿಸಬೇಕು ಎಂದು ಸಂಘದ ಅಧ್ಯಕ್ಷ ರಮೇಶ ಯಾಕಾಪುರ ಕೋರಿದರು.

Advertisement

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ 2019-20ನೇ ಸಾಲಿನ 62ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಆಶ್ರಯದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಕಲ್ಯಾಣ ಮಂಟಪ ನಿರ್ಮಿಸಲು ಪ್ರತಿಯೊಬ್ಬ ಸದಸ್ಯರು ಒಂದು ಸಾವಿರ ರೂ. ದೇಣಿಗೆ ನೀಡಿದರೆ ಅನುಕೂಲವಾಗುತ್ತದೆ ಎಂದರು.

ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಚಂದಾಪುರ ನಗರದಲ್ಲಿ ಸರ್ವೇ ನಂ.15ರಲ್ಲಿ ಸಂಘದ ಆಸ್ತಿಯನ್ನು 1962-63ನೇ ಸಾಲಿನಲ್ಲಿ ಕೇವಲ 500ರೂ. ಗಳಲ್ಲಿ ಖರೀದಿಸಲಾಗಿದೆ. ಆದರೆ ಸಂಘದ ಹೆಸರಿನಲ್ಲಿ ನೋಂದಣಿ ಆಗಿಲ್ಲ. ಪೊಲೀಸ್‌ ಠಾಣೆ ಹತ್ತಿರ ಸಂಘದ ಆಶ್ರಯದಲ್ಲಿ ಆಸ್ತಿ ಇದೆ. ಅದನ್ನು ಬೇರೆಯವರು ಕಬ್ಬೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಲ್ಲಿಯ ಅನ ಧಿಕೃತ ಶೆಡ್‌ಗಳನ್ನು ತೆರವುಗೊಳಿಸಬೇಕಿದೆ. ಬೀಜ, ರಸಗೊಬ್ಬರ, ಶುದ್ಧ ನೀರು ಪೂರೈಕೆ ಇನ್ನಿತರ ಆದಾಯದಿಂದ ಸಂಘಕ್ಕೆ ಲಾಭವಾಗುತ್ತಿದೆ ಎಂದರು.

62ನೇ ವಾರ್ಷಿಕ ಮಹಾಸಭೆಯಲ್ಲಿ ಶಂಕರ ಭಗವಂತಿ, ಸಂಗಪ್ಪ ವಲಗಿರಿ, ಅಮೃತರಾವ್‌ ದರವೇಶ ಸಂಘದಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಹಣಕಾಸಿನ ವ್ಯವಹಾರಗಳ ಕುರಿತು ಚರ್ಚಿಸಿದರು.ನಿರ್ದೇಶಕರಾದ ಪ್ರಭುಲಿಂಗ ಲೇವಡಿ, ಅಬ್ದುಲ್‌ ಬಾಸೀತ್‌, ವೀರಶೆಟ್ಟಿ ಪಾಟೀಲ, ರಜಿಯಾಬೇಗಂ ನಾವದಗಿ, ಪೀರಪ್ಪ ಸಾಸರಗಾಂವ, ಸಂಘದ ಖರ್ಚು-ವೆಚ್ಚಗಳ ಮತ್ತು ಜಮೆ ಕುರಿತು ಸಭೆಯಲ್ಲಿ ಚರ್ಚಿಸಿದರು. ಅಧ್ಯಕ್ಷರು ಸದಸ್ಯರು, ನಿರ್ದೇಶಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ವ್ಯವಸ್ಥಾಪಕ ವಿಜಯಕುಮಾರ ಶಾಬಾದಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next