Advertisement
ಮುಂಬಯಿ: ಬಾಂಬೇ ಹೈಕೋರ್ಟ್‌ನ ಎಪ್ರಿಲ್ ತಿಂಗಳ ಆದೇಶವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದ ಬಳಿಕ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಯ(ಬಿಎಂಸಿ) ಮಹತ್ವಾಕಾಂಕ್ಷೆಯ ಕೋಸ್ಟಲ್ ರೋಡ್ ಯೋಜನೆಯ ನಿರ್ಮಾಣ ಕೆಲಸಗಳು ಪೂರ್ಣ ವೇಗದೊಂದಿಗೆ ನಡೆಯುತ್ತಿವೆ.
Related Articles
Advertisement
ಇದು ಒಂದು ಮೆಗಾ ಯೋಜನೆ ಆಗಿದೆ. ಆದ್ದರಿಂದ, ದಿನದ 24 ತಾಸುಗಳ ಕಾಲ ಕೆಲಸ ನಡೆಯುತ್ತಿದೆ. ಇನ್ನು ಮಳೆಗಾಲದಲ್ಲೂ ಇದನ್ನು ನಿಲ್ಲಿಸಲಾಗುವುದಿಲ್ಲ. ಮಳೆಗಾಲದಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿದೆಯೋ, ಅದನ್ನು ಸಮುದ್ರ ಜೀವನಕ್ಕೆ ಯಾವುದೇ ಧಕ್ಕೆಯಾಗದಂತೆ ಮಾಡಲಾಗುವುದು. ಮಳೆಗಾಲ ಆಗಿದ್ದರೂ ಕೈಯಲ್ಲಿರುವ ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಅಧಿಕಾರಿ ನುಡಿದಿದ್ದಾರೆ. ಬಿಎಂಸಿ ಮತ್ತು ನಗರಕ್ಕೆ ಕೋಸ್ಟಲ್ ರೋಡ್ ಯೋಜನೆಯು ಮಹತ್ವ¨ªಾಗಿದೆ, 4 ವರ್ಷಗಳೊಳಗೆ ಇದರ ನಿರ್ಮಾಣವನ್ನು ಪೂರ್ಣಗೊಳಿಸಲು ಉದ್ದೇಶಿಸಿದೆ.
ಬಾಕಿ ಉಳಿದ ಕೆಲಸಗಳ ಪುನರಾರಂಭಸದ್ಯದ ಮಟ್ಟಿಗೆ ಯಾವುದೇ ಹೊಸ ಕೆಲಸ ಪ್ರಾರಂಭಿಸುತ್ತಿಲ್ಲ. ಕೋರ್ಟ್ ಕೇಸ್‌ಗೆ ಮೊದಲು ನಡೆಯುತ್ತಿದ್ದ ಕೆಲಸಗಳನ್ನು ಈಗ ಪುನರಾರಂಭಿಸಲಾಗಿದೆ. ಇದು ಗಿರ್‌ಗಾಂವ್ ಚೌಪಾಟಿ ಮತ್ತು ಮಲಬಾರ್ ಹಿಲ್ ಅಡಿಯಲ್ಲಿ ಸುರಂಗಗಳ ನಿರ್ಮಾಣಕ್ಕೆ ಸಮುದ್ರ ಗೋಡೆಯ ನಿರ್ಮಾಣ, ಲಾಂಚಿಂಗ್ ಮತ್ತು ರಿಟ್ರೈವಲ್ ಶಾಫ್ಟ್‌ಗಳ ನಿರ್ಮಾಣ ಹಾಗೂ ಕೆಲಸದಲ್ಲಿ ನಿಯೋಜಿಸಲ್ಪಟ್ಟಿರುವ ಎಂಜಿನಿಯರ್‌ಗಳಿಗೆ ಸೈಟ್ ಕಚೇರಿಗಳ ನಿರ್ಮಾಣವನ್ನು ಒಳಗೊಂಡಿದೆ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ. ಮಹತ್ವಾಕಾಂಕ್ಷೆಯ 29.2 ಕಿ.ಮೀ. ಉದ್ದದ ಕೋಸ್ಟಲ್ ರೋಡ್ ಯೋಜನೆಯು ಸುರಂಗಗಳ ಸಂಯೋಜನೆ, ಸಮುದ್ರದಲ್ಲಿ ಭೂಮಿಯ ಪುನಃಸ್ಥಾಪನೆ ಮತ್ತು ಎಲೆವೇಟೆಡ್ ರಸ್ತೆಗಳ ಮೂಲಕ ದಕ್ಷಿಣ ಮುಂಬಯಿಯನ್ನು ಪಶ್ಚಿಮ ಕರಾವಳಿಯ ಉಪನಗರಗಳಿಗೆ ಸಂಪರ್ಕಿಸಲಿದೆ. ಬಿಎಂಸಿಯ ಯೋಜನೆಗಳ ಪ್ರಕಾರ, ಇದು ಪ್ರಿನ್ಸೆಸ್ ಸ್ಟ್ರೀಟ್, ಮರೀನ್ ಲೈನ್ಸ್‌ನಿಂದ
ಪ್ರಾರಂಭವಾಗಿ ಉಪನಗರ ಕಾಂದಿವಲಿಗೆ ಜೋಡಣೆಯಾಗಲಿದೆ. ಇದು 2 ಮೀಸಲಾದ ಬಸ್ ಲೇನ್‌ಗಳೊಂದಿಗೆ 8 ಲೇನ್‌ಗಳನ್ನು ಹೊಂದಿರಲಿದೆ.