Advertisement

ಶ್ರೀರಾಮ ಮಂದಿರ ನಿರ್ಮಾಣ; ಕರ ಸೇವಕರ ಶಕ್ತಿ ಪ್ರದರ್ಶನಕ್ಕೆ ಫ‌ಲ

10:42 AM Aug 06, 2020 | mahesh |

ನೆಲಮಂಗಲ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಲಕ್ಷಾಂತರ ಕರಸೇವಕರು ಭಜರಂಗಿಗಳಂತೆ ಶಕ್ತಿ ಪ್ರದರ್ಶನ ಮಾಡಿದ ಫ‌ಲವಾಗಿ ಭವಿಷ್ಯದ ಕನಸು ನನಸಾಗಿದೆ ಎಂದು ಭಜರಂಗದಳ ಜಿಲ್ಲಾ ಸಹ ಸಂಯೋಜಕ ಶಶಿ ಕಿರಣ್‌ ಅಭಿಪ್ರಾಯಪಟ್ಟರು. ತಾಲೂಕಿನ ವಿವರ್ ಕಾಲೋನಿಯಲ್ಲಿ ಶ್ರೀ ರಾಮಾಂಜನೇಯ ಸೇವಾ ಸಮಿತಿ, ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ರಾಮಾಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಕರಸೇವಕರಿಗೆ ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

Advertisement

ಶ್ರೀರಾಮಾಂಜನೇಯ ಸೇವಾ ಸಮಿತಿ ಅಧ್ಯಕ್ಷ ಚನ್ನ ರಾಜು ಮಾತನಾಡಿ, ನಮ್ಮ ದೇವಾಲಯದಿಂದ 1991ರಲ್ಲಿ ತಾಲೂಕಿನ ಪುಣ್ಯಕ್ಷೇತ್ರಗಳಿಂದ ಮಣ್ಣು ಸಂಗ್ರಹಿಸಿ ಇಟ್ಟಿಗೆ ಗಳ ಪೂಜೆ ಮಾಡಿಸಿ ಕಳುಹಿಸಿದ್ದೆವು. ಅದೇ ಸಂದರ್ಭ ದಲ್ಲಿಯೇ ಜ್ಯೋತಿಯಾತ್ರೆ ಸಹ ದೇವಾಲಯದಿಂದ ಆರಂಭ ಮಾಡಲಾಗಿತ್ತು ಎಂದು ಮೆಲುಕು ಹಾಕಿದರು. ಕರಸೇವಕರಿಗೆ ಸನ್ಮಾನ: ಅಯೋಧ್ಯೆ ಹೋರಾಟದಲ್ಲಿ ಕರಸೇವಕರಾಗಿ ಹೋರಾಟ ಮಾಡಿದ್ದ ತಾಲೂಕಿನ ಮೃತ್ಯುಂಜಯ, ಶಿವಾಜಿರಾವ್‌ ಸಿಂಧ್ಯೆ, ಜಗದೀಶ್‌ ಪ್ರಸಾದ್‌, ವರದರಾವ್‌ಸ್ವಾಮಿ, ಲಕ್ಷ್ಮೀನರಸಿಂಹಯ್ಯ ರವರಿಗೆ ಭಜರಂಗದಳ ಹಾಗೂ ಬಿಜೆಪಿ ತಾಲೂಕು ಘಟಕದಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

ಸಿಹಿ ಹಂಚಿ ಸಂಭ್ರಮ: ತಾಲೂಕಿನ ಹಿಂದೂಪರ ಕಾರ್ಯಕರ್ತರು ರಾಮಾಂಜನೇಯ ಸ್ವಾಮಿ ದೇವಾ ಲಯಕ್ಕೆ ಪೂಜೆ ಸಲ್ಲಿಸಿ ಘೋಷಣೆ ಕೂಗಿ ಸಿಹಿ ಹಂಚಿ
ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಭಜರಂಗದಳದ ಜಿಲ್ಲಾ ಸಹ ಸಂಯೋಜಕ್‌ ಶಶಿಕಿರಣ್‌, ಮಾಧ್ಯಮ ಪ್ರಮುಖ್‌ ಪವನ್‌ಕುಮಾರ್‌, ಅಖಂಡ ಪ್ರಮುಖ್‌ ಸ್ನೇಕ್‌ ರಾಜು, ಶ್ರೀ ರಾಮಾಂಜನೇಯ ಸ್ವಾಮಿ ಸೇವಾ ಸಮಿತಿ ಸದಸ್ಯ ರಾದ ಕೃಷ್ಣಪ್ಪ, ರಮೇಶ್‌, ರಾಮಕೃಷ್ಣಪ್ಪ, ಬಿಜೆಪಿ ಜಿಲ್ಲಾ ಎಸ್ಸಿ ಎಸ್ಟಿ ಮೋರ್ಚಾದ ಅಧ್ಯಕ್ಷ ಎಂ.ವಿರಾಮು, ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ನಗರಸಭೆ ಸದಸ್ಯ ಗಣೇಶ್‌, ಜಿ.ವಿ.ಕುಮಾರ್‌, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ, ಮುಖಂಡರಾದ ಪ್ರಕಾಶ್‌, ಪುನೀತ್‌, ರುದ್ರೇಶ್‌, ವಿಜಯಕುಮಾರ್‌, ಕರ್ನಾಟಕ ಜನಸೈನ್ಯ ರಾಜ್ಯಾಧ್ಯಕ್ಷ ನರಸಿಂಹಯ್ಯ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next