Advertisement

ಮಠ, ಮಂದಿರಗಳಿಂದ ಉತ್ತ ಮ ಸಮಾಜ ನಿರ್ಮಾಣ

09:30 AM Aug 14, 2017 | |

ನಾಗಮಂಗಲ: “ದೇಶದಲ್ಲಿ ಮಠ, ಮಂದಿರಗಳು ಜನರ ಕಷ್ಟ, ದುಃಖಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಸಂಸ್ಕೃತಿ ಬೆಳೆಸುತ್ತಿದ್ದರೆ, ಪ್ರಧಾನಿ ಮೋದಿ ಅವರು ಭಾರತೀಯ ಸಂಸ್ಕೃತಿಯನ್ನು ವಿಶ್ವಾದ್ಯಂತ ಕೊಂಡೊಯ್ಯುವ ಸಮರ್ಥ ರಾಯಭಾರಿಯಾಗಿ ಕೆಲಸ
ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

Advertisement

ಆದಿಚುಂಚನಗಿರಿ ಮಠಕ್ಕೆ ಭಾನುವಾರ ಭೇಟಿ ನೀಡಿದ ಅವರು ಕ್ಷೇತ್ರಾಧಿದೇವತೆಗಳಿಗೆ ಪೂಜೆ ಸಲ್ಲಿಸಿದ ನಂತರ ಬಿ.ಜಿ.ಎಸ್‌. ಸಭಾಭವನದಲ್ಲಿ ನಡೆದ “ದಿ ಸ್ಟೋರಿ ಆಫ್ ಗುರು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. “ಜಗತ್ತಿನಲ್ಲಿ ಅನೇಕ ಆಡಳಿತ ವ್ಯವಸ್ಥೆಗಳು ಬಂದು ಹೋಗಿವೆ. ರಾಜ, ಮಹಾರಾಜರ ಕಾಲದಿಂದಲೂ ಕಲ್ಯಾಣ ಆಡಳಿತಗಳು ನಡೆದಿವೆ. ಇವೆಲ್ಲಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಠ, ಮಂದಿರ ಗಳು ಹಾಗೂ ಸ್ವಾಮೀಜಿಗಳು ಉತ್ತಮ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಇಂತಹ ಸಮಾಜಮುಖೀ ಕಾರ್ಯಗಳಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಆದರ್ಶಪ್ರಾಯ’ ಎಂದರು.

“ಇತಿಹಾಸ ಹೊಂದಿರುವ ಆದಿಚುಂಚನಗಿರಿ ಮಠವು ಅನ್ನ, ಅಕ್ಷರ, ಆರೋಗ್ಯ, ವನಸಂರಕ್ಷಣೆ, ಗೋ ಸಂರಕ್ಷಣೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ. ದೇಶದಲ್ಲಿ ಮೌಡ್ಯ ಅಳಿಸಿ ಸಂಸ್ಕಾರಯುತ ವಿದ್ಯೆಗೆ ನಾಂದಿ ಹಾಡುವ ನಿಟ್ಟಿನಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರು ಸ್ಥಾಪಿ ಸಿರುವ 475ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಯಲ್ಲಿ 1.48 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 18 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಹೊಂದಿದೆ ಎನ್ನುವುದಾದರೇ ಇದೊಂದು ಪವಾಡವೆಂದು ಹೇಳಬಹುದು’ ಎಂದು ಮಠದ ಕಾರ್ಯವನ್ನು ಶ್ಲಾ ಸಿದರು. ಅಲ್ಲದೆ, ಒಂದು ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಾಡುವಷ್ಟು ಕೆಲಸವನ್ನು ಮಠದ ಶ್ರೀಗಳು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಬಿ.ಜಿ.ನಗರದಲ್ಲಿರುವ 2 ಸಾವಿರ ಹಾಸಿಗೆಯುಳ್ಳ ಬೃಹತ್‌ ಆಸ್ಪತ್ರೆ ಸೇರಿ ರಾಜ್ಯದ ಹಲವೆಡೆ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಉತ್ತಮ ಆರೋಗ್ಯ ನೀಡುತ್ತಿರುವ ಶ್ರೀಮಠದ ಕಾರ್ಯವೈಖರಿ ಪವಾಡವೇ ಸರಿ. ಇದರೊಂದಿಗೆ ಸಮಾಜದಲ್ಲಿನ ಅಜಾನ, ಅಂಧಕಾರ ತೊಡೆದುಹಾಕಿ, ಜನಸಾಮಾನ್ಯರ ದುಃಖ ದುಮ್ಮಾನ ಅರಿತು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಮಠಕ್ಕೆ ಸಮಾಜ ಮತ್ತು ಜನಸಾಮಾನ್ಯರ ಬಗ್ಗೆ ಇರುವ ಕಾಳಜಿಯನ್ನು ತೋರುತ್ತದೆ’ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗುಜರಾತ್‌ ರಾಜ್‌ ಕೋಟ್‌ನ ಹರ್ಷ ವಿದ್ಯಾಮಂದಿರದ ಪರಮಾನಂದ ಸರಸ್ವತಿ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ
ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯ ಸಹ ಉಸ್ತುವಾರಿ ಪುರಂದೇಶ್ವರಿ, ಶಾಸಕರಾದ ಆರ್‌.ಅಶೋಕ್‌, ಸಿ.ಟಿ.ರವಿ ಸೇರಿ ಬಿಜೆಪಿಯ ಹಿರಿಯ ಮುಖಂಡರು ಹಾಗೂ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಸಮಾರಂಭದಲ್ಲಿ ಹಾಜರಿದ್ದರು.

Advertisement

ಪುಸ್ತಕ ಬಿಡುಗಡೆಗೊಳಿಸಿದ್ದು ನನ್ನ ಸೌಭಾಗ್ಯ
ಇದೇ ಮೊದಲ ಬಾರಿಗೆ ಪರಮಪವಿತ್ರ ಆದಿಚುಂಚನಗಿರಿ ಮಠಕ್ಕೆ ಆಗಮಿಸಿ ಕಾಲಭೈರವೇಶ್ವರಸ್ವಾಮಿ ದರ್ಶನ ಪಡೆಯುವುದರ ಜತೆಗೆ ಭೈರವೈಕ್ಯ ಬಾಲಂಗಂಗಾಧರನಾಥ ಸ್ವಾಮೀಜಿಯವರ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಮಾಡುವ ಸೌಭಾಗ್ಯ ದೊರಕಿಸಿಕೊಟ್ಟ ನಿರ್ಮಲಾನಂದನಾಥಸ್ವಾಮೀಜಿಯವರಿಗೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಇದು ನನ್ನ ಪಾಲಿಗೆ ಶುಭ ಮತ್ತು ಸೌಭ್ಯಾಗ್ಯದ ದಿನ ಎಂದು ಅಮಿತ್‌ ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next