Advertisement

LAC ಸಮೀಪ ರನ್‌ವೇ ನಿರ್ಮಾಣ:ಚೀನಾ ವಿರುದ್ಧ ರಕ್ಷಣಾ ವ್ಯವಸ್ಥೆ ಬಿಗಿಗೊಳಿಸಲು ಕೇಂದ್ರ ಚಿಂತನೆ

07:44 PM Aug 13, 2023 | Team Udayavani |

ಲಡಾಖ್‌: ಪೂರ್ವ ಲಡಾಖ್‌ನ ಗಾಲ್ವಾನ್‌ನಲ್ಲಿ ಚೀನಾ ಜತೆಗೆ ಸಂಘರ್ಷ ಉಂಟಾದ ಬಳಿಕ ಭಾರತೀಯ ವಾಯುಪಡೆ (ಐಎಎಫ್) ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಮೂಲ ಸೌಕರ್ಯಗಳನ್ನು ಬಲಗೊಳಿಸಲು ಆರಂಭಿಸಿದೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಎಲ್‌ಎಸಿಯಿಂದ 50 ಕಿ.ಮೀ. ದೂರದಲ್ಲಿ ಇರುವ ನ್ಯೋಮ ಎಂಬ ಸ್ಥಳದಲ್ಲಿ ಹತ್ತು ಸಾವಿರ ಅಡಿ ಉದ್ದದ ರನ್‌ವೇ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ.

Advertisement

ಮುಂದಿನ ಎರಡು ವರ್ಷಗಳಲ್ಲಿ ಆ ಕೆಲಸ ಮುಕ್ತಾಯಗೊಂಡು ಮಿಗ್‌-29 ಅಥವಾ ಸುಖೋಯ್‌ 30 ಎಂಕೆಐ ಯುದ್ಧ ವಿಮಾನಗಳ ಹಾರಾಟ ಅಲ್ಲಿಂದಲೇ ನಡೆಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಕಾಂಕ್ರಿಟ್‌ ರನ್‌ವೇ:
ತನ್ನಲ್ಲಿರುವ ಪೂರ್ಣ ಶಸ್ತ್ರಾಸ್ತ್ರಗಳೊಂದಿಗೆ ಈ ಜೆಟ್‌ಗಳು ಟೇಕಾಫ್ ಮತ್ತು ಲ್ಯಾಂಡಿಂಗ್‌ ಆಗುವಂತೆ ಮಿಗ್‌-29 ಮತ್ತು ಸುಖೋಯ್‌ ಎಂಕೆಐ-30 ಯುದ್ಧ ವಿಮಾನಗಳ ಎಂಜಿನ್‌ಗಳನ್ನು ಮೇಲ್ದರ್ಜೆಗೆ ಏರಿಸಲೂ ವಾಯುಪಡೆ ತೀರ್ಮಾನಿಸಿದೆ. 2010ರಲ್ಲಿ ಎಎನ್‌-32 ಯುದ್ಧ ವಿಮಾನ ಅಲ್ಲಿ ಲ್ಯಾಂಡ್‌ ಆದ ಬಳಿಕ ವಿಶೇಷವಾದ ರನ್‌ ವೇ ನಿರ್ಮಾಣದ ಬಗ್ಗೆ ಐಎಎಫ್ ಚಿಂತನೆ ನಡೆಸಲು ಆರಂಭಿಸಿತ್ತು. ಸದ್ಯ ಅಲ್ಲಿ ರನ್‌ವೇ ಇದ್ದರೂ, ಸಿ-130ಜೆ ಸೂಪರ್‌ ಹರ್ಕುಲಸ್‌ನಂಥ ವಿಶೇಷ ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್‌ಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಕ್ರಿಟ್‌ನಿಂದ ಹೊಸ ರನ್‌ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಹೊಸ ಕಾಮಗಾರಿಯ ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಒಂದು ಬಾರಿ ಉದ್ದೇಶಿತ ಯೋಜನೆ ಪೂರ್ಣಗೊಂಡರೆ, ಪೂರ್ವ ಲಡಾಖ್‌ಗೆ ಕೇಂದ್ರೀಕರಿಸಿ ಐಎಎಫ್ನ ಮಿಗ್‌-29, ಎಸ್‌ಯು-30 ಎಂಕೆಐ ವಿಮಾನಗಳು ಸುಲಭವಾಗಿ ಇಳಿಯಲು ಅನುಕೂಲವಾಗಲಿದೆ. ಜತೆಗೆ ಲೇಹ್‌, ಶ್ರೀನಗರ, ತೋಯೆÕ, ಕಾರ್ಗಿಲ್‌ಗ‌ಳನ್ನು ಕೇಂದ್ರೀಕರಿಸಿ ಐಎಎಫ್ಗೆ ಹೆಚ್ಚಿನ ರೀತಿಯ ರಕ್ಷಣೆ ಮತ್ತು ನಿಗಾ ವಹಿಸಲು ಐಎಎಫ್ಗೆ ಸಾಧ್ಯವಾಗಲಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ನ್ಯೋಮಾಗೆ ಭೇಟಿ ನೀಡುವ ಸಾಧ್ಯತೆ ಇದೆ.

ರನ್‌ವೇ ಉದ್ದ-10,000 ಅಡಿ
ಎಲ್‌ಎಸಿಯಿಂದ ಎಷ್ಟು ದೂರದಲ್ಲಿ?- 50 ಕಿ.ಮೀ.
ಪೂರ್ಣಗೊಳ್ಳಲು ತಗಲುವ ಸಮಯ- 2 ವರ್ಷ

Advertisement

 

Advertisement

Udayavani is now on Telegram. Click here to join our channel and stay updated with the latest news.

Next