Advertisement

ಊರಿನ ಹಿತಕ್ಕಾಗಿ ದೇಗುಲಗಳ ನಿರ್ಮಾಣ: ಶ್ರೀ ಸಿದ್ಧಲಿಂಗಸ್ವಾಮೀಜಿ

01:15 AM Feb 10, 2019 | Team Udayavani |

ಸೋಮವಾರಪೇಟೆ: ಮನಸ್ಸು ಮತ್ತು ಭಾವನೆಗಳನ್ನು ಪವಿತ್ರಗೊಳಿಸುವ ಸ್ಥಳವೇ ದೇವಾಲಯಗಳು ಎಂದು ತುಮಕೂರು ಸಿದ್ಧಗಂಗಾಮಠದ ಪೀಠಾಧ್ಯ ಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಹೇಳಿದರು.

Advertisement

ಸಮೀಪದ ಗೆಜ್ಜೆಹಣಕೋಡು ಗ್ರಾಮದಲ್ಲಿ ನಿರ್ಮಾಣವಾಗಿರುವ ಶ್ರೀ ಸೋಮೇಶ್ವರ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಊರಿನಲ್ಲಿ ದೇವರ ಬಗ್ಗೆ ನಂಬಿಕೆ ಬೆಳೆಸಿ ಕೊಳ್ಳುವುದರೊಂದಿಗೆ ಧರ್ಮವನ್ನು ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಊರಿನ ಹಿತಕ್ಕಾಗಿ, ಜನರು ಶಾಂತಿಯಿಂದ ಬದುಕಬೇಕು ಎಂಬ ಸದುದ್ದೇಶದಿಂದ ಹಿರಿಯರು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇಂದಿನ ಪೀಳಿಗೆಯೂ ಕೂಡ ದೇವರ ಬಗ್ಗೆ ನಂಬಿಕೆ ಬೆಳೆಸಿಕೊಂಡು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಸಂಸ್ಕೃತಿಯ ಪ್ರತೀಕವಾಗಿದ್ದು, ಮನುಷ್ಯನ ಅಂತರಂಗದ ಪ್ರತಿಬಿಂಬವಾಗಿದೆ. ವಿಜ್ಞಾನ ತಂತ್ರಜ್ಞಾನ ಮುಂದುವರೆದರೂ ಆಂತರಿಕವಾಗಿ ಆಧ್ಯಾತ್ಮದ ದಾರಿದ್ರ್ಯ ಕಾಡುತ್ತಿದೆ.

ವಿಜ್ಞಾನದೊಂದಿಗೆ ಆಧ್ಯಾತ್ಮಿಕತೆ ಯಿದ್ದರೆ ಮಾತ್ರ ಸಮಾಜ ಉನ್ನತಿಯಾಗು ತ್ತದೆ ಎಂದು ಅಭಿಪ್ರಾಯಿಸಿದರು.

Advertisement

ಕಾರ್ಯಕ್ರಮದಲ್ಲಿ ದಾನಿಗಳಾದ ಬೆಂಗಳೂರಿನ ಎ.ಎಂ.ನಾಗೇಶ್‌, ಕೂಗೇ ಕೋಡಿ ಗ್ರಾಮದ ಚಂದ್ರಶೇಖರ್‌, ಹಿರಿಗರ್ಜೆ ಜಿ.ಎಸ್‌.ಉಮೇಶ್‌, ತಬಟಳ್ಳಿ ಶಶಿಕಲ ಕಾಂತರಾಜ್‌, ಗೆಜ್ಜೆಹಣಕೋಡು ಗ್ರಾಮದ ವಾಗೀಶ್‌ ಧರ್ಮಪ್ಪ, ಉದ್ಯಮಿ ನಾಪಂಡ ಮುತ್ತಪ್ಪ ಹಾಗು ಮತ್ತಿತರ ಗಣ್ಯರನ್ನು ಸಮ್ಮಾನಿಸಲಾಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಸರ್ಪಭೂಷಣ ಮಠದ ಶ್ರೀಮಲ್ಲಿಕಾರ್ಜುನ ದೇವರು, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ. ಸೋಮವಾರಪೇಟೆ ವಿರಕ್ತ ಮಠದ ಶ್ರೀ ವಿಶ್ವೇಶ್ವರ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ.ಸದಾಶಿವ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತ ಸಿದ್ದಲಿಂಗಸ್ವಾಮೀಜಿ, ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಸಿದ್ದ ಲಿಂಗಶಿವಚಾರ್ಯ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗಸ್ವಾಮೀಜಿ, ದೇವಾಲಯ ಸಮಿತಿ ಅಧ್ಯಕ್ಷ ವೇದಾಂತಯ್ಯ, ಸೋಮೇಶ್ವರ ಯುವಕ ಸಂಘದ ಅಧ್ಯಕ್ಷ ಜಿ.ಆರ್‌.ಪ್ರಕಾಶ್‌, ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎಸ್‌.ಮಹೇಶ್‌ ಉಪಸ್ಥಿತರಿದ್ದರು.

ದೇವಾಲಯದಲ್ಲಿ ಬೆಳಗ್ಗೆಯಿಂದಲೆ ಪೂಜಾ ಕಾರ್ಯಗಳು ನಡೆದವು. ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಪೂಜೆ, ನೂತನ ಪ್ರತಿಷ್ಠಾಪಿತ ವಿಗ್ರಹಗಳಿಗೆ ಪ್ರಾಣಪ್ರತಿಷ್ಠೆ, ಗಣಪತಿ ಹೋಮ ನಡೆಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

ತಾಯಿಯೇ ಎಲ್ಲ
ತಾಯಿಯ ಸ್ಥಾನ ದೊಡ್ಡದು. ತಾಯಿ ಮಾಡುವ ಸೇವೆಯನ್ನು ಜಗತ್ತಿನಲ್ಲಿ ಯಾರು ಮಾಡಲು ಸಾಧ್ಯವಿಲ್ಲ. ಅಂತಹ ತಾಯಿಂದಿಯರು ಮಕ್ಕಳಿಗೆ ಸಂಸ್ಕಾರವನ್ನು ಬೆಳಸಿ ದೇಶದ ಸಂಪತ್ತಾನ್ನಾಗಿ ಪರಿವರ್ತಿಸಬೇಕು ಎಂದು ಶ್ರೀ ಸಿದ್ಧಲಿಂಗಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next