Advertisement
ಮೇಲಿಂದ ಮೇಲೆ ಲಘು ಭೂಕಂಪವಾಗಿ ಭಯಭೀತರಾಗಿದ್ದ ಗ್ರಾಮಸ್ಥರಿಗೆ ತಾತ್ಕಾಲಿಕ ಆಶ್ರಯಕ್ಕಾಗಿ ಮನೆಗಳ ಅಕ್ಕಪಕ್ಕದ ಖಾಲಿ ಜಾಗದಲ್ಲಿ 10×10 ಅಳತೆಯ 853 ತಾತ್ಕಾಲಿಕ ಟಿನ್ ಶೆಡ್ ಗಳನ್ನು ನಿರ್ಮಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒದಗಿಸಲಾಗಿರುವ 3ಕೋಟಿ ರೂ.ಗಳನ್ನು ಕಂದಾಯ ಇಲಾಖೆಯ ವಿಪತ್ತು ಪರಿಹಾರ ನಿಧಿಗೆ ಜಮೆ ಮಾಡಿದ್ದರಿಂದ ಗ್ರಾಮದಲ್ಲಿ ಶೆಡ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
Related Articles
Advertisement
ರಾಜ್ಯ ಸರ್ಕಾರದಿಂದ ಗಡಿಕೇಶ್ವಾರ ಗ್ರಾಮದ ಮನೆಗಳ ಎದುರು ನಿರ್ಮಿಸಲಾಗುತ್ತಿರುವ ಶೆಡ್ ಕೇವಲ 10×10 ಆಗಿದ್ದರಿಂದ ಭೂಕಂಪದ ಸಂದರ್ಭದಲ್ಲಿ ಯಾವುದಕ್ಕೂ ಉಪಯೋಗ ಬರುವುದಿಲ್ಲ. ಶೆಡ್ ಕೇವಲ ಚಪ್ಪರದಂತೆ ನಿರ್ಮಸಲಾಗುತ್ತಿದೆ. ಮಳೆ, ಗಾಳಿ, ಚಳಿ ತಡೆದುಕೊಳ್ಳಲು ಸುತ್ತಲೂ ತಗಡುಗಳಿಲ್ಲದೇ ನಿರ್ಮಾಣ ಮಾಡುತ್ತಿರುವುದರಿಂದ ಗ್ರಾಮಸ್ಥರಿಗೆ ಉಪಯೋಗ ಆಗುವುದಿಲ್ಲವೆಂದು ಹಸರಗುಂಡಗಿ-ಗುರಂಪಳ್ಳಿ ಗ್ರಾಮಸ್ಥರಿಗೆ ನಿರ್ಮಿಸಿಕೊಟ್ಟ ಶೆಡ್ ಮಾದರಿಯಂತೆ ಇರಬೇಕು. ಸದ್ಯ ಶೆಡ್ ನಿರ್ಮಾಣ ಸರಿಯಾಗುತ್ತಿಲ್ಲ. -ಜಿಶಾನ್ ಅಲಿ ಪಟ್ಟೇದಾರ, ಗ್ರಾಪಂ ಉಪಾಧ್ಯಕ್ಷ, ಗಡಿಕೇಶ್ವಾರ
ಗಡಿಕೇಶ್ವಾರ ಗ್ರಾಮಸ್ಥರ ಮನೆ ಎದುರು ಶೆಡ್ ನಿರ್ಮಿಸಲು ಸರ್ಕಾರ ಪ್ರತಿ ಮನೆಗೊಂದರಂತೆ 23,500ರೂ. ಅನುದಾನ ನೀಡಿದೆ. ಆದರೆ ಸರ್ಕಾರದ ಅಂದಾಜಿನಂತೆ ಗುತ್ತಿಗೆದಾರ ಶೆಡ್ ನಿರ್ಮಿಸಬೇಕಾಗುತ್ತದೆ. ಜನರ ಬೇಡಿಕೆಯಂತೆ ಶೆಡ್ ಸುತ್ತ ಟಿನ್ ಹಾಕಲು ಇನ್ನು ಹೆಚ್ಚುವರಿಯಾಗಿ ಐದು ಕೋಟಿ ರೂ.ಅನುದಾನ ಬೇಕಾಗುತ್ತದೆ. ಸೇಡಂ ಶಾಸಕ ರಾಜಕುಮಾರ ಪಾಟೀಲ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರಿಗೆ ಸೂಚಿಸಿದ್ದರಿಂದ ಹೊಸದಾಗಿ ಅಂದಾಜು ಪತ್ರಿಕೆ ಸಿದ್ಧಪಡಿಸಿ ಮೇ 16ರಂದು (ಸೋಮವಾರ) ಸರ್ಕಾರಕ್ಕೆ ಸಲ್ಲಿಸಲಾಗುವುದು. -ಸಿದ್ರಾಮ ದಂಡಗುಲಕರ, ಎಇಇ, ಲೋಕೋಪಯೋಗಿ ಇಲಾಖೆ, ಕಾಳಗಿ
-ಶಾಮರಾವ ಚಿಂಚೋಳಿ