Advertisement
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಣಕಲ್ ಗ್ರಾಮಸ್ಥ ಅಭಿಷೇಕ್, ವರ್ಷದ ಹಿಂದೆ ಬಣಕಲ್ ರೈತ ಸಂಪರ್ಕ ಕೇಂದ್ರ ನಿರ್ಮಿಸಲು ಮೆಸ್ಕಾಂ ಪಕ್ಕದಲ್ಲಿ 5 ಕುಂಟೆ ಜಾಗ ಮೀಸಲಿಟ್ಟು ಗ್ರಾಮ ಪಂಚಾಯಿತಿಯಿಂದ ರಸೋಲೇಷನ್ ಮಾಡಲಾಗಿತ್ತು. ಆದರೆ ಮೆಸ್ಕಾಂ ಕಚೇರಿಗೆ ಹೋಗಲು ಈಗಾಗಲೇ 2 ರಸ್ತೆಗಳಿವೆ. ಕಚೇರಿಯ ಮುಂಭಾಗದಲ್ಲಿ ಹಾಗೂ ಬಣಕಲ್ ಸೊಸೈಟಿಯ ಪಕ್ಕದಲ್ಲಿ ಒಂದು ರಸ್ತೆ ಮೆಸ್ಕಾಂ ಕಚೇರಿಯ ಹಿಂಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಮೆಸ್ಕಾಂ ಕಚೇರಿಗೆ ರಸ್ತೆ ಇರುವಾಗ ಮತ್ತೇ ರಸ್ತೆ ಯಾಕೆ ಎಂದು ಗ್ರಾಮ ಪಂಚಾಯಿತಿಯಲ್ಲಿ ದೂರು ನೀಡಿದ್ದೇವೆ. ಕೃಷಿ ಇಲಾಖೆಗೆ ಮೀಸಲಿಟ್ಟ ಜಾಗದಲ್ಲಿ ರಸ್ತೆ ಮಾಡಿದರೆ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಟ್ಟಲು ಜಾಗವೇ ಇಲ್ಲದಂತಾಗುತ್ತದೆ. ರಸ್ತೆ ಬೇಕು ಅಂತ ಯಾರು ಅರ್ಜಿ ಸಲ್ಲಿಸಿದ್ದಾರೆ ಎಂದು ವಿಚಾರಿಸಿದರೆ ಅದಕ್ಕೆ ಅವರ ಉತ್ತರವಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಲು ಸೋಮವಾರ ಹೋದರೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
Related Articles
Advertisement