Advertisement

ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

03:12 PM Nov 10, 2017 | |

ಬೆಳ್ತಂಗಡಿ: ಮುಂಡಾಜೆ, ಕಲ್ಮಂಜ -ಧರ್ಮಸ್ಥಳ ರಸ್ತೆ ಅಭಿವೃದ್ಧಿಗೆ ಸಿ.ಆರ್‌.ಎಫ್‌. ನಿಧಿಯಿಂದ 7 ಕೋ.ರೂ. ಮಂಜೂರಾಗಿದ್ದು, ಕಾಮಗಾರಿಗೆ ಶಾಸಕ ಕೆ. ವಸಂತ ಬಂಗೇರ ಶಿಲಾನ್ಯಾಸ ನೆರವೇರಿಸಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಶೇ.95ರಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ. ಇನ್ನೂ ಆರು ತಿಂಗಳ ಅವಧಿ ಇದ್ದು, ಉಳಿದ ಶೇ.5 ಭರವಸೆ ಈಡೇರಿಸಲಿದ್ದಾರೆ ಎಂದರು.

‘ನುಡಿದಂತೆ ನಡೆದ ಶಾಸಕ’
ಉಜಿರೆ ರಬ್ಬರ್‌ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ಮಾತನಾಡಿ, ಮುಂಡಾಜೆ- ಧರ್ಮಸ್ಥಳ ರಸ್ತೆ ಅಭಿವೃದ್ಧಿಗೆ ಹೋರಾಟ, ಪ್ರತಿಭಟನೆಗಳು ನಡೆದಿವೆ. ರಸ್ತೆ ಅಗತ್ಯದ ಬಗ್ಗೆ ನಾವು ಶಾಸಕರಿಗೆ ಮನವರಿಕೆ ಮಾಡಿದ್ದು ಅದು ಈಗ ಈಡೇರಿದೆ. ಈ ಭಾಗದ ಜನರ 25 ವರ್ಷಗಳ ಸಮಸ್ಯೆಗಳಿಗೆ ಪರಿಹಾರ ದೊರಕಿದೆ ಎಂದರು.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಾಲ್ಕು ಡಯಾಲಿಸಿಸ್‌ ಯಂತ್ರ ಅಳವಡಿಸುವ ಪ್ರಯತ್ನ ದೊಡ್ಡ ಸಾಧನೆಯಾಗಿದೆ. ಶಾಸಕರು ಪಕ್ಷ, ಜಾತಿ, ಮತ ನೋಡದೆ ಕೆಲಸ ಮಾಡಿದ್ದಾರೆ ಎಂದರು. ರಸ್ತೆ ಅಭಿವೃದ್ಧಿಗೆ ಶ್ರಮಿಸಿದ ಶಾಸಕರನ್ನು ಕಲ್ಮಂಜ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ಆದಪ್ಪ ಗೌಡ ಕುಟುಂಬದವರು, ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಅಭಿನಂದಿಸಿದರು. 

ಜಿ.ಪಂ. ಸದಸ್ಯೆ ನಮಿತಾ, ತಾ.ಪಂ. ಸದಸ್ಯರಾದ ಲೀಲಾವತಿ, ಜಯರಾಮ, ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಕಲ್ಮಂಜ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ, ಕಲ್ಮಂಜ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತುಕಾರಾಮ, ವೆಂಕಟ್ರಮಣ ಹೆಬ್ಟಾರ್‌ ಪರಾರಿ, ಬ್ಲಾಕ್‌ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ, ಮುಂಡಾಜೆ ಗ್ರಾ.ಪಂ. ಉಪಾಧ್ಯಕ್ಷೆ ವಸಂತಿ, ಕಿಸಾನ್‌ ಘಟಕದ ಅಧ್ಯಕ್ಷ ನೇಮಿರಾಜ ಗೌಡ, ನಾರಾಯಣ ಗೌಡ ದೇವಸ್ಯ, ಶ್ರೀನಿವಾಸ ರಾವ್‌ ಕಲ್ಮಂಜ, ಆದಪ್ಪ ಗೌಡ ಕಲ್ಮಂಜ, ಗ್ರಾ.ಪಂ. ಸದಸ್ಯರಾದ ಸುಮನಾ ಗೋಖಲೆ ಮುಂಡಾಜೆ, ಶೋಭಾ ನಾರಾಯಣ ಮುಂಡಾಜೆ, ಸುರೇಶ್‌ ಮುಂಡಾಜೆ, ಅಶ್ವಿ‌ನಿ ಹೆಬ್ಟಾರ್‌ ಮುಂಡಾಜೆ, ಕಲ್ಮಂಜ ಗ್ರಾ.ಪಂ. ಉಪಾಧ್ಯಕ್ಷ ದಿನೇಶ್‌ ಗೌಡ, ಅಕ್ರಮ-ಸಕ್ರಮ ಸಮಿತಿ ಸದಸ್ಯ ನಾಗರಾಜ ನಾಯ್ಕ ಪಡೀಲು, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಗ್ರೇಸಿಯನ್‌ ವೇಗಸ್‌, ಗುತ್ತಿಗೆದಾರ ಬಾಲರಾಜ್‌, ಎಂಜಿನಿಯರ್‌ ಕೇಶವ ಮೂರ್ತಿ, ಪಿಡಿಒಗಳಾದ ಸಂಜೀವ ನಾಯ್ಕ ಮುಂಡಾಜೆ, ತಾರಾನಾಥ ನಾಯ್ಕ ಕಲ್ಮಂಜ ಉಪಸ್ಥಿತರಿದ್ದರು.

Advertisement

ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷ ಮೋಹನ್‌ ಗೌಡ ಕಲ್ಮಂಜ ಸ್ವಾಗತಿಸಿದರು. ಶಶಿಧರ್‌ ಠೊಸರ್‌ ಕಾರ್ಯಕ್ರಮ ನಿರೂಪಿಸಿ, ಯಂಗ್‌ ಚಾಲೆಂಜರ್ಸ್‌ ಕ್ರೀಡಾ ಸಂಘ ಮುಂಡಾಜೆಯ ಸಂಚಾಲಕ ನಾಮದೇವ ರಾವ್‌ ವಂದಿಸಿದರು.

ಸಿಆರ್‌ಎಫ್ ನಿಧಿಯಿಂದ ಅನುದಾನ
ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದು, ಸಚಿವರು ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಕೇಂದ್ರ ಸರಕಾರದ ಸಿಆರ್‌ಎಫ್‌ ನಿಧಿಯಿಂದ ಅನುದಾನ ಮಂಜೂರುಗೊಂಡಿದೆ.
– ವಸಂತ ಬಂಗೇರ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next