Advertisement
ಇಲ್ಲಿ ಒಟ್ಟು 12 ಕುಟುಂಬಗಳು ದಾಖಲೆಗಳನ್ನು ಹೊಂದಿಲ್ಲ. ಈ ಕಾರಣದಿಂದ ಅವರು ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆಯುವಲ್ಲಿ ಅರ್ಹರಾಗುವುದಿಲ್ಲ. ಇದನ್ನು ಮನಗಂಡು ಕಮಲಾ ಕೈಕಾರ ಅವರ ಕುಟುಂಬವನ್ನು ಆಯ್ಕೆ ಮಾಡಿದ ಒಳಮೊಗ್ರು ಗ್ರಾ.ಪಂ. ಅವರಿಗೆ ಒಂದೇ ದಿನದಲ್ಲಿ ಶೌಚಾಲಯ ನಿರ್ಮಿಸಿ ಕೊಟ್ಟಿದೆ. ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಹಾಗೂ ಅಧಿಕಾರಿಗಳ ಸಹಕಾರದಿಂದ ಈ ಕಾರ್ಯಕೈಗೂಡಿದೆ.
ಶೌಚಾಲಯ ನಿರ್ಮಾಣಕ್ಕೆ ಬೇಕಾದ ಅಗತ್ಯ ಸೊತ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಕೆಲಸ ಪ್ರಾರಂಭಿಸಲಾಯಿತು. ಬೆಳಗ್ಗೆ ಕೆಲಸ ಪ್ರಾರಂಭಿಸಿ ಸಂಜೆ ಹೊತ್ತಿಗೆ ಪೂರ್ಣಗೊಳಿಸಲಾಯಿತು. ಒಳಮೂಗ್ರು ಗ್ರಾ.ಪಂ.ನ ಈ ಕಾರ್ಯ ಇತರ ಪಂಚಾಯತ್‌ಗಳಿಗೆ ಮಾದರಿಯಾಗಿದೆ. ಮನೆ ನಂಬರ್, ಹಕ್ಕುಪತ್ರ ಇಲ್ಲದೆ ಸರಕಾರಿ ಸೌಲಭ್ಯಗಳಿಂದ ವಂಚಿತರಾದ ಎಲ್ಲ ಬಡವರ್ಗದ ಕುಟುಂಬಗಳ ಅಭಿವೃದ್ಧಿಯಲ್ಲಿ ಅಧಿಕಾರಿಗಳು ಕೆಲಸ ಮಾಡಿದಾಗ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಯಿತು. ಎಲ್ಲರಿಗೂ ಶೌಚಾಲಯ
ಡಿಸೆಂಬರ್ ಅಂತ್ಯದೊಳಗೆ ಒಳಮೊಗ್ರು ಗ್ರಾ. ಪಂ. ವ್ಯಾಪ್ತಿಯ ಎಲ್ಲ ಮನೆಗಳಿಗೂ ಶೌಚಾಲಯ ನಿರ್ಮಿಸಿ ಕೊಡುವ ಗುರಿ ಹೊಂದಲಾಗಿದೆ.
-ಗೀತಾ ಎಸ್., ಗ್ರಾ.ಪಂ. ಪಿಡಿಒ
Related Articles
ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸುವುದು ನಮ್ಮ ಉದ್ದೇಶ. ಅನುದಾನ ಕೊರತೆ ಇದೆ. ಗ್ರಾ.ಪಂ. ಆದಾಯ ಕಡಿಮೆ. ಸರಕಾರದಿಂದ ಅನುದಾನ ಬಂದ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು.
-ಯತಿರಾಜ ರೈ ನೀರ್ಪಾಡಿ,
ಗ್ರಾ.ಪಂ. ಅಧ್ಯಕ್ಷರು
Advertisement