Advertisement

ಬಸವಣ್ಣ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ

06:24 PM Mar 16, 2020 | Suhan S |

ದೇವನಹಳ್ಳಿ: ಕಾಯಕವೇ ಕೈಲಾಸ ಎಂಬ ಸಿದ್ದಾಂತದಡಿ ಸಾಮಾಜಿಕ ನ್ಯಾಯದ ಪರಿಕಲ್ಪನೆ , ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂದೇಶ ಸಾರಿದ ಮಹಾನ್‌ ಮಾನವತಾವಾದಿ ಸಮಾಜದ ಸುಧಾರಕ ಬಸವಣ್ಣನವರ ವಚನಗಳು ಸಾರ್ವಕಾಲಿಕ ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ಎಂದು ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಜಿಲ್ಲಾಡಳಿತ ಭವನದ ಮುಂಭಾಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ವೀರಶೈವ ಮಹಾ ಸಭಾ ಹಾಗೂ ತಾಲೂಕು ವೀರಶೈವ ಮಹಾ ಸಭಾವತಿಯಿಂದ ನಿರ್ಮಿಸಲಾಗುತ್ತಿರುವ ಬಸವಣ್ಣ ಪ್ರತಿಮೆಗೆ ಶಂಕುಸ್ಥಾಪನೆ ನೆರೆವೇರಿಸಿ ಅವರು ಮಾತನಾಡಿದರು.

ಈ ಹಿಂದಿನ ಜಿಲ್ಲಾಧಿಕಾರಿಗೆ ಬಿ.ಆರ್‌ ಅಂಬೇಡ್ಕರ್‌, ಬಸವಣ್ಣ, ನಾಡ ಪ್ರಭು ಕೆಂಪೇಗೌಡ ಅವರ ಪ್ರತಿಮೆಗೆ ಜಾಗ ನೀಡಲು ಮನವಿ ಮಾಡಿದಾಗ, ಜಾಗ ಮಂಜೂರು ಮಾಡಿದ್ದರು. ಕೆಂಪೇಗೌಡ ಪ್ರತಿಮೆಗೆ ಈಗಾಗಲೇ ಕಾಮಗಾರಿ ಚಾಲನೆ ನೀಡಲಾಗಿದೆ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ನಿರ್ಮಾಣದ ಶಂಕುಸ್ಥಾಪನೆ ದಿನಾಂಕ ನಿಗದಿ ಪಡಿಸಬೇಕಾಗಿದೆ. ಮೂರು ಪ್ರತಿಮೆಗಳು ಒಂದೇ ಜಾಗದಲ್ಲಿ ನಿರ್ಮಾಣವಾಗಲಿವೆ ಎಂದರು.

ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎಂ,ಎಸ್‌ ರಮೇಶ್‌ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಬಸವಣ್ಣ ನವರ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಪೀಠದಿಂದ 30 ಅಡಿ ಎತ್ತರದ ಪ್ರತಿಮೆಗೆ ಸುಮಾರು 35 ರಿಂದ 50 ಲಕ್ಷ ರೂ. ವೆಚ್ಚವಾಗಲಿದೆ ಎಂದು ಹೇಳಿದರು.

ಶಿವಗಂಗಾ ಕ್ಷೇತ್ರದ ಮೇಲನ ಗವಿ ಮಠ ಶಿವಗಂಗೆಯ ಮಲಯ ಶಾಂತ ಮುನಿ ಶಿವಾಚಾರ್ಯ ಸ್ವಾಮಿಜೀ ಮಾತನಾಡಿ ಅಂಬೇಡ್ಕರ್‌ ಬಸವಣ್ಣ, ನಾಡ ಪ್ರಭು ಕೆಂಪೇಗೌಡ ಅವರ ಪ್ರತಿಮೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಮಾಡುತ್ತಿರುವುದು ಸಂತಸ ತಂದಿದೆ. ಜಿಲ್ಲಾಡಳಿತ ಭವನವು ವಿಧಾನಸೌಧದ ಮಾದರಿಯಾಗಿದೆ. ಬಸವಣ್ಣ ನವರು ಜಾತಿ ಪದ್ಧತಿಯ ವಿರುದ್ದ ಹೋರಾಟ ಮಾಡಿದ ಮಹಾನ್‌ ಮಾನವತವಾದಿ. ಅವರ ಆದರ್ಶಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

Advertisement

ಈ ಸಂದರ್ಭದಲ್ಲಿ ಅಲಗೂರು ಮಠದ ರುದ್ರ ಮುನಿ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ವೀರಶೈವ ಮಹಾ ಸಭಾ ಅಧ್ಯಕ್ಷ ವಿರೂಪಾಕ್ಷ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ , ಪುರಸಭಾ ಸದಸ್ಯ ನಾಗೇಶ್‌, ತಾಲೂಕು ವೀರಶೈವ ಮಹಾ ಸಭಾ ಪ್ರಧಾನ ಕಾರ್ಯದರ್ಶಿ ವಿಜಯ್‌ ಕುಮಾರ್‌, ಪವಾಡ ಬಯಲು ಚಿಂತಕ ಹುಲಿಕಲ್‌ ನಟರಾಜ್‌, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಉಪಾಧ್ಯಕ್ಷೆ ಶೈಲಜಾ, ಮುಖಂಡರಾದ ಕಾಂತರಾಜು, ವೀರಭದ್ರಪ್ಪ, ಉಮೇಶ್‌, ನಾಗಭೂಷನ್‌, ವಿಶ್ವನಾಥ್‌ ಶಾಂತಮೂರ್ತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next